Diesel | ಡೀಸೆಲ್ ಬೆಲೆಯಲ್ಲಿ 25 ರೂ.ಹೆಚ್ಚಳ!
ನವದೆಹಲಿ : ಅಂತಾರಾಷ್ಟ್ರೀಯ ತೈಲ ಬೆಲೆ ಏರಿಕೆಯಾಗುತ್ತಿದ್ದಂತೆ ಬೃಹತ್ ಬಳಕೆದಾರರಿಗೆ ಮಾರಾಟವಾಗುವ ಡೀಸೆಲ್ ಬೆಲೆ ರಾಕೇಟ್ ವೇಗದಲ್ಲಿ ಏರಿಕೆಯಾಗಿದೆ.
ಜಾಗತಿಕ ಮಟ್ಟದಲ್ಲಿ ತೈಲ ಬೆಲೆ ಶೇಕಡಾ 40 ರಷ್ಟು ಏರಿಕೆಯಾಗಿದೆ. ಹೀಗಾಗಿ ಬೃಹತ್ ಬಳಕೆದಾರರಿಗೆ ಮಾರಾಟವಾಗುವ ಡೀಸೆಲ್ ಬೆಲೆಯನ್ನು ಲೀಟರ್ ಗೆ ಸುಮಾರು 25 ರೂಪಾಯಿಗಳಷ್ಟು ಹೆಚ್ಚಿಸಲಾಗಿದೆ.
ಆದ್ರೆ ಪೆಟ್ರೋಲ್ ಬಂಕ್ ಗಳಲ್ಲಿ ಚಿಲ್ಲರೆ ಮಾರಾಟ ದರದಲ್ಲಿ ಯಾವುದೇ ಬದಲಾವಣೆಯಾಗಿಲ್ಲ.
ಮುಂಬೈನಲ್ಲಿ ಬೃಹತ್ ಬಳಕೆದಾರರಿಗೆ ಮಾರಾಟವಾಗುವ ಡೀಸೆಲ್ ಬೆಲೆ ಲೀಟರ್‍ಗೆ 122.05 ರೂ.ಗೆ ಏರಿಕೆಯಾಗಿದೆ.
ಪೆಟ್ರೋಲ್ ಪಂಪ್‍ಗಳಲ್ಲಿ ಲೀಟರ್ ಬೆಲೆ 94.14 ರೂ.ಗಲಿದೆ.
ದೆಹಲಿಯಲ್ಲಿ ಪೆಟ್ರೋಲ್ ಪಂಪ್‍ನಲ್ಲಿ ಡೀಸೆಲ್ ಬೆಲೆ ಲೀಟರ್‍ಗೆ 86.67 ರೂ,ಗಳಿದೆ.
ಬೃಹತ್ ಅಥವಾ ಕೈಗಾರಿಕಾ ಬಳಕೆದಾರರಿಗೆ ಇದರ ಬೆಲೆ ಸುಮಾರು 115 ರೂ.ಗಳಾಗಲಿದೆ.
ಈ ಬೆಲೆ ಏರಿಕೆಯಿಂದಾಗಿ ನಯಾರಾ ಎನರ್ಜಿ, ಜಿಯೋ-ಬಿಪಿ ಮತ್ತು ಶೆಲ್‍ನಂತಹ ಖಾಸಗಿ ಕಂಪೆನಿಗಳು ಹೆಚ್ಚು ಹಾನಿಗೊಳಗಾಗುತ್ತಿವೆ.
Diesel Price For Bulk Users Hiked By Rs 25/litre









