Rohit sharma | ಧೋನಿ, ವಿರಾಟ್ ಅಲ್ಲ.. ರೋಹಿತ್ ಬೆಸ್ಟ್ ಕ್ಯಾಪ್ಟನ್..!
ಟೀಂ ಇಂಡಿಯಾ ನಾಯಕನಾಗಿ ರೋಹಿತ್ ಶರ್ಮಾ ಟಿ20ಯಲ್ಲಿ ಮತ್ತೊಂದು ಮೈಲಿಗಲ್ಲು ನಿರ್ಮಿಸಿದ್ದಾರೆ.
ತವರಿನಲ್ಲಿ ಅತ್ಯಧಿಕ ಟಿ 20 ಗೆಲುವುಗಳನ್ನ ಸಾಧಿಸಿ ನಾಯಕರ ಪಟ್ಟಿಯಲ್ಲಿ ರೋಹಿತ್ ಶರ್ಮಾ ಅಗ್ರಸ್ಥಾನಕ್ಕೆರಿದ್ದಾರೆ.
ಇಲ್ಲಿಯವರೆಗೆ ಟಿ 20 ಯಲ್ಲಿ ರೋಹಿತ್ ಶರ್ಮಾ ನಾಯಕರಾಗಿ 16ಪಂದ್ಯಗಳನ್ನ ಗೆದ್ದಿದ್ದಾರೆ.
ತವರಿನಲ್ಲಿ ಅತ್ಯಂತ ಯಶಸ್ವಿ ಟಿ20 ನಾಯಕರ ಪಟ್ಟಿಯಲ್ಲಿ ರೋಹಿತ್ ಈಗಾಗಲೇ ಕೊಹ್ಲಿ (13) ಮತ್ತು ಎಂಎಸ್ ಧೋನಿ (10) ಅವರನ್ನು ಹಿಂದಿಕ್ಕಿದ್ದಾರೆ.
ನಾಯಕನಾಗಿ 27 ಟಿ20 ಪಂದ್ಯಗಳಲ್ಲಿ ರೋಹಿತ್ ಶರ್ಮಾ ಅವರ 23ನೇ ಜಯ ಇದಾಗಿದೆ. .
ಶಾರ್ಟ್ ಫಾರ್ಮೆಟ್ ನಲ್ಲಿ ಇದು ಟೀಂ ಇಂಡಿಯಾಗೆ ಸತತ 11ನೇ ಜಯವಾಗಿದೆ.
ಟಿ20 ವಿಶ್ವಕಪ್ ನಲ್ಲಿ ಅಫ್ಘಾನಿಸ್ತಾನ ವಿರುದ್ಧ ಜಯ ಸಾಧಿಸುವ ಮೂಲಕ ಟೀಂ ಇಂಡಿಯಾ ಗೆಲುವಿನ ಓಟ ಮುಂದುವರಿಸಿದೆ.
Dhoni not Vira Rohit Best Captain









