12 ಬೌಂಡರಿ, 8 ಸಿಕ್ಸರ್….. ಟೀಂ ಇಂಡಿಯಾಗೆ ನಡುಕ ಹುಟ್ಟಿಸಿದ್ದ ಈ ಕಿವೀಸ್ ಬ್ಯಾಟ್ಸ್ಮನ್ …
ಮಂಗಳವಾರ (ಜನವರಿ 24) ಇಂದೋರ್‌ನಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ ಅಂತಿಮ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ 90 ರನ್‌ಗಳ ಜಯ ಸಾಧಿಸಿದೆ. ಈ ಮೂಲಕ ಮೂರು ಏಕದಿನ ಸರಣಿಯನ್ನು 3-0 ಅಂತರದಲ್ಲಿ ಕ್ಲೀನ್ ಸ್ವೀಪ್ ಮಾಡಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ ರೋಹಿತ್ ಮತ್ತು ಗಿಲ್ ಅವರ ಶತಕಗಳಿಂದಾಗಿ ನಿಗದಿತ 50 ಓವರ್‌ಗಳಲ್ಲಿ 385 ರನ್‌ಗಳ ಬೃಹತ್ ಸ್ಕೋರ್ ಗಳಿಸಿತು. ಬಳಿಕ ನ್ಯೂಜಿಲೆಂಡ್ 41.2 ಓವರ್‌ಗಳಲ್ಲಿ 295 ರನ್‌ಗಳಿಗೆ ಆಲೌಟಾಯಿತು.
ಈ ಪಂದ್ಯದಲ್ಲಿ ಕಿವೀಸ್ ಸೋತರೂ ತಂಡದ ಬ್ಯಾಟ್ಸ್ ಮನ್ ಡೇವಿಡ್ ಕಾನ್ವೆ ಭರ್ಜರಿ ಶತಕ ಸಿಡಿಸಿದ್ದರು. ಆರಂಭಿಕರಾಗಿ ಬಂದ ಅವರು 100 ಎಸೆತಗಳಲ್ಲಿ 138 ರನ್ ಗಳಿಸಿದರು. ಅವರ ಇನ್ನಿಂಗ್ಸ್‌ನಲ್ಲಿ 12 ಬೌಂಡರಿ ಮತ್ತು 8 ಸಿಕ್ಸರ್‌ಗಳಿದ್ದವು. ಸಹ ಆಟಗಾರರು ಒಬ್ಬೊಬ್ಬರಾಗಿ ಫೆವಿಲಿಯನ್ ಪೆರೇಡ್ ಮಾಡುತ್ತಿದ್ದರೂ ಬೌಂಡರಿ ಹಾಗೂ ಸಿಕ್ಸರ್‌ಗಳ ಮಳೆಗರೆಯುವ ಮೂಲಕ ಭಾರತ ತಂಡಕ್ಕೆ ಭೀತಿ ಹುಟ್ಟಿಸಿದರು.
ಆದರೆ ತಂಡ 32 ಓವರ್‌ಗಳಲ್ಲಿ 230 ರನ್ ಗಳಿಸಿದ್ದಾಗ ಕಾನ್ವೆ ವಿಕೆಟ್ ಒಪ್ಪಿಸಿದರು. ಆ ಬಳಿಕ ಕಿವೀಸ್ ಕುಸಿತ ಕಂಡಿತು.
ಕೆಲ ದಿನಗಳ ಹಿಂದೆ ಪಾಕಿಸ್ತಾನಕ್ಕೆ ಭೇಟಿ ನೀಡಿದ ಕಾನ್ವೇ ಅದ್ಭುತ ಪ್ರದರ್ಶನ ನೀಡಿದ್ದರು. ಏಕದಿನ ಸರಣಿಯಲ್ಲಿ ಶತಕ ಹಾಗೂ ಅರ್ಧ ಶತಕ ಬಾರಿಸಿದ್ದರು. ಇದಕ್ಕೂ ಮುನ್ನ ಎರಡು ಟೆಸ್ಟ್ ಸರಣಿಯಲ್ಲಿ ಶತಕ ಹಾಗೂ ಅರ್ಧಶತಕ ಗಳಿಸಿದ್ದರು. ಆದರೆ, ಭಾರತ ವಿರುದ್ಧದ ಮೊದಲೆರಡು ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದರು. ಆದರೇ ಇಂದೋರ್ ನಲ್ಲಿ ಶತಕ ಸಿಡಿಸಿ ಕಂಬ್ಯಾಕ್ ಮಾಡಿದ್ದರು. ಇತ್ತೀಚಿನ ಶತಕದೊಂದಿಗೆ, ಕಾನ್ವೇ ಭಾರತದ ವಿರುದ್ಧ ODIಗಳಲ್ಲಿ ವೇಗದ ಶತಕ ಗಳಿಸಿದ ಎರಡನೇ ನ್ಯೂಜಿಲೆಂಡ್ ಬ್ಯಾಟ್ಸ್‌ಮನ್ ಎನಿಸಿಕೊಂಡರು. ಈ ಸರಣಿಯ ಮೊದಲ ಪಂದ್ಯದಲ್ಲಿ ಮೈಕಲ್ ಬ್ರೇಸ್ ವೆಲ್ 57 ಎಸೆತಗಳಲ್ಲಿ ಶತಕ ಪೂರೈಸಿದ್ದು ಗೊತ್ತೇ ಇದೆ.
Devon Conway : 12 fours, 8 sixes…. This Kiwis batsman who gave Indian team a shiver…








