ಚಾಮರಾಜಪೇಟೆಯಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ತುಳುನಾಡಿನ ಪಂಜುರ್ಲಿ ದೈವಗಳಿಗೆ ಸಚಿವ ಜಮೀರ್ ಅಹಮದ್ ಖಾನ್ (Minister Zameer Ahmad Khan) ಅವರು ಅಪಮಾನ ಮಾಡಿದ್ದಾರೆ ಎಂದು ದೈವವನ್ನು ಆರಾಧಿಸುವವರು ತೀವ್ರ ಆಕ್ರೋಶ ಹೊರಹಾಕಿದ್ದಾರೆ.
ದೇವರ ವೇಷ ಧರಿಸಿದ್ದವರು ಚಪ್ಪಲಿ ಧರಿಸಿ ಬಂದಿದ್ದ ಜಮೀರ್ ಅವರನ್ನು ವೇದಿಕೆಗೆ ಕರೆದುಕೊಂಡು ಹೋಗಿದ್ದು, ಮಾತ್ರವಲ್ಲದೆ ಕಾಂತಾರ (Kantara) ಸಿನಿಮಾದ ರೀತಿಯಲ್ಲಿ ನೃತ್ಯ ಮಾಡಿದ್ದು ದೈವಾರಾಧಕರ ಕೆಂಗಣ್ಣಿಗೆ ಗುರಿಯಾಗಿದೆ.
ಕಾಂತಾರ ಸಿನಿಮಾ ತುಳುನಾಡಿಗೆ ಸೀಮಿತವಾಗಿದ್ದ ದೈವಾರಾಧನೆಯನ್ನು ಇಡೀ ದೇಶ-ವಿದೇಶಗಳಿಗೆ ಪರಿಚಯಸುವಲ್ಲಿ ಯಶಸ್ವಿಯಾಯಿತು. ಅಷ್ಟು ಮಾತ್ರವಲ್ಲದೆ ಈ ಸಿನಿಮಾ ಯಾರೂ ಊಹಿಸಿರದ ರೀತಿಯಲ್ಲಿ ಸೂಪರ್ ಹಿಟ್ ಕೂಡ ಆಯ್ತು. ಆದ್ರೆ ಅದಾದ ಬೆನ್ನಲ್ಲೆ ದೇವರ ವೇಷ ಧರಿಸಿಕೊಂಡು ದೇವರಿಗೆ ಅಪಮಾನ ಮಾಡುವ ಪ್ರಕ್ರಿಯೆ ಕೂಡ ಹಲವೆಡೆ ನಡೆಯುತ್ತಿದೆ. ಬೆಂಗಳೂರು ಭಾಗದಲ್ಲಿ ದೈವಾರಾಧನೆಯ ಕುರಿತು ಅರಿವಿಲ್ಲದವರು ವೇಷ ಧರಿಸಿ ದೇವರನ್ನು ಅಣಕಿಸುವ ರೀತಿ ಮಾಡ್ತಾ ಇರುವುದು ಹಲವರ ಭಾವನೆಗಳಿಗೆ ಧಕ್ಕೆ ಉಂಟಾಗುತ್ತಿರುವುದು ಕಹಿಸತ್ಯವಾಗಿದೆ.ನಿಮ್ಮ ಅನಿಸಿಕೆ ಏನು ಕಾಮೆಂಟ್ ಮಾಡಿ.








