ಪಡಿತರ ಚೀಟಿಯನ್ನು ಆಧಾರ್ಗೆ ಲಿಂಕ್ ಮಾಡಿದ್ದೀರಾ? ಇಲ್ಲ ಎಂದಾದರೆ ಈ ಮಾಹಿತಿ ಓದಿ
ಹೊಸದಿಲ್ಲಿ, ಅಕ್ಟೋಬರ್02: ನಿಮ್ಮ ಪಡಿತರ ಚೀಟಿಯನ್ನು ಆಧಾರ್ಗೆ ಲಿಂಕ್ ಮಾಡಿರದಿದ್ದರೆ, ಆದಷ್ಟು ಬೇಗನೆ ಮಾಡುವುದು ಒಳ್ಳೆಯದು.
ನೀವು ಈ ಪ್ರಕ್ರಿಯೆಯನ್ನು ತ್ವರಿತವಾಗಿ ಪೂರ್ಣಗೊಳಿಸದಿದ್ದರೆ, ರೇಷನ್ ಕಾರ್ಡ್ನ ಯಾವುದೇ ಪ್ರಯೋಜನವನ್ನು ಪಡೆಯಲು ಸಾಧ್ಯವಾಗುವುದಿಲ್ಲ. ಸರ್ಕಾರದ ಆದೇಶದ ಪ್ರಕಾರ, ಪಡಿತರ ಚೀಟಿಗಳ ಮೂಲಕ ಫಲಾನುಭವಿಗಳು ಅಗ್ಗದ ದರದಲ್ಲಿ ಧಾನ್ಯವನ್ನು ಸಬ್ಸಿಡಿ ಅಡಿಯಲ್ಲಿ ಪಡೆಯುತ್ತಾರೆ. ಈ ಕಾರ್ಡ್ನೊಂದಿಗೆ ನೀವು ಕಡಿಮೆ ಬೆಲೆಗೆ ಆಹಾರ ಪದಾರ್ಥಗಳನ್ನು ಖರೀದಿಸಬಹುದು. ಅದಕ್ಕಾಗಿ, ನೀವು ರೇಷನ್ ಕಾರ್ಡ್ ಅನ್ನು ಆಧಾರ್ಗೆ ಲಿಂಕ್ ಮಾಡಬೇಕು.
ಇಂದಿನಿಂದ ಡೆಬಿಟ್/ಕ್ರೆಡಿಟ್ ಕಾರ್ಡ್ ಪಾವತಿಗೆ ಹೊಸ ರೂಲ್ಸ್ – ಇಲ್ಲಿದೆ ನೀವು ತಿಳಿದಿರಬೇಕಾದ 10 ಮಾಹಿತಿಗಳು
ಬಡ ಮತ್ತು ವಲಸೆ ಫಲಾನುಭವಿಗಳ ಹಿತಾಸಕ್ತಿಗಳನ್ನು ಕಾಪಾಡುವ ಸಲುವಾಗಿ ‘ಒನ್ ನೇಷನ್ ಒನ್ ರೇಷನ್ ಕಾರ್ಡ್’ ಯೋಜನೆಯಡಿ ಪಡಿತರ ಚೀಟಿ ಹೊಂದಿರುವವರ ಅಂತರ್-ರಾಜ್ಯ ಪೋರ್ಟಬಿಲಿಟಿ ಅನ್ನು ಜಾರಿಗೆ ತರಲು ಸರ್ಕಾರ ಪ್ರಾರಂಭಿಸಿದೆ.
ಇದರ ಅಡಿಯಲ್ಲಿ, ನಿಮ್ಮ ಪಡಿತರ ಚೀಟಿಯೊಂದಿಗೆ ನೀವು ದೇಶದ ಯಾವುದೇ ರಾಜ್ಯದಲ್ಲಿ ಆಹಾರ ಧಾನ್ಯಗಳನ್ನು ಅಗ್ಗದ ದರದಲ್ಲಿ ಪಡೆಯಬಹುದು.
ಪಡಿತರ ಚೀಟಿಯನ್ನು ಆಧಾರ್ಗೆ ಲಿಂಕ್ ಮಾಡಲು,
ಮೊದಲು ಭಾರತದ ವಿಶಿಷ್ಟ ಗುರುತಿನ ಅಧಿಕೃತ ವೆಬ್ಸೈಟ್ಗೆ uidai.gov.in. ಭೇಟಿ ನೀಡಿ
ಇದರ ನಂತರ, ಪಡಿತರ ಚೀಟಿ ಸಂಖ್ಯೆ, ಆಧಾರ್ ಸಂಖ್ಯೆ, ಇ-ಮೇಲ್ ವಿಳಾಸ ಮತ್ತು ಮೊಬೈಲ್ ಸಂಖ್ಯೆಯನ್ನು ಭರ್ತಿ ಮಾಡಿ.
ನಿಮ್ಮ ಮೊಬೈಲ್ ಸಂಖ್ಯೆಯಲ್ಲಿ ಒಟಿಪಿ ಬರುತ್ತದೆ.
ಅದನ್ನು ಭರ್ತಿ ಮಾಡುವ ಮೂಲಕ ಸಲ್ಲಿಸಿ.
ನಿಮ್ಮ ಪಡಿತರ ಕಾರ್ಡ್ ಅನ್ನು ಆಧಾರ್ಗೆ ಲಿಂಕ್ ಮಾಡಲಾಗುತ್ತದೆ.
ಟ್ವಿಟರ್ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Tweets by SaakshaTv