ಗ್ಯಾಸ್ ರೀಫಿಲ್ ಬುಕ್ಕಿಂಗ್ ಗಾಗಿ ಮಿಸ್ಡ್ – ಕಾಲ್ ಕೊಟ್ರೆ ಸಾಕು
ಭುವನೇಶ್ವರ: ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಧಮೇರ್ಂದ್ರ ಪ್ರಧಾನ್ ಅವರು ಇಂಡಿಯನ್ ಆಯಿಲ್ ಕಾಪೆರ್Çರೇಷನ್ ಲಿಮಿಟೆಡ್‍ನ ರೀಫಿಲ್ ಬುಕಿಂಗ್ ಮತ್ತು ಹಲವಾರು ಇತರ ಗ್ರಾಹಕ – ಕೇಂದ್ರಿತ ಉಪಕ್ರಮಗಳಿಗಾಗಿ ಮಿಸ್ಡ್ – ಕಾಲ್ ಸೌಲಭ್ಯಕ್ಕೆ ಚಾಲನೆ ನೀಡಿದ್ದಾರೆ.
ಗ್ರಾಹಕರ ಅನುಕೂಲಕ್ಕಾಗಿ ಒಂದೇ ಸಂಖ್ಯೆಯ (8454955555) ಮೂಲಕ ಹೊಸ ಎಲ್ ಪಿಜಿ ಸಂಪರ್ಕ ನೋಂದಾಯಿಸಲು ಮಿಸ್ಡ್-ಕಾಲ್ ಸೌಲಭ್ಯವನ್ನು ಆರಂಭಿಸಲಾಗಿದೆ. ಈ ಕುರಿತು ಸರಣಿ ಟ್ವೀಟ್ ಗಳ ಮೂಲಕ ಮಾಹಿತಿ ನೀಡಿದ್ದಾರೆ. ಅಲ್ಲದೆ ವಿಡಿಯೋವೊಂದನ್ನು ಶೇರ್ ಮಾಡಿಕೊಂಡಿದ್ದಾರೆ.
https://twitter.com/i/status/1344992960354476034
ಗ್ಯಾಸ್ ಬುಕ್ ಮಾಡಲು, ಹೊಸ ಗ್ಯಾಸ್ ಕನೆಕ್ಷನ್ ಹಾಕಿಸಿಕೊಳ್ಳಲು ಇನ್ನುಂದೆ ಈ (8454955555) ನಂಬರ್ ಗೆ ಮಿಸ್ ಕೊಟ್ರೆ, ಸುಲಭ ಮತ್ತು ಸರಳವಾಗಿ ಇನ್ನು ಕೆಲಸ ಮುಗಿಯುತ್ತೆ.
ಪ್ರಧಾನಿ ನರೇಂದ್ರ ಮೋದಿ ಅವರ ಡಿಜಿಟಲ್ ಇಂಡಿಯಾ ದೃಷ್ಟಿಯ ಅನುಗುಣವಾಗಿ ಈ ಗ್ರಾಹಕ – ಕೇಂದ್ರಿತ ಉಪಕ್ರಮಗಳು ಎಲ್ ಪಿಜಿ ರೀಫಿಲ್ ಬುಕಿಂಗ್ ಮತ್ತು ಹೊಸ ಸಂಪರ್ಕ ನೋಂದಣಿಯನ್ನು ಹೆಚ್ಚು ಅನುಕೂಲಕರ ಮತ್ತು ಉಚಿತವಾಗಿ ಮಾಡುತ್ತದೆ.
ಇದು ವಿಶೇಷವಾಗಿ ವೃದ್ಧರಿಗೆ ಮತ್ತು ಗ್ರಾಮೀಣ ಪ್ರದೇಶದವರಿಗೆ ಪ್ರಯೋಜನಕಾರಿಯಾಗಲಿ ಎಂದು ಸಚಿವರು ಅಭಿಪ್ರಾಯಪಟ್ಟಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








