ಇತ್ತೀಚೆಗಷ್ಟೇ ನಟ ಧ್ರುವ ಸರ್ಜಾ ಹಾಗೂ ಅವರ ಪತ್ನಿಗೆ ಕೊರೊನಾ ಪಾಸಿಟಿವ್ ಇರುವುದು ಖಚಿತವಾಗಿತ್ತು. ಈ ಬಗ್ಗೆ ಸ್ವತಃ ಧ್ರುವ ಸರ್ಜಾ ಅವರೆ ಟ್ವೀಟ್ ಮೂಲಕ ಸ್ಪಷ್ಟನೆ ನೀಡಿದ್ದು, ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದೇವೆ ಎಂದು ಹಂಚಿಕೊಂಡಿದ್ದರು. ಇದೀಗ ಮನೆಯಲ್ಲಿಯೇ ಇಷ್ಟುದಿನಗಳ ಕಾಲ ಕ್ವರಂಟೈನ್ ನಲ್ಲಿದ್ದು ಚಿಕಿತ್ಸೆ ಪಡೆದಿರುವ ಧ್ರುವ ಹಾಗೂ ಪತ್ನಿ ಮತ್ತೆ ಕೋವಿಡ್ ಟೆಸ್ಟ್ ಮಾಡಿಸಿದ್ದು, ರಿಪೋರ್ಟ್ ನೆಗೆಟಿವ್ ಬಂದಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಧ್ರುವ, ‘’ ನಾನು ಹಾಗೂ ನನ್ನ ಪತ್ನಿ ಕೊರೊನಾ ಟೆಸ್ಟ್ ಮಾಡಿಸಿದ್ದು, ರಿಪೋರ್ಟ್ ನೆಗೆಟಿವ್ ಬಂದಿದೆ. ನಿಮ್ಮೆಲ್ಲರ ಪ್ರಾರ್ಥನೆ, ಪ್ರೀತಿ, ಆಶೀರ್ವಾದಕ್ಕೆ ಧನ್ಯವಾದಗಳು. ವಿಶೇಷವಾಗಿ ಅಣ್ಣ ಚಿರಂಜೀವಿ ಸರ್ಜಾ ಆಶೀರ್ವಾದ. ಈ ಸಂದರರ್ಭದಲ್ಲಿ ನಾನು ನಮ್ಮ ಚಿಕ್ಕಪ್ಪ ಅರ್ಜುನ್ ಸರ್ಜಾ ಅವರಿಗೆ ವಿಶೇಷವಾಗಿ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. ಅವರು ನನ್ನ ಎಲ್ಲಾ ಕಠಿಣ ಪರಿಸ್ಥಿತಿಯಲ್ಲೂ ನನ್ನ ಜೊತೆಗಿದ್ದವರು. ಡಾ.ಸುರ್ಜಿತ್ ಪಾಲ್ ಸಿಂಗ್ ಹಾಗೂ ಮೆಡಿಕಲ್ ಸಹಾಯಕರಾದ ರಾಕುಮಾರ್ ಅವರಗೂ ವಿಶೇಷ ಧನ್ಯವಾದಗಳು’’ ಎಂದು ತಿಳಿಸಿದ್ದಾರೆ.








