ರಾಜ್ಯ ಸರ್ಕಾರದ ವಿರುದ್ಧ ಸಿಡಿದೆದ್ದ ಶಿವಣ್ಣ, ಧ್ರುವ
ಬೆಂಗಳೂರು : ಕೇಂದ್ರ ಸರ್ಕಾರ ಚಿತ್ರಮಂದಿರಗಳಲ್ಲಿ ಶೇ 100ರಷ್ಟು ಭರ್ತಿಗೆ ಅವಕಾಶ ನೀಡಿದ್ದರೂ, ರಾಜ್ಯ ಸರ್ಕಾರ ಶೇ 50 ರಷ್ಟು ಮಾತ್ರ ಚಿತ್ರಮಂದಿರ ಭರ್ತಿಗೆ ಅವಕಾಶ ನೀಡಿದೆ. ಈ ಬಗ್ಗೆ ಸಿನಿ ದಿಗ್ಗಜರು, ಸಾರ್ವಜನಿಕರು ಆಕ್ರೋಶ ಹೊರಹಾಕುತ್ತಿದ್ದಾರೆ. ಅದರಂತೆ ಇದೀಗ ಸ್ಯಾಂಡಲ್ ವುಡ್ ಲೀಡರ್ ಶಿವಣ್ಣ” ಚಿತ್ರಮಂದಿರಗಳಲ್ಲಿ ಪ್ರೇಕ್ಷಕರಿಗೆ 100ರಷ್ಟು ಅವಕಾಶ ಕಲ್ಪಿಸಬೇಕು ಎಂದು ಒತ್ತಾಯಿಸಿದ್ದಾರೆ.
ಈ ಬಗ್ಗೆ ಕರುನಾಡ ಚಕ್ರವರ್ತಿ ಶಿವರಾಜ್?ಕುಮಾರ್ ಟ್ವಿಟರ್ ನಲ್ಲಿ ಆಗ್ರಹಿಸಿದ್ದು, ಎಲ್ಲರಿಗೂ ನಾರ್ಮಲ್, ನಮಗ್ಯಾಕೆ ಅಬ್ ನಾರ್ಮಲ್. ದೇಶದಲ್ಲಿ ಎಲ್ಲರಿಗೂ ಚಿತ್ರಮಂದಿರಗಳಲ್ಲಿ 100ರಷ್ಟು ಪ್ರೇಕ್ಷಕರು ಕೂರುವಂತೆ ಅವಕಾಶ ಕೊಟ್ಟಿರುವಾಗ ನಮಗ್ಯಾಕೆ 50 ಪಸೆರ್ಂಟ್. ನಮಗೂ 100 ಪಸೆರ್ಂಟ್ ಪ್ರೇಕ್ಷಕರು ಕೂರಲು ಅವಕಾಶ ಕೊಡಿ. ಚಿತ್ರರಂಗಕ್ಕೋಸ್ಕರ ನಾವು ಜೊತೆಯಲ್ಲಿದ್ದೇವೆ. ಸರ್ಕಾರದ ನಿರ್ಧಾರ ಬದಲಾಗಲೇಬೇಕು. ನಮಗೂ 100 ಪಸೆಂಟ್ ಭರ್ತಿಗೆ ಅವಕಾಶ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ಇಂದು ಬೆಳಿಗ್ಗೆ ಇದೇ ವಿಚಾರವಾಗಿ ನಟ ಧ್ರುವ ಸರ್ಜಾ ಟ್ವೀಟ್ ಮಾಡಿ, ಮಾರ್ಕೆಟ್ ನಲ್ಲಿ ಗಿಜಿ ಗಿಜಿ ಜನ ಸೇರ್ತಾರೆ. ಬಸ್ಸಿನಲ್ಲಿ ಫುಲ್ ರಷ್ ಇರುತ್ತೆ. ಆದ್ರೆ ಚಿತ್ರಮಂದಿರಕ್ಕೆ ಮಾತ್ರ ಯಾಕೆ ಶೇಕಡಾ 50 ರಷ್ಟು ನಿರ್ಬಂಧ ಎಂದು ಪ್ರಶ್ನಿಸಿದ್ದಾರೆ. ಅಲ್ಲದೇ ಈ ಟ್ವೀಟ್ ಅನ್ನು ಸಿಎಂ,ಡಿಸಿಎಂ, ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಗೆ ಟ್ಯಾಗ್ ಮಾಡಿದ್ದಾರೆ.
ಕೇಂದ್ರ ಸರ್ಕಾರ ಚಿತ್ರಮಂದಿರಗಳ ಭರ್ತಿಗೆ ಆದೇಶ ನೀಡಿ ಮಾರ್ಗಸೂಚಿ ಪ್ರಕಟಿಸಿದೆ. ಆದ್ರೆ ರಾಜ್ಯ ಸರ್ಕಾರ ಈ ಸಂಬಂಧ ನಿರ್ಧಾರ ತೆಗೆದುಕೊಳ್ಳಬಹುದು ಎಂದು ಸೂಚನೆ ನೀಡಿದೆ. ಅದರಂತೆ ರಾಜ್ಯ ಸರ್ಕಾರ ಚಿತ್ರಮಂದಿರಗಳಲ್ಲಿ ಶೇ 50 ರಷ್ಟು ಆಸನ ಮಾತ್ರ ಭರ್ತಿ ಮಾಡಲು ಅವಕಾಶ ನೀಡಿ ಆದೇಶ ಹೊರಡಿಸಿದೆ. ಹೀಗಾಗಿ ರಾಜ್ಯ ಸರ್ಕಾರದ ವಿರುದ್ಧ ಸ್ಯಾಂಡಲ್ ವುಡ್ ಮಂದಿ ಸಿಡಿದೆದ್ದಿದ್ದಾರೆ.
ಈ ಬಗ್ಗೆ ಮಾತನಾಡಿರುವ ಆರೋಗ್ಯ ಸಚಿವ ಡಾ.ಕೆ.ಸುಧಾಕರ್, ನಮಗೆ ಮನರಂಜನೆಗಿಂತ ಜನರ ಆರೋಗ್ಯ ಬಹಳ ಮುಖ್ಯ. ಕೇಂದ್ರ ಸರ್ಕಾರ 100ರಷ್ಟು ಭರ್ತಿಗೆ ಅವಕಾಶ ಕೊಟ್ಟಿದ್ದರೂ, ರಾಜ್ಯಗಳಿಗೆ ಅಂತಿಮ ತೀರ್ಮಾನ ತೆಗೆದುಕೊಳ್ಳುವ ಪರಮಾಧಿಕಾರ ನೀಡಿದೆ. ಹಾಗಾಗಿ ತಜ್ಞರ ಸಲಹೆ ಆಧರಿಸಿದ ನಾವು ಮಾರ್ಗಸೂಚಿ ಪ್ರಕಟಿಸಿದ್ದೇವೆ. ಅದ್ರಂತೆ, ಫೆಬ್ರವರಿ 28ರವೆಗೆ 50ರಷ್ಟು ಭರ್ತಿಗೆ ಅವಕಾಶ ನೀಡಿದ್ದೇವೆ. ಚಿತ್ರಮಂದಿರ ಹೇಳಿಕೇಳಿ ಹವಾನಿಯಂತ್ರಿತ ಜಾಗ. ಇಲ್ಲಿ ಸೋಂಕು ಹರಡುವ ಸಾಧ್ಯತೆ ಹೆಚ್ಚಿರುತ್ತೆ ಅಂತ ಹೇಳಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel