ಧಾರವಾಡದಲ್ಲೇ ಉತ್ಪಾದನೆಯಾಗಲಿದೆ ರಷ್ಯಾದ ಸ್ಪುಟ್ನಿಕ್ ಲಸಿಕೆ..!
ದೇಶದಲ್ಲಿ ಕೋವಿಡ್ 2ನೇ ಅಲೆ ಹೆಚ್ಚಾಗಿದ್ದು, ಲಸಿಕೆ ಅಅಭಿಯಾನವೂ ಪ್ರಗತಿಯೊಲ್ಲಿದೆ.. ಆದ್ರೆ ಹಲವೆಡೆ ಲಸಿಕೆ ಕೊರತೆ ಎದುರಾಗಿದೆ.. ಈ ನಡುವೆ ಧಾರವಾಡದಲ್ಲಿ ರಷ್ಯಾದ ಸ್ಪಟ್ನಿಕ್ ಲಸಿಕೆ ತಯಾರಿಕೆಗೆ ಸಿದ್ಧತೆ ನಡೆದಿದೆ.
ಸ್ಪುಟ್ನಿಕ್ ಲಸಿಕೆಯನ್ನು 2020ರ ಆಗಸ್ಟ್‌ನಲ್ಲಿ ರಷ್ಯಾ ನೋಂದಣಿ ಮಾಡಿಸಿತ್ತು. ಕಳೆದ ಸೆಪ್ಟೆಂಬರ್‌ನಲ್ಲಿ ಹೈದರಾಬಾದ್ ಮೂಲದ ಡಾ ರೆಡ್ಡೀಸ್ ಲ್ಯಾಬೋರೇಟರಿ ಕಂಪನಿ ರಷ್ಯಾ ಜತೆ ಒಪ್ಪಂದ ಮಾಡಿಕೊಂಡು ಕ್ಲಿನಿಕಲ್ ಟ್ರಯಲ್ ಆರಂಭಿಸಿತ್ತು. ಬಳಿಕ ಭಾರತದಲ್ಲಿ ಬಳಸಲು ಕೇಂದ್ರ ಸರ್ಕಾರದಿಂದ ಅನುಮತಿ ಪಡೆದುಕೊಂಡಿತ್ತು.
ಇದೀಗ ಆ ಕಂಪನಿ ಜತೆ ಧಾರವಾಡದ ಶಿಲ್ಪಾ ಬಯೋಲಾಜಿಕಲ್ಸ್ ಪ್ರೈವೇಟ್ ಲಿಮಿಟೆಡ್ ಮೂರು ವರ್ಷಗಳ ಒಪ್ಪಂದ ಮಾಡಿಕೊಂಡಿದೆ. ಧಾರವಾಡದಲ್ಲಿರುವ ತನ್ನ ಘಟಕದಲ್ಲಿ ಸ್ಪುಟ್ನಿಕ್ ಲಸಿಕೆಯನ್ನು ಶಿಲ್ಪಾ ಬಯೋಲಾಜಿಕಲ್ಸ್ ವರ್ಷಕ್ಕೆ 5 ಕೋಟಿ ಲಸಿಕೆಯಂತೆ ಉತ್ಪಾದಿಸಲಿದೆ.
ಶಿಲ್ಪಾ ಬಯೋಲಾಜಿಕಲ್ಸ್ ಲಸಿಕೆಯನ್ನು ಉತ್ಪಾದಿಸಿ ಕೊಡಲಿದೆ. ಡಾ| ರೆಡ್ಡೀಸ್ ಲ್ಯಾಬ್ ವಿತರಣೆ , ಮಾರಾಟ ಹಕ್ಕು ಹೊಂದಿರುತ್ತದೆ. ಒಂದೇ ಡೋಸ್ ನ ಕೊರೊನಾ ಲಸಿಕೆಯಾದ ಸ್ಪುಟ್ನಿಕ್ ಲೈಟ್ ಅನ್ನೂ ಮುಂಬರುವ ದಿನಗಳಲ್ಲಿ ಉತ್ಪಾದಿಸುವ ಸಂಬಂಧ ಎರಡೂ ಸಂಸ್ಥೆಗಳು ಚಿಂತನೆಯಲ್ಲಿವೆ ಎಂದು ಶಿಲ್ಪಾ ಮೆಡಿಕೇರ್ ಕಂಪನಿ ತಿಳಿಸಿದೆ
ಕೊರೊನ ಮಹಾಮಾರಿ:
ಕೊರೊನ ವೈರಸ್ ಹರಡಲು ಬೇಕಾಗಿರುವುದು ನಮ್ಮ ಸಹಾಯ ಆದರೆ ಹರಡದಂತೆ ಮಾಡಬೇಕಾಗಿರುದು ನಮ್ಮ ಸಹಕಾರ”.
ತಪ್ಪದೇ ಹೊರಗೆ ಹೋದಾಗ ಸ್ವಚ್ಛವಾದ ಮಾಸ್ಕ ಧರಿಸಿ.
ಸಾರ್ವಜನಿಕ ಸ್ಥಳಗಳಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಿ .
ಜನ ನಿಬಿಡ ಪ್ರದೇಶದಿಂದ ದೂರವಿರಿ.
ಮನೆ ಸಮೀಪದ ಅಂಗಡಿಯಲ್ಲಿ ಫೋನ್ ಮೂಲಕ ತಮಗೆ ಬೇಕಾದ ದಿನಸಿ ಮತ್ತು ಇತರ ವಸ್ತುಗಳನ್ನು ಪಟ್ಟಿ ಮಾಡಿ ನಿರ್ದಿಷ್ಟ ಸಮಯ ಗೊತ್ತು ಮಾಡಿ.
ನಿಮ್ಮ ಮನೆಗೆ ನೀವೇ ಲಕ್ಷ್ಮಣ ರೇಖೆ ಸೃಷ್ಟಿ ಮಾಡಿ.
ಅನಗತ್ಯ ಓಡಾಟ ಸಲ್ಲದು. ಹೊರಗಡೆ ಹೋಗಿ ಬಂದ ಮೇಲೆ ಬಟ್ಟೆ ಬದಲಾಯಿಸಿ ಸ್ನಾನ ಮಾಡಿ.
ನಮ್ಮ ಹೋರಾಟ ಕೊರೊನ ನಿರ್ಮೂಲನೆಯತ್ತ.
ಇದು ಸಾಕ್ಷ ಟಿವಿಯ ಕಳಕಳಿಯ ವಿನಂತಿ.