ಲಾಕ್ ಡೌನ್ ಟೈಮ್ ನಲ್ಲಿ ಕ್ರಿಕೆಟ್ ಅಭಿಮಾನಿಗಳಿಗೆ ಇನ್ನೊಂದು ದೊಡ್ಡ ಚಿಂತೆಯಾಗಿದೆ. ಟಿ-ಟ್ವೆಂಟಿ ವಿಶ್ವಕಪ್ ನಡೆಯುವ ಸಾಧ್ಯತೆ ಕಮ್ಮಿ. ಐಪಿಎಲ್ ಟೂರ್ನಿ ನಡೆಯುವುದು ಕೂಡ ಕಷ್ಟ ಕಷ್ಟ… ಹೀಗಾಗಿ ಟೀಮ್ ಇಂಡಿಯಾದ ನಾಯಕ ಮಹೇಂದ್ರ ಸಿಂಗ್ ಧೋನಿ ಯಾವಾಗ ನಿವೃತ್ತಿಯಾಗುತ್ತಾರೆ ಅನ್ನೋ ಪ್ರಶ್ನೆ ಈಗ ಹುಟ್ಟಿಕೊಂಡಿದೆ.
ಬಹುತೇಕ ಕ್ರಿಕೆಟ್ ಅಭಿಮಾನಿಗಳು ಧೋನಿಯ ವಿದಾಯದ ಪಂದ್ಯವನ್ನು ಎದುರು ನೋಡ್ತಾ ಇದ್ದಾರೆ. 2019ರ ವಿಶ್ವಕಪ್ ಸೋಲಿನ ನಂತರ ಧೋನಿ ಟೀಮ್ ಇಂಡಿಯಾದಲ್ಲಿ ಕಾಣಿಸಿಕೊಂಡಿಲ್ಲ. ಹೀಗಾಗಿ ಟಿ-ಟ್ವೆಂಟಿ ವಿಶ್ವಕಪ್ ನಲ್ಲಿ ಆಡಿ ಕ್ರಿಕೆಟ್ ಬದುಕಿಗೆ ಅರ್ಥಪೂರ್ಣ ವಿದಾಯ ಹೇಳ್ತಾರೆ ಅನ್ನೋ ಆಶಾಭಾವನೆ ಇತ್ತು. ಆದ್ರೆ ಇದಕ್ಕೆ ಕೊರೋನಾ ವೈರಸ್ ಅಡ್ಡಿಯನ್ನುಂಟು ಮಾಡಿದೆ.
ಮತ್ತೊಂದೆಡೆ, ಐಪಿಎಲ್ ಟೂರ್ನಿಯಲ್ಲಾದ್ರೂ ಧೋನಿಯ ಕಟ್ಟಕಡೆಯ ಬ್ಯಾಟಿಂಗ್ ವೈಖರಿಗಳನ್ನು ನೋಡಬಹುದು ಎಂಬ ಆಸೆಗೆ ಕೋವಿಡ್ -19 ವಿಘ್ನವಾಗಿ ಕಾಡುತ್ತಿದೆ. ಒಂದು ವೇಳೆ ಐಪಿಎಲ್ ಅಥವಾ ಟಿ-ಟ್ವೆಂಟಿ ವಿಶ್ವಕಪ್ ಟೂರ್ನಿ ನಡೆದ್ರೂ ಕಿಕ್ಕಿರಿದ ಪ್ರೇಕ್ಷಕರ ನಡುವೆ ನಡೆಯುವುದು ಅನುಮಾನ. ಆದ್ರಿಂದ ಟೀಮ್ ಇಂಡಿಯಾ ಯಶಸ್ವಿ ಹಾಗೂ ಚಾಣಕ್ಯ ನಾಯಕನಿಗೆ ಸದಾ ನೆನಪಿನಲ್ಲಿ ಉಳಿಯುವಂತಹ ವಿದಾಯ ನೀಡುವುದು ಸದ್ಯದ ಪರಿಸ್ಥಿತಿಯಲ್ಲಿ ಸಾಧ್ಯವೇ ಇಲ್ಲ.
ಈಗಾಗಲೇ ಕ್ರಿಕೆಟ್ ಬದುಕಿನ ಮುಸ್ಸಂಜೆಯ ದಿನಗಳಲ್ಲಿ ಇರುವ ಧೋನಿ 2022ರ ವಿಶ್ವಕಪ್ ತನಕ ಆಡಲು ಸಾಧ್ಯವೇ ಇಲ್ಲ. ಹಾಗೇ ಮುಂದಿನ ಐಪಿಎಲ್ ನಲ್ಲೂ ಆಡುವ ಸಾಧ್ಯತೆಗಳಿಲ್ಲ. ಇದನ್ನೆಲ್ಲಾ ಅರಿತುಕೊಂಡಿರುವ ಕ್ರಿಕೆಟ್ ಅಭಿಮಾನಿಗಳು ಧೋನಿ ವಿದಾಯ ಹೇಳ್ತಾರೆ ಅಂತ ಗುಸು ಗುಸು ಸುದ್ದಿಗಳನ್ನು ಸಾಮಾಜಿಕ ಜಾಲ ತಾಣದಲ್ಲಿ ಹಾಕೊಂಡಿದ್ದಾರೆ. ಇದ್ರಿಂದ ಕುಪಿತಗೊಂಡಿರುವ ಮಿಸ್ಸೆಸ್ ಧೋನಿ ಅಂದ್ರೆ ಸಾಕ್ಷಿ ಸಿಂಗ್ ಅವರು ಅಭಿಮಾನಿಗಳ ವಿರುದ್ಧವೇ ತಿರುಗಿಬಿದ್ದಿದ್ದಾರೆ. ಕೋವಿಡ್ -19ನಿಂದ ಜನರು ಮಾನಸಿಕವಾಗಿ ಜರ್ಜರಿತರಾಗಿದ್ದಾರೆಎಂಬುದು ನನಗೆ ಗೊತ್ತಿದೆ. ಆದ್ರೆ ಧೋನಿ ನಿವೃತ್ತಿಯ ಸುದ್ದಿ ಸುಳ್ಳು ಅಂತ ತನ್ನ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದರು. ಹಾಗೇ ಅಷ್ಟೇ ಬೇಗ ಆ ಪೋಸ್ಟರ್ ಅನ್ನು ಡಿಲೀಟ್ ಕೂಡ ಮಾಡಿದ್ದಾರೆ.
ಒಟ್ಟಿನಲ್ಲಿ ಎರಡು ವಿಶ್ವಕಪ್‍ಗಳನ್ನು ಗೆಲ್ಲಿಸಿಕೊಟ್ಟಿರುವ ಟೀಮ್ ಇಂಡಿಯಾದ ಕೂಲ್ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿಯವರ ಕ್ರಿಕೆಟ್ ಬದುಕು ಕೊರೋನಾ ವೈರಸ್ ನಿಂದ ತೂಗೂಯ್ಯಾಲೆಯಲ್ಲಿದೆ.








