ಪಂಚಭಾಷೆಗಳಲ್ಲೂ ಸಕ್ಸಸ್ ಕಂಡ ‘ಪುಷ್ಪ’ ಹಾಡುಗಳು : ಸಂಗೀತ ಪ್ರಿಯರಿಗೆ ಧನ್ಯವಾದ ಅರ್ಪಿಸಿದ ದೇವಿಶ್ರೀ ಪ್ರಸಾದ್..!
ಹೈದ್ರಾಬಾದ್ : ಅಲ್ಲು ಅರ್ಜುನ್ ಸಖತ್ ವಿಭಿನ್ನವಾಗಿ ಕಾಣಿಸಿಕೊಳ್ತಾಯಿರುವ ಬಹುನಿರೀಕ್ಷೆ ಪ್ಯಾನ್ ಇಂಡಿಯಾ ಚಿತ್ರ ಪುಷ್ಪ ಈಗಾಗಲೇ ಸಖತ್ ಕ್ರೇಜ್ ಕ್ರಿಯೇಟ್ ಮಾಡಿದೆ.. ಬಾಹುಬಲಿ , ಕೆಜಿಎಫ್ ಹಾದಿಯಲ್ಲಿ ಸಾಗಿರುವ ಚಿತ್ರ 2 ಸರಣಿಗಳಲ್ಲಿ ತೆರೆಕಾಣಲಿದೆ..
ಈ ನಡುವೆ ಸಿನಿಮಾದ ಹಾಡುಗಳು ಸಖತ್ ಸೌಂಡ್ ಮಾಡ್ತಿವೆ.. ಯೂಟ್ಯೂಬ್ ನಲ್ಲಿ ಧೂಳೆಬ್ಬಿಸಿವೆ.. ಶ್ರೀವಲ್ಲಿ ಇರಬಹುದು, ಜೋಕೆ ಜೋಕೆ , ಸಾಮಿ ಸಾಮಿ ಇರಬಹುದು ಮೂರೂ ಹಾಡುಗಳೂ ಕೂಡ ಐದೂ ಭಾಷೆಗಳಲ್ಲಿ ರಿಲೀಸ್ ಆಗಿ ಸಕ್ಸಸ್ ಕಂಡಿದೆ. ಹಾಡುಗಳು ಈಗಾಗಲೇ 250 ಮಿಲಿಯನ್ ವೀವ್ಸ್ ಪಡೆದು ಮುನ್ನುಗುತ್ತಿವೆ.
ಅರವಿಂದ್ ಕೈಯಿಂದ ಪ್ರಶಸ್ತಿ ಪಡೆದ ದಿವ್ಯಾ ಉರುಡುಗ..!
ಹಾಡುಗಳು ಸೂಪರ್ ಹಿಟ್ ಆಗಿರುವ ಖುಷಿಯಲ್ಲಿ ಸಂಗೀತ ನಿರ್ದೇಶಕ ದೇವಿಶ್ರೀ ಪ್ರಸಾದ್ ಸಂಗೀತಪ್ರಿಯರಿಗೆ ಧನ್ಯವಾದಗಳನ್ನ ತಿಳಿಸಿದ್ದಾರೆ. 2021 ನೇ ವರ್ಷ ತನಗೆ ಯಶಸ್ವಿ ವರ್ಷವಾಗಿದೆ ಎಂದಿದ್ದಾರೆ.
ಸುಕುಮಾರ್ ನಿರ್ದೇಶನದಲ್ಲಿ ಸಿನಿಮಾ ಮೂಡಿಬರುತ್ತಿದ್ದು ರಶ್ಮಿಕಾ ಅಲ್ಲುಗೆ ನಾಯಕಿಯಾಗಿದ್ದಾರೆ. ಹಾಡುಗಳಲ್ಲಿ ಅಲ್ಲು ಡಡ್ಯಾನ್ಸ್ ಹೈಲೇಟ್ ಅನ್ನಬಹುದು.. ವಿಭಿನ್ನ ಶೈಲಿಯ ಸ್ಟೆಪ್ಸ್ ಜನರನ್ನ ಆಕರ್ಷಿಸಿದೆ.. ಪುಷ್ಪ ಚಿತ್ರ ಕನ್ನಡ, ತೆಲುಗು, ಹಿಂದಿ, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ಡಿಸೆಂಬರ್ 17ಕ್ಕೆ ಬಿಡುಗಡೆಯಾಗಲಿದೆ..
ಈ ಚಿತ್ರದ ನಾಲ್ಕನೇ ಹಾಡು ʻಏ ಮಗಾ ಇದು ನನ್ನ ಜಾಗʼ ಇದೇ ನವೆಂಬರ್ 19 ಕ್ಕೆ ಬಿಡುಗಡೆಯಾಗಲಿದೆ.