ಮಹೇಂದ್ರ ಸಿಂಗ್ ಧೋನಿ ಕಳೆದ ಒಂದು ವರ್ಷದಿಂದ ಕ್ರಿಕೆಟ್‍ನಿಂದ ದೂರವೇ ಉಳಿದುಕೊಂಡಿದ್ದಾರೆ. ಹಾಗಂತ ಕ್ರಿಕೆಟ್‍ಗೆ ವಿದಾಯ ಹೇಳುವ ಚಿಕ್ಕ ಸುಳಿವನ್ನು ನೀಡುತ್ತಿಲ್ಲ. ಇದೀಗ ಕೊರೋನಾ ವೈರಸ್ ನಿಂದ ಐಪಿಎಲ್ ಮತ್ತು ಟಿ-ಟ್ವೆಂಟಿ ಟೂರ್ನಿಯು ನಡೆಯುವುದು ಅನುಮಾನವಾಗಿದೆ. ಹೀಗಾಗಿಯೇ ಧೋನಿ ಕ್ರಿಕೆಟ್ ಬದುಕಿಗೆ ನಿವೃತ್ತಿ ಹೇಳ್ತಾರೆ ಅನ್ನೋ ಸುದ್ದಿಗಳು ಕೇಳಿಬರುತ್ತಿವೆ. ಈ ನಡುವೆ ಧೋನಿ ಪತ್ನಿ ಸಾಕ್ಷಿ ಧೋನಿಯ ನಿವೃತ್ತಿಯ ಬಗ್ಗೆ ಎದ್ದಿರುವ ಗಾಸಿಪ್‍ಗಳಿಗೆ ಸಿಡಿಮಿಡಿಗೊಂಡಿದ್ದರು. ಅಲ್ಲದೆ ನಿವೃತ್ತಿಯ ಬಗ್ಗೆ ಸ್ಪಷ್ಟನೆಯನ್ನು ನೀಡಿದ್ದರು.
ಆದ್ರೆ ಧೋನಿ ಮಾತ್ರ ಯಾವುದಕ್ಕೂ ತಲೆಕೆಡಿಸಿಕೊಳ್ಳುತ್ತಿಲ್ಲ. ಲಾಕ್‍ಡೌನ್‍ನಿಂದಾಗಿ ಧೋನಿ ಮನೆಯಲ್ಲೇ ಆರಾಮವಾಗಿದ್ದಾರೆ. ಸಾಮಾಜಿಕ ಜಾಲ ತಾಣದಿಂದ ದೂರವೇ ಉಳಿದುಕೊಂಡಿರುವ ಧೋನಿ ಈಗ ಮತ್ತೆ ಸುದ್ದಿಯಲ್ಲಿದ್ದಾರೆ. ಲಾಕ್‍ಡೌನ್ ಟೈಮ್ ನಲ್ಲಿ ಧೋನಿ ತನ್ನ ಮಗಳು ಝೀವಾ ಜೊತೆ ಆಟವಾಡುತ್ತಿದ್ದಾರೆ. ತನ್ನ ಪ್ರೀತಿಯ ನಾಯಿಗಳ ಜೊತೆಯೂ ಚೆಲ್ಲಾಟವಾಡುತ್ತಿದ್ದಾರೆ. ಹಾಗೇ ತನ್ನ ನೆಚ್ಚಿನ ಬೈಕ್‍ಗಳೊಂದಿಗೆ ತನ್ನ ಫಾರ್ಮ್ ಹೌಸ್‍ನಲ್ಲಿ ಹಾಯಾಗಿ ರೈಡಿಂಗ್ ಮಾಡುತ್ತಾ ಕಾಲ ಕಳೆಯುತ್ತಿದ್ದಾರೆ.
View this post on Instagram
ಇದೀಗ ಧೋನಿ ತನ್ನ ಮಡದಿ ಸಾಕ್ಷಿ ಮಾಡಿರೋ ವಿಡಿಯೋವೊಂದನ್ನು ತನ್ನ ಸಾಮಾಜಿಕ ಜಾಲ ತಾಣದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ರಾಂಚಿಯಲ್ಲಿ ಆಹ್ಲಾದಕರವಾದ ವಾತಾವರಣವಿದೆ. ಮೋಡ-ಮಿಂಚು, ಸಿಡಿಲಿನ ನಡುವೆ ಮಳೆಯಾಗುವ ಸನ್ನಿವೇಶವನ್ನು ಸಾಕ್ಷಿ ಸಿಂಗ್ ವಿಡಿಯೋ ಮಾಡುತ್ತಿದ್ದರು. ಆಗ ಧೋನಿ ತನ್ನ ಪ್ರೀತಿಯ ಬೈಕಿನಲ್ಲಿ ಮಗಳನ್ನು ಕೂರಿಸಿಕೊಂಡು ರೈಡ್ ಮಾಡುತ್ತಿರುವ ದೃಶ್ಯವೂ ಸೆರೆಯಾಗಿದೆ. ಹಾಗೇ ಸಾಕ್ಷಿ ಸಿಂಗ್ ಅವರು ಮಗಳು ಝೀವಾಗೆ ಮೋಡ, ಗಾಳಿ, ಮಿಂಚು ಹಾಗೂ ಮಳೆಯ ಬಗ್ಗೆಯೂ ಪಾಠವನ್ನು ಮಾಡುತ್ತಿದ್ರು. ಈ ನಡುವೆ, ಝೀವಾ ಚಿಕ್ಕವಳಿರುವಾಗಮಿಂಚಿಗೆ ಹೆದರುತ್ತಿದ್ದಳು ಅಂದಾಗ, ನಾನು ಹೆದರಲ್ಲ. ನನಗೆ ಮಿಂಚು ಇಷ್ಟ ಅಂತಾಳೆ ಝೀವಾ.
ಈ ನಡುವೆ, ಚೆನ್ನೈ ಸೂಪರ್ ಕಿಂಗ್ಸ್ ತಂಡದ ಇನ್‍ಸ್ಟ್ರಾಗಾಂ ಲೈವ್ ಕಾರ್ಯಕ್ರಮದಲ್ಲಿ ಸಾಕ್ಷಿ ಸಿಂಗ್ ಧೋನಿಯ ನೋಡಿದಾಗ ಹೇಗೆ ಆಕರ್ಷಿತರಾದ್ರು ಎಂಬ ವಿಷ್ಯವನ್ನು ಬಹಿರಂಗಪಡಿಸಿದ್ದರು. ಒಂದು ವೇಳೆ ನಾನು ಧೋನಿಯನ್ನು ಉದ್ದ ಕೂದಲಿನಲ್ಲಿ ಮೊದಲ ಭೇಟಿಯಲ್ಲಿ ನೋಡುತ್ತಿದ್ರೆ ಇಷ್ಟವಾಗುತ್ತಿರಲಿಲ್ಲವೋ ಏನು ಅಂದ್ರು. ಯಾಕಂದ್ರೆ ಧೋನಿಯ ಉದ್ದ ಕೂದಲಿನ ಕೇಶ ವಿನ್ಯಾಸ ಕೆಟ್ಟ ಕೇಶ ವಿನ್ಯಾಸ ಅಂತ ಸಾಕ್ಷಿ ಸಿಂಗ್ ಹೇಳಿದ್ದರು. ಆ ಕೇಶ ವಿನ್ಯಾಸದಲ್ಲಿರುತ್ತಿದ್ರೆ ನಾನು ಅವರನ್ನು ನೋಡುತ್ತನೂ ಇರಲಿಲ್ಲ ಎಂದು ಹೇಳಿದ್ದರು.
ಒಟ್ಟಿನಲ್ಲಿ ಧೋನಿಯ ಕ್ರಿಕೆಟ್ ಬದುಕಿಗೆ ಯಾವಾಗ ನಿವೃತ್ತಿ ಘೋಷಣೆ ಮಾಡ್ತಾರೋ ಗೊತ್ತಿಲ್ಲ. ಆದ್ರೆ ಧೋನಿ ತನ್ನ ಬದುಕನ್ನು ತಾನು ಅಂದುಕೊಂಡಂತೆ ಎಂಜಾಯ್ ಮಾಡುತ್ತಿದ್ದಾರೆ. ಬಿಂದಾಸ್ ಆಗಿರೋ ಧೋನಿ ಬಿಂದಾಸ್ ಆಗಿಯೇ ಇದ್ದಾರೆa








