Dewald Brevis | ದಟಿಜ್ “ಜೂನಿಯರ್ ಎಬಿ”.. ಎಲ್ಲರ ಮನ ಗೆದ್ದ ಸಿಕ್ಸರ್..!
ಮುಂಬೈ ಇಂಡಿಯನ್ಸ್ ತಂಡದ ಯುವ ಆಟಗಾರ ಡೆವಾಲ್ಡ್ ಬ್ರೆವಿಸ್ ತಮ್ಮ ಐಪಿಎಲ್ ಚೊಚ್ಚಲ ಪಂದ್ಯದಲ್ಲಿಯೇ ಎಲ್ಲರ ಗಮನ ಸೆಳೆದಿದ್ದಾರೆ.
ಬುಧವಾರ ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ಬ್ರೆವಿಸ್ 19 ಎಸೆತಗಳನ್ನು ಎದುರಿಸಿ 29 ರನ್ ಗಳನ್ನ ಗಳಿಸಿದರು.
ಅವರ ಇನ್ನಿಂಗ್ಸ್ ನಲ್ಲಿ ಎರಡು ಬೌಂಡರಿ, ಎರಡು ಸಿಕ್ಸರ್ ಗಳಿವೆ. ಆದ್ರೆ ಅವರು ಬಾರಿಸಿದ ಸಿಕ್ಸರ್ ಒಂದು ಮ್ಯಾಚ್ ನ ಹೈಲೆಟ್ ಆಗಿದೆ.
ಮುಂಬೈ ಇನ್ನಿಂಗ್ಸ್ ನ 8 ಓವರ್ ನಲ್ಲಿ ಬ್ರೆವಿಸ್ ಚೆಂಡನ್ನು ನೋಡದೇ ಸಿಕ್ಸರ್ ಬಾರಿಸಿದ್ದಾರೆ.
ಅದೇ ಓವರ್ನಲ್ಲಿ ಬ್ರೆವಿಸ್ ಐದನೇ ಎಸೆತಕ್ಕೆ ಸ್ಟಂಪ್ ಔಟ್ ಆದರು. ಬ್ರೆವಿಸ್ ಸಿಕ್ಸ್ನ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.
ಅಭಿಮಾನಿಗಳು ಯುವ ದಕ್ಷಿಣ ಆಫ್ರಿಕಾದ “ಜೂನಿಯರ್ ಎಬಿ” ಎಂದು ಕರೆಯುತ್ತಾರೆ.
ಬ್ರೆವಿಸ್ ಅಂಡರ್-19 ವಿಶ್ವಕಪ್ನಲ್ಲೂ ಅಬ್ಬರದ ಬ್ಯಾಟಿಂಗ್ ಪ್ರದರ್ಶನ ನೀಡಿದ್ದರು.
ಐಪಿಎಲ್ ನಲ್ಲಿ ಮೆಗಾ ಹರಾಜಿನಲ್ಲಿ ಅವರಿಗೆ ರೂ. ಮುಂಬೈ ಇಂಡಿಯನ್ಸ್ 3 ಕೋಟಿಗೆ ಖರೀದಿಸಿದೆ. dewald-brevis-hits-no-look-six









