ಬೆಂಗಳೂರು: ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ (Parappana Agrahara) ಸೇರಿರುವ ದರ್ಶನ್ ಗೆ (Darshan) ರಾಜಾತಿಥ್ಯ ನೀಡಿದ ಪ್ರಕರಣ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಅಲ್ಲಿ ದರ್ಶನ್ ಗೆ ವಿಶೇಷ ಸೌಲಭ್ಯ ಸಿಗುವುದರ ಹಿಂದೆ ಸಚಿವರ ಮೌಖಿಕ ಆದೇಶ ಇತ್ತೇ ಎಂಬ ಅನುಮಾನ ಈಗ ವ್ಯಕ್ತವಾಗುತ್ತಿದೆ.
ಪ್ರಭಾವಿ ಸಚಿವರೊಬ್ಬರು ದರ್ಶನ್‌ಗೆ ವಿಶೇಷ ಸೌಲಭ್ಯ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದರು. ಜೈಲು ಸಿಬ್ಬಂದಿ ಸಹ ದರ್ಶನ್ ಖ್ಯಾತ ನಟನಾಗಿರುವ ಕಾರಣ ಜೈಲಿನ ನಿಯಮ ಪಾಲಿಸಿರಲಿಲ್ಲ. ಜೈಲಿನ ಒಳಗಡೆ ಚಯರ್ ನೀಡಬೇಕಾದರೂ ಅಧಿಕಾರಿಗಳ ಅನುಮತಿ ಬೇಕು. ಅನಾರೋಗ್ಯ ಸೇರಿದಂತೆ ಇನ್ನಿತರ ಕಾರಣಗಳಿಗಾಗಿ ವೈದ್ಯರು ಸೂಚಿಸಿದರೆ ಮಾತ್ರ ಕುಳಿತುಕೊಳ್ಳಲು ಆಸನದ ವ್ಯವಸ್ಥೆ ಮಾಡಿರುತ್ತಾರೆ. ಆದರೆ, ಸಚಿವರ ಮೌಖಿಕ ಆದೇಶ ಈ ಸೌಲಭ್ಯ ಒದಗಿಸಲು ಸೂಚಿಸಿತೇ? ಎಂಬ ಅನುಮಾನ ವ್ಯಕ್ತವಾಗುತ್ತಿದೆ.
ದರ್ಶನ್ ಐಷರಾಮಿ ಬದುಕು ಅನುಭವಿಸುತ್ತಿರುವ ವಿಡಿಯೋ ಹಾಗೂ ಫೋಟೋ ವೈರಲ್ ಆಗುತಿದ್ದಂತೆ ಈಗ ಆರೋಪಿಗಳನ್ನು ಬೇರೆ ಜೈಲುಗಳಿಗೆ ಸ್ಥಳಾಂತರಿಸಲು ಕೋರ್ಟ್ ಸೂಚಿಸಿದೆ. ಅಲ್ಲದೇ, ಈ ಕುರಿತು ತನಿಖೆ ಕೂಡ ನಡೆಯುತ್ತಿದೆ.








