ಧೂಮ್ ನಲ್ಲಿ ಈ ಬಾರಿ ಖಳನಾಯಕರಾಗಿ ಬರುತ್ತಿರೋದು ಬಾಲಿವುಡ್ ನ ‘ಬಾದ್ ಷಾ’ ‘ಡಿಪ್ಪಿ’..!
ಧೂಮ್… ಬಾಲಿವುಡ್ ಸಿನಿಮಾದ ಈ ಸೀರೀಸ್ ತನ್ನದೇ ಆದ ದೊಡ್ಡ ಅಭಿಮಾನಿ ಬಳಗವನ್ನೇ ಹೊಂದಿದೆ. ಈ ಸಿನಿಮಾದ ಕಥೆ ಆಕ್ಷನ್ ಸೀನ್ಸ್ ಥ್ರಿಲ್ಲಿಂಗ್ ಎಲಿಮೆಂಟ್ಸ್ ಮ್ಯೂಸಿಕ್ ಎಲ್ಲವೂ ಪ್ರೇಕ್ಷಕರನ್ನ ಸಖತ್ ಥ್ರಿಲ್ ಗೊಳಿಸುತ್ತೆ. ಖಳನಾಯಕರನ್ನೇ ಹೀರೋಗಳ ರೀತಿ ತೋರಿಸೋದು ಈ ಸಿನಿಮಾದ ವಿಶೇಷತೆ ವಿಶೇಷತೆ. ಈ ಸಿನಿಮಾದ ಸೀರೀಸ್ ಗಳನ್ನ ಇಷ್ಟ ಪಡೆದೇ ಇರೋ ಜನರೇ ಇಲ್ಲ ಅನ್ಸುತ್ತೆ. ಇನ್ ಫ್ಯಾಕ್ಟ್ ಹಾಲಿವುಡ್ ರೇಂಜ್ ಗೆ ಈ ಸೀರೀಸ್ ಮೂಡಿಬರುತ್ತೆ. ಅದೇ ಪ್ರೇಕ್ಷಕರು ಆಕರ್ಷಿತರಾಗುವುದಕ್ಕೆ ಪ್ರಮುಖ ಕಾರಣವೂ ಇರಬಹುದು.
ಅದ್ರಲ್ಲೂ ಈ ಸೀರೀಸ್ ನಲ್ಲಿ ನಾಯಕರು ಬದಲಾಗುತ್ತಲೇ ಇರುತ್ತಾರೆ. ಆದ್ರೆ ಹೆಚ್ಚು ಜನರಿಗೆ ಇಷ್ಟವಾದ , ಅವರಿಷ್ಟ ಪಟ್ಟ ಸೀರೀಸ್, ನಟ, ಅಂದ್ರೆ ಅದು ಹೃತಿಕ್ ರೋಷನ್ ಇದ್ದ ಸೀರೀಸ್ ಎನ್ನಬಹುದು. ಹೌದು ಹೃತಿಕ್ ಇದ್ದಾಗ ಅದ್ರಲ್ಲೂ ಅವರಿಗೆ ನಾಯಕಿಯಾಗಿ ಆಕ್ಷನ್ ಪ್ರಿನ್ಸ್ ಗೆ ಆಕ್ಷನ್ ಪ್ರಿನ್ಸಸ್ ಆಗಿದ್ದ ಐಶ್ವರ್ಯಾ ಇದ್ದ ಸೀಸನ್ ಜನರಿಗೆ ಬಹಳ ಇಷ್ಟವಾಗಿತ್ತು.
ನನ್ನ ಕೈಲಿ ಹಲವು ಕನ್ನಡ , ತಮಿಳು ಸಿನಿಮಾಗಳ ಪ್ರಾಜೆಕ್ಟ್ ಗಳಿವೆ – ಸಂಜನಾ ಗಲ್ರಾನಿ..!
ಇದೀಗ ಬೈಕ್ಗಳು, ಐಶಾರಾಮಿ ಲೊಕೇಶನ್ಗಳು, ರೋಚಕ ಚೇಸ್ ದೃಶ್ಯಗಳು, ಥ್ರಿಲ್ಲರ್ ಕತೆ ಹೀಗೆ ಹಲವು ಕುತೂಹಲಕಾರಿ ಅಂಶಗಳನ್ನು ಒಳಗೊಂಡಿರುವ ಧೂಮ್ ಸರಣಿಯ ನಾಲ್ಕನೇ ಸಿನಿಮಾ ಸೆಟ್ಟೇರಲಿದೆ. ಧೂಮ್ ನ ಮುಂದಿನ ಸರಣಿ ಬರುತ್ತಿದ್ದು, ಸಿನಿಪ್ರಿಯರು ಕಾತರರಾಗಿದ್ದಾರೆ. ಇದರ ಬೆನ್ನಲ್ಲೇ ಈ ಚಿತ್ರದಲ್ಲಿ ಈ ಬಾರಿ ಡಿಂಪಲ್ ಕ್ವೀನ್ ದೀಪಿಕಾ ಪಡುಕೋಣೆ ಖಳನಾಯಕಿಯಾಗಿ ನಟಿಸಲಿದ್ದಾರೆ ಅನ್ನೋದು ತಿಳಿದುಬಂದಿದೆ.
ಸಿನಿಮಾದ ಮತ್ತೊಂದು ಆಸಕ್ತಿಕರ ವಿಷಯವೆಂದರೆ ದೀಪಿಕಾ ಜೊತೆಗೆ ದೊಡ್ಡ ಸ್ಟಾರ್ ನಟ ಸಹ ಇರಲಿದ್ದಾರೆ. ಮತ್ತೊಂದು ಸೂಪರ್ ನ್ಯೂಸ್ ಏನೆಂದ್ರೆ ಈ ಸಿನಿಮಾದಲ್ಲಿ ಬಾಲಿವುಡ್ ನ ಬಾದ್ ಷಾ ಶಾರುಖ್ ಖಾನ್ ಕಾಣಿಸಿಕೊಳ್ತಿದ್ದಾರೆ ಎನ್ನಲಾಗಿದೆ. ಹೌದು ಹೌದು, ಇದೇ ಮೊದಲ ಬಾರಿಗೆ ಶಾರುಖ್ ಖಾನ್ ಧೂಮ್ ಸರಣಿಯ ಸಿನಿಮಾದಲ್ಲಿ ನಟಿಸಲಿದ್ದಾರೆ. ಶಾರುಖ್ ಖಾನ್ ಖಳರಾಗಿ ನಟಿಸುತ್ತಿದ್ದು, ಅವರಿಗೆ ಜೊತೆಗಾರ್ತಿಯಾಗಿ ದೀಪಿಕಾ ಪಡುಕೋಣೆ ಇರಲಿದ್ದಾರೆ. ಈ ಸಿನಿಮಾದಲ್ಲೂ ಮುಂದುವರೆಯಲಿದ್ದಾರೆ.
ಖ್ಯಾತ ಖಳನಟ ಸತ್ಯಜಿತ್ ವಿರುದ್ಧ ಸ್ವಂತ ಮಗಳಿಂದಲೇ ದೂರು ದಾಖಲು..!
ಇನ್ನೂ ಧೂಮ್ ನ ಮೊದಲ ಸೀರೀಸ್ ನಲ್ಲಿ ಜಾನ್ ಅಬ್ರಹಂ , ಈಶಾ ಡಿಯೋಲ್ , ಅಭಿಷೇಕ್ ಬಚ್ಚನ್, ಉದದಯ್ ಚೋಪ್ರಾ ಹೀಗೆ ಅನೇಕರು ನಟಿಸಿದ್ದರು. ಧೂಮ್ 2 ನಲ್ಲಿ ಹೃತಿಕ್ ರೋಷನ್, ಐಶ್ವರ್ಯಾ ರೈ ಬಿಪಾಶಾ ಬಸು ಸೇರಿದಂತೆ ಹಲವರಿದ್ದರು. ಧೂಮ್ 3 ನಲ್ಲಿ ಅಮೀರ್ ಖಾನ್, ಕತ್ರೀನಾ ಕೈಫ್ ಇದ್ದರು. ಇದೀಗ ಧೂಮ್ 4 ಅಲ್ಲಿ ಶಾರೂಖ್ ಖಾನ್ ಹಾಗೂ ದೀಪಿಕಾ ನಟಿಸಲಿದ್ದಾರೆ ಎನ್ನಲಾಗಿದೆ. ಇನ್ನೂ ಗಮನಿಸಬೇಕಾದ ವಿಚಾರ ಎಂದ್ರೆ ಈ ಎಲ್ಲಾ ಸೀರೀಸ್ ನಲ್ಲೂ ಅಭಿಷೇಕ್ ಬಚ್ಚನ್ ಹಾಗೂ ಉದಯ್ ಚೋಪ್ರಾ ಅವರು ಪೊಲೀಸ್ ಪಾತ್ರಗಳಲ್ಲಿ ಮುಂದುವರೆದಿದ್ದು, ಈ ಸರಣಿಯಲ್ಲೂ ಪೊಲೀಸ್ ರೋಲ್ ಗಳನ್ನ ನಿಭಾಯಿಸಲಿದ್ದಾರೆ.
ನನ್ನ ಕೈಲಿ ಹಲವು ಕನ್ನಡ , ತಮಿಳು ಸಿನಿಮಾಗಳ ಪ್ರಾಜೆಕ್ಟ್ ಗಳಿವೆ – ಸಂಜನಾ ಗಲ್ರಾನಿ..!
ಜಾನ್ ಅಬ್ರಹಾಂ, ಹೃತಿಕ್ ರೋಷನ್, ಐಶ್ವರ್ಯಾ ರೈ, ಅಮೀರ್ ಖಾನ್ ಅಂತಹ ಖ್ಯಾತ ನಟರು ಧೂಮ್ ಸರಣಿಯ ಸಿನಿಮಾಗಳಲ್ಲಿ ಖಳರಾಗಿ ನಟಿಸಿದ್ದು ಜನರನ್ನ ಥ್ರಿಲ್ ಗೊಳಿಸಿದ್ದಾರೆ. ಇದೀಗ ಬಾಲಿವುಡ್ ನ ಬಾದ್ ಷಾ ಬಾರಿ.
ಪ್ರೇಮಿಗಳ ದಿನ ಆಚರಿಸಿದ್ರೆ ಸ್ಥಳದಲ್ಲೇ ಮದುವೆ : ಹಿಂದೂ ಜಾಗೃತಿ ಸೇನೆ ವಾರ್ನಿಂಗ್
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel