IPL 2022 | ನೋ ಸೆಂಟಿಮೆಂಟ್ಸ್.. ಕೊಹ್ಲಿ ಔಟ್ ಸಂಭ್ರಮಿಸಿದ ಚಹಾಲ್ ಪತ್ನಿ
ಅಣ್ಣತಮ್ಮಂದಿರಾಗಲಿ.. ಆತ್ಮೀಯ ಗೆಳೆಯರಾಗಿರಲಿ.. ಒಂದು ಬಾರಿ ಬೇರೆ ಬೇರೆ ತಂಡಗಳ ಪರ ಕಣಕ್ಕಿಳಿದ್ರೆ ಪ್ರತಿಸ್ಪರ್ಧಿಗಳಾಗಿ ಬದಲಾಗಲೇಬೇಕು..! ತಮ್ಮ ತಂಡಕ್ಕೆ ನ್ಯಾಯ ಒದಗಿಸಲು ಜಿದ್ದಾಜಿದ್ದಿ ಪೈಪೋಟಿ ನಡೆಸಬೇಕು.. ಆಗ ಯಾವುದೇ ಸೆಂಟಿಮೆಂಟ್ಸ್ ಬರೋದಿಲ್ಲ.
ಮಂಗಳವಾರ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ರಾಜಸ್ಥಾನ್ ರಾಯಲ್ಸ್ ನಡುವಿನ ಪಂದ್ಯದಲ್ಲೂ ಇಂತಹದ್ದೇ ಘಟನೆ ನಡೆದಿದೆ. ಆರ್ಸಿಬಿ ಸ್ಟಾರ್ ಬ್ಯಾಟ್ಸ್ಮನ್ ವಿರಾಟ್ ಕೊಹ್ಲಿ… ಇಲ್ಲದ ಸಿಂಗಲ್ ಕದಿಯಲು ಯತ್ನಿಸಿದರು. ಆರ್ ಸಿಬಿ ಇನ್ನಿಂಗ್ಸ್ ನ ಒಂಬತ್ತನೇ ಓವರ್ ನಲ್ಲಿ ವಿಲ್ಲೆಗೆ ಯಜುವೇಂದ್ರ ಚಾಹಲ್ ಚಂಡನ್ನ ಸಂಧಿಸಿದ್ರು. ರಾಜಸ್ಥಾನ್ ನಾಯಕ ಸಂಜು ಸ್ಯಾಮ್ಸನ್ ಪಾದರಸದಂತೆ ಚಲಿಸಿ ಚಾಹಲ್ ಕಡೆಗೆ ಚೆಂಡನ್ನು ಎಸೆದರು.
ತಕ್ಷಣ ಚೆಂಡನ್ನು ಸ್ವೀಕರಿಸಿದ ಚಾಹಲ್ ಬೇಲ್ ಗಳನ್ನು ಕೆಡವಿದರು. ಇದರೊಂದಿಗೆ ಕೊಹ್ಲಿ ರನೌಟ್ ಆಗಿ ಪೆವಿಲಿಯನ್ ಸೇರಿಕೊಂಡರು.
ಅಂದಹಾಗೆ ಈ ಹಿಂದೆ ಆರ್ಸಿಬಿ ತಂಡವನ್ನು ಪ್ರತಿನಿಧಿಸಿದ್ದ ಚಹಾಲ್, ತಂಡದ ನಾಯಕರಾಗಿದ್ದ ಕೊಹ್ಲಿ ಜತೆ ಸಾಕಷ್ಟು ಒಡನಾಟ ಹೊಂದಿದ್ದಾರೆ. ಇವರಿಬ್ಬರು ಐಪಿಎಲ್ ಹಾಗೂ ಟೀಂ ಇಂಡಿಯಾದಲ್ಲಿ ಹಲವು ಪಂದ್ಯಗಳಲ್ಲಿ ಜೊತೆಯಾಗಿ ಆಡಿದ್ದಾರೆ. ಕೊಹ್ಲಿಯ ಸಲಹೆ ಮತ್ತು ಸೂಚನೆಗಳ ಮೇರೆಗೆ ಚಹಾಲ್ ತನ್ನ ಯೋಜನೆಗಳನ್ನು ಕಾರ್ಯಗತಗೊಳಿಸುತ್ತಾರೆ. ಆದರೆ, ಮೆಗಾ ಹರಾಜಿನ ಹಿನ್ನೆಲೆಯಲ್ಲಿ ಆರ್ಸಿಬಿ ಫ್ರಾಂಚೈಸಿ ಚಹಾಲ್ ಅವರನ್ನ ಉಳಿಸಿಕೊಳ್ಳಲಿಲ್ಲ.
ಈ ಕ್ರಮದಲ್ಲಿ ರಾಜಸ್ಥಾನ ತಂಡ ಚಹಾಲ್ ಅವರನ್ನು ಖರೀದಿಸಿತ್ತು. ಈ ಹಿನ್ನೆಲೆಯಲ್ಲಿ ಆರ್ಸಿಬಿ ವಿರುದ್ಧದ ಮೊದಲ ಪಂದ್ಯದಲ್ಲಿ ಚಹಲ್ ಬೊಂಬಾಟ್ ಬೌಲಿಂಗ್ ಮಾಡಿದ್ದಾರೆ. 4 ಓವರ್ ಬೌಲ್ ಮಾಡಿ ಕೇವಲ 15 ರನ್ ನೀಡಿ ಎರಡು ವಿಕೆಟ್ ಪಡೆದಿದ್ದಾರೆ. ಈ ನಡುವೆ ಕೊಹ್ಲಿ ರನೌಟ್ ಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.
ವಿರಾಟ್ ರನ್ ಔಟ್ ಆದ ಮರು ಎಸೆತದಲ್ಲಿಯೇ ಚಹಾಲ್, ವಿಲ್ಲಿ ವಿಕೆಟ್ ಪಡೆದರು. ಆಗ ಚಹಾಲ್ ಪತ್ನಿ ಧನಶ್ರೀ ವರ್ಮಾ ಅವರ ಸಂಭ್ರಮಾಚರಣೆ ಅಭಿಮಾನಿಗಳನ್ನು ಆಕರ್ಷಿಸಿದೆ. ಚಹಾಲ್ ಅವರನ್ನ ರಿಟೈನ್ಡ್ ಮಾಡಿಕೊಳ್ಳದ ಕಾರಣ ಧನಶ್ರೀ ಬೆಂಗಳೂರು ತಂಡದ ಮೇಲೆ ಕ್ರೋಧಗೊಂಡಿದ್ದಾರೆ ಅಂತಾ ನೆಟ್ಟಿಗರು ಕಮೆಂಟ್ ಗಳನ್ನು ಮಾಡುತ್ತಿದ್ದಾರೆ. dhanashree-verma-reaction-chahal-takes-rcb-wicket









