ಮಂತ್ರಾಲಯಕ್ಕೆ ಬೇಟಿ ನೀಡಿ ರಾಯರ ಆಶಿರ್ವಾದ ಪಡೆದ ಧ್ರುವ ಸರ್ಜಾ
ಪೊಗರು ಚಿತ್ರದ ಬಳಿಕ ಮಾರ್ಟಿನ್ ಸಿನಿಮಾದಲ್ಲಿ ತೊಡಗಿಸಿಕೊಂಡಿರುವ ಧ್ರುವ ಸರ್ಜಾ ಶೂಟಿಂಗ್ ನಲ್ಲಿ ಬಿಡುವು ಮಾಡಿಕೊಂಡು ಮಂತ್ರಾಲಯಕ್ಕೆ ತೆರಳಿ ಶ್ರೀ ಗುರು ರಾಘವೇಂದ್ರ ಸ್ವಾಮಿ ದರ್ಶನ ಪಡೆದುಕೊಂಡಿದ್ದಾರೆ. ಚಿತ್ರರಂಗದ ಹಲವರು ರಾಯರ ಭಕ್ತರಾಗಿದ್ದಾರೆ. ಗುರುವಾರ ಫೆಬ್ರವರಿ 3 ರಂದು ಮಂತ್ರಾಲಯಕ್ಕೆ ಬೇಟಿ ನೀಡಿ ಪೀಠಾಧಿಪತಿ ಶ್ರೀ ಸುಭುದೇಂದ್ರ ತೀರ್ಥರ ಆಶಿರ್ವಾದ ಪಡೆದು ಧನ್ಯರಾಗಿದ್ದಾರೆ.
ಮಂತ್ರಾಲಯದಲ್ಲಿ ಧ್ರುವ ಸರ್ಜಾ ಅವರನ್ನ ನೋಡಿ ಅಭಿಮಾನಿಗಳು ಸೆಲ್ಫಿಗೆ ಮುಗಿಬಿದ್ದಿದ್ದಾರೆ. ಎಲ್ಲರಿಗೂ ಸೆಲ್ಫಿ ತೆಗೆದುಕೊಳ್ಳುಲು ಅವಕಾಶ ನೀಡಿ ಅಭಿಮಾನಿಗಳನ್ನ ಖುಷಿಪಡಿಸಿದ್ದಾರೆ ಧ್ರುವ ಸರ್ಜಾ.
ನಿರ್ದೇಶಕ ಎ ಪಿ ಅರ್ಜುನ್ ಆಕ್ಷನ್ ಕಟ್ ಹೇಳುತ್ತಿರುವ ಸಿನಿಮಾದಲ್ಲಿ ಧ್ರುವ ಸರ್ಜಾ ಅಭಿನಯಿಸುತ್ತಿದ್ದು ಅದಕ್ಕಾಗಿ ಮತ್ತೊಂದು ಸುತ್ತು ಮಸಲ್ ಬಿಲ್ಡ್ ಮಾಡುತ್ತಿದ್ದಾರೆ.








