ಚೆನ್ನೈ : ತಮಿಳಿನ ಸ್ಟಾರ್ ನಟ ಧನುಷ್ ಹಾಗೂ ಹಿರಿಯ ನಟ, ರಾಜಕಾರಣಿ ವಿಜಯಕಾಂತ್ ನಿವಾಸಕ್ಕೆ ಬಾಂಬ್ ಹಾಕುವುದಾಗಿ ಕಿಡಿಗೇಡಿಯೊಬ್ಬನಿಂದ ಬೆದರಿಕೆ ಕರೆ ಬಂದಿದೆ.
ಇನ್ನೂ ಈ ವಿಚಾರ ಗೊತ್ತಾಗ್ತಿದ್ದಂತೆ ಪೊಲೀಸರು ಇಬ್ಬರ ಮನೆಗಳಿಗೂ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆದರೆ ಎರಡೂ ಮನೆಗಳಿಗೆ ಏನು ಸಿಕ್ಕಿಲ್ಲ.
ಹೀಗಾಗಿ ಇದೊಂದು ಸುಳ್ಳು ಸುದ್ದಿ ಎಂಬುದು ತಿಳಿದುಬಂದಿದೆ.
ಚೆನ್ನೈನ ಧನುಷ್ ಅವರ ಅಭಿರಾಮಪುರಂ ನಿವಾಸ ಹಾಗೂ ವಿಜಯಕಾಂತ್ ಅವರ ವಿರುಗಂಬಕ್ಕಂನ ಮನೆಯಲ್ಲಿ ಬಾಂಬ್ ಇಟ್ಟಿರುವುದಾಗಿ ಎರಡು ಬಾರಿ ಪೊಲೀಸ್ ಕಂಟ್ರೋಲ್ ರೂಂಗೆ ಕರೆ ಬಂದಿದೆ.
ಹುಟ್ಟುಹಬ್ಬದ ದಿನ ‘ರಾಬಿನ್ ಹುಡ್’ ಸಿನಿಮಾ ಅನೌನ್ಸ್ ಮಾಡಿದ ಸಿಂಪಲ್ ಸುನಿ
ಕೂಡಲೇ ಎಚ್ಚೆತ್ತ ಪೊಲೀಸರು, ಇಬ್ಬರ ನಿವಾಸಗಳಿಗೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಬಳಿಕ ಈ ಸುದ್ದಿ ಸುಳ್ಳು ಎಂಬುದು ಗೊತ್ತಾಗಿದೆ.
ಇನ್ನೂ ಈ ಎರಡೂ ಕರೆಗಳನ್ನು ಒಬ್ಬನೇ ಮಾಡಿರುವುದಾಗಿ ತಿಳಿದುಬಂದಿದೆ. ಸದ್ಯ ಆರೋಪಿ ತಲೆಮರೆಸಿಕೊಂಡಿದ್ದು, ಆತನ ಬಂಧನಕ್ಕೆ ಪೊಲೀಸರು ಬಲಿ ಬೀಸಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel