madikeri : ಯುಗಾದಿ ಸಂಭ್ರಮದಲ್ಲಿ ಕೊರೊನಾ ರೂಲ್ಸ್ ಮರೆತ ಭಕ್ತರು
ಮಡಿಕೇರಿ : ಮಂಜಿನ ನಗರಿ ಮಡಿಕೇರಿಯ ಪ್ರಸಿದ್ಧ ಓಂಕಾರೇಶ್ವರ ದೇವಾಲಯದಲ್ಲಿ ಭಕ್ತರು ಕೊರೊನಾ ಮರೆತು ಪೂಜೆಗೆ ಮುಗಿಬಿದ್ದಿದ್ದಾರೆ.
ಯುಗಾದಿ ಸಂಭ್ರಮದಲ್ಲಿ ಕೊರೊನಾ ರೂಲ್ಸ್ ಗೆ ಗುಡ್ ಬೈ ಹೇಳಿರುವ ಭಕ್ತರು ಮಾಸ್ಕ್ ಹಾಕಿಕೊಳ್ಳದೆ, ಸಾಮಾಜಿಕ ಅಂತರ ಕಾಯ್ದುಕೊಳ್ಳದೆ, ಮಾಮೂಲಿಯಂತೆ ಎಂದಿನಂತೆ ಪೂಜೆಯಲ್ಲಿ ಭಾಗಿಯಾಗಿದ್ದಾರೆ.
ಯುಗಾದಿ ಹಬ್ಬದ ಅಂಗವಾಗಿ ನಗರದ ಓಂಕಾರೇಶ್ವರ ದೇವಾಲಯದಲ್ಲಿ ಇಂದು ವಿಶೇಷ ಪೂಜೆಗಳು ನಡೆಯುತ್ತಿದೆ.
ನಗರ ನಿವಾಸಿಗಳು, ಪ್ರವಾಸಿಗರು ಸೇರಿದಂತೆ ಜನರು ದೇವಾಲಯಗಳತ್ತ ಮುಖ ಮಾಡುತ್ತಿದ್ದಾರೆ. ಆದರೆ ಬರುವವರು ಕೋವಿಡ್ ನಿಯಮಗಳನ್ನು ಮರೆತಿದ್ದಾರೆ.
ಓಂಕಾರೇಶ್ವರ ದೇವಾಯಲಕ್ಕೆ ನಗರದ ನಿವಾಸಿಗಳು ಮಾತ್ರ ಬರುವುದಿಲ್ಲ. ಪ್ರವಾಸಿಗರು ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ. ಹಾಗಾಗಿ ಸ್ಥಳೀಯರಲ್ಲಿ ಆತಂಕ ಹೆಚ್ಚಿದೆ.










