M S Dhoni | ಧೋನಿ ಅಭಿಮಾನಿಗಳಿಗೆ ಶುಭಸುದ್ದಿ
ಮುಂದಿನ ಐಪಿಎಲ್ ನಲ್ಲಿ ಧೋನಿ ಜಲ್ವಾ
ಚೆನ್ನೈಗೆ ಮಹೇಂದ್ರ ಸಿಂಗ್ ಧೋನಿ ಕ್ಯಾಪ್ಟನ್
ಕೊನೆಯ ಐಪಿಎಲ್ ಆಡಲಿರುವ ಮಿಸ್ಟರ್ ಕೂಲ್
ಚೆನ್ನೈನಲ್ಲಿಯೇ ಕೊನೆ ಪಂದ್ಯ ಎಂದಿದ್ದ ಧೋನಿ
ಮಿಸ್ಟರ್ ಕೂಲ್ ಮಹೇಂದ್ರ ಸಿಂಗ್ ಧೋನಿ ಅವರ ಅಭಿಮಾನಿಗಳಿಗೆ ಶುಭಸುದ್ದಿ ಇಲ್ಲಿದೆ.
ಮುಂದಿನ ಇಂಡಿಯನ್ ಪ್ರಿಮಿಯರ್ ಲೀಗ್ ನಲ್ಲಿ ಧೋನಿ ಕ್ಯಾಪ್ಟನ್ಸಿಯ ಜಲ್ವಾ ಮುಂದುವರೆಯಲಿದೆ.
ಹೌದು..!! ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಮಹೇಂದ್ರ ಸಿಂಗ್ ಧೋನಿಯೇ ನಾಯಕರಾಗಿರಲಿದ್ದಾರೆ.
2023ರ ಇಂಡಿಯನ್ ಪ್ರಿಮಿಯರ್ ಲೀಗ್ ಧೋನಿ ಪಾಲಿಗೆ ಕೊನೆಯ ಆವೃತ್ತಿಯಾಗಿರಲಿದೆ.
ಹೀಗಾಗಿ ಅವರೇ ತಂಡವನ್ನು ಮುನ್ನಡೆಸಲಿದ್ದಾರೆ ಎಂದು ತಿಳಿದುಬಂದಿದೆ.
2022ರ ಇಂಡಿಯನ್ ಪ್ರಿಮಿಯರ್ ಲೀಗ್ ಶುರುವಾಗುವುದಕ್ಕೆ ಎರಡು ದಿನಗಳ ಮುಂಚೆ ಧೋನಿ ಚೆನ್ನೈ ನಾಯಕತ್ವದಿಂದ ಕೆಳಗಿಳಿದಿದ್ದರು.

ಆ ಮೂಲಕ ರವೀಂದ್ರ ಜಡೇಜಾಗೆ ನಾಯಕತ್ವ ಸಿಕ್ಕಿತ್ತು. ಆದ್ರೆ ಜಡ್ಡು ನಾಯಕತ್ವದಲ್ಲಿ ಚೆನ್ನೈ ತಂಡ ಹೀನಾಯ ಪ್ರದರ್ಶನ ನೀಡಿತ್ತು.
ಹೀಗಾಗಿ ಕೊನೆಗೆ ಧೋನಿಯೇ ನಾಯಕತ್ವವನ್ನು ವಹಿಸಿಕೊಂಡರು.
ಅದರಂತೆ ಮುಂದಿನ ಸೀಸನ್ ನಲ್ಲಿಯೂ ಧೋನಿಯೇ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಮುನ್ನಡೆಸಲಿದ್ದಾರೆ ಎಂದು ಹೇಳಲಾಗುತ್ತಿದೆ.
ಆದ್ರೆ ಈ ಬಗ್ಗೆ ಫ್ರಾಂಚೈಸಿ ಕಡೆಯಿಂದ ಯಾವುದೇ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ.