Dhruva sarja
ಅದ್ದೂರಿಯಾಗಿ ಸ್ಯಾಂಡಲ್ ವುಡ್ ಗೆ ಎಂಟ್ರಿಕೊಟ್ಟು ಬಹದ್ದೂರ್ ಆಗಿ ಮಿಂಚಿ ಭರ್ಜರಿಯಾಗಿ ಸೌಂಡ್ ಮಾಡಿ “ಪೊಗರಿನಲ್ಲಿ” ಮೆರಿಯುತ್ತಿರುವ ಧ್ರುವ ಈಗ ‘ದುಬಾರಿ’ಯಾಗಿ ಬರ್ತಿದ್ದಾರೆ.
ಹೌದು ಸ್ಯಾಂಡಲ್ ವುಡ್ ನ ಬಹುನಿರೀಕ್ಷಿತ ಸಿನಿಮಾಗಳಲ್ಲಿ ಒಂದು ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ “ಪೊಗರು”. ಈ ಸಿನಿಮಾದ ಶೂಟಿಂಗ್ ಇನ್ನೇನು ಕೊನೆಯ ಹಂತದಲ್ಲಿದ್ದು, ಇದರ ಬೆನ್ನಲ್ಲೇ ಧ್ರುವ ಅವರ ಮತ್ತೊಂದು ಹೊಸ ಸಿನಿಮಾ ಸಿಕ್ಕಾಪಟ್ಟೆ ಸದ್ದು ಮಾಡ್ತಿದೆ.
ಹೌದು ಧ್ರುವ ಸರ್ಜಾ ಮುಂದಿನ ಸಿನಿಮಾ ಯಾವುದು ಎನ್ನುವ ಕುತೂಹಲಕ್ಕೆ ಈ ಹಿಂದೆಯೇ ತೆರೆ ಎಳಿದ್ದರು. ಆದರೆ ಸಿನಿಮಾದ ಟೈಟಲ್ ಆಗಲಿ ಬೇರೆ ಅಪ್ ಡೇಟ್ ಗಳ ಬಗ್ಗೆ ಮಾಹಿತಿ ನೀಡಿರಲಿಲ್ಲ. ಈ ನಡುವೆ ಹೊಸ ಸಿನಿಮಾದ ಸ್ಕ್ರಿಪ್ಟ್ ಪೂಜೆಯನ್ನ ಸಹ ದಸರಾ ಅದ್ರಲ್ಲೂ ಅಣ್ಣ ಚಿರು ಸರ್ಜಾ ಅವರ ಜನ್ಮದಿನದಂದೇ ನೆರವೇರಿಸಿದ್ರು.
ಅಂದ್ಹಾಗೆ ಧ್ರುವ ಸರ್ಜಾ ಹೊಸ ಸಿನಿಮಾಗೆ “ದುಬಾರಿ” ಎಂದು ಟೈಟಲ್ ಇಡಲಾಗಿದೆ. ‘I am very costly’ ಎನ್ನುವ ಟ್ಯಾಗ್ ಲೈನ್ ಗಮನ ಸೆಳೆಯುತ್ತಿದೆ. ಇಂದು ಶುಕ್ರವಾರ ಬೆಳಗ್ಗೆ 5 ಗಂಟೆಗೆ ಸರಿಯಾಗಿ ಬ್ರಾಹ್ಮಿ ಮುಹೂರ್ತದಲ್ಲಿ, ಬಸವೇಶ್ವರ ನಗರ ಆಂಜನೇಯ ದೇವಸ್ಥಾನದಲ್ಲಿ ಮೂಹೂರ್ತ ಕಾರ್ಯಕ್ರಮ ಸಂಭ್ರಮದಿಂದ ನೆರವೇರಿ1ದೆ. ಕಾರ್ಯಕ್ರಮದಲ್ಲಿ ಹೊಸ ಸಿನಿಮಾಗೆ ಚಾಲನೆ ನೀಡಲಾಗಿದೆ. ಹಿರಿಯ ನಟಿ ತಾರಾ ಧ್ರುವ ಸರ್ಜಾ ಹೊಸ ಸಿನಿಮಾಗೆ ಕ್ಲ್ಯಾಪ್ ಮಾಡಿ ಶುಭಹಾರೈಸಿದ್ದಾರೆ. ಈ ವೇಳೆ ಹಿರಿಯ ನಟ ದೊಡ್ಡಣ್ಣ ಸಹ ಹಾಜರಿದ್ದರು.
ರಾಷ್ಟ್ರಪ್ರಶಸ್ತಿ ವಿಜೇತ ʻಬಾಬಿ ಸಿಂಹʻ ಅಭಿನಯದ ʻವಸಂತ ಕೋಕಿಲʻ ಕನ್ನಡ ಸಿನಿಮಾದ ಫಸ್ಟ್ ಲುಕ್ ರಿಲೀಸ್.
ಅಂದ್ಹಾಗೆ ಈ ಸಿನಿಮಾದಲ್ಲಿ ಪೊಗರು ಕಾಂಬಿನೇಷನ್ ಮತ್ತೆ ಒಂದಾಗುತ್ತಿದೆ. ಈಗಾಗಲೇ ನಂದಕಿಶೋರ್ ಮತ್ತು ಧ್ರುವ ಕಾಂಬಿನೇಷನ್ ನಲ್ಲಿ ಪೊಗರು ಸಿನಿಮಾ ಮೂಡಿಬರುತ್ತಿದೆ. ಈಗ ನಿರ್ದೇಶಕ ನಂದಕಿಶೋರ್ ಸಾರಥ್ಯದಲ್ಲಿ ಮೂಡಿಬರುತ್ತಿರುವ “ದುಬಾರಿ” ಸಿನಿಮಾದ ಮೂಲಕ ಮತ್ತೊಮ್ಮೆ ಈ ಜೋಡಿ ಒಂದಾಗ್ತಿದೆ. ಚಿತ್ರಕ್ಕೆ ಉದಯ್ ಮೆಹ್ತಾ ಅವರು ಬಂಡವಾಳ ಹೂಡುತ್ತಿದ್ದಾರೆ.
Dhruva sarja
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel