ಇನ್ಮುಂದೆ ನಿಮ್ಮ ವಿಮಾ ಖಾತೆಗಳು ಸೇಫ್ ಆಗಿರಲಿವೆ : ಹೇಗಂತೀರಾ…!
ಇನ್ಮುಂದೆ ನಿಮ್ಮ ವಿಮಾ ಖಾತೆಗಳು ಸೇಫ್ ಆಗಿರಲಿವೆ. ಹೇಗ್ ಅಂತೀರಾ.. ಅದಕ್ಕಾಗಿಯೇ ಬರುತ್ತಿದೆ ಡಿಜಿಟಲ್ ಲಾಕರ್. ಹೌದು. ಇನ್ಮುಂದೆ ನಮ್ಮ ವಿಮೆಯ ದಾಖಲೆ ಪತ್ರಗಳನ್ನು ಸುರಕ್ಷಿತವಾಗಿಡುವುದರ ಬಗ್ಗೆ ತಲೆಕೆಡಿಸಿಕೊಳ್ಳಬೇಕಿಲ್ಲ. ಡಿಜಿಲಾಕರ್ ನಲ್ಲಿ ನಿಮ್ಮ ವಿಮೆಯ ಪಾಲಿಸಿಗಳನ್ನು ಸುರಕ್ಷಿತವಾಗಿ ಇಡಬಹುದಾಗಿದೆ. ಡಿಜಿಲಾಕರ್ ಸರ್ಕಾರ ರೂಪಿಸಿರುವ ಸುರಕ್ಷಿತ ಮೊಬೈಲ್ ಅಪ್ಲಿಕೇಶನ್. ಈ ಅಪ್ಲಿಕೇಶನ್ ದಾಖಲೆ ಪತ್ರಗಳನ್ನು ಇಡಲು ತುಂಬಾ ಸೇಫ್ ಎಂದು ಹೇಳಲಾಗುತ್ತಿದೆ. ಇದರಲ್ಲಿ ಇಡಲಾದ ದಾಖಲೆಪತ್ರಗಳನ್ನು ಕದಿಯಲು ಅಥವಾ ಕದ್ದು ಓದಲು ಸಾಧ್ಯವಿಲ್ಲ. ಎಲೆಕ್ಟ್ರಾನಿಕ್ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವಾಲಯ ಈ ಸುರಕ್ಷಿತ ಮೊಬೈಲ್ ಅಪ್ಲಿಕೇಶನ್ ನನ್ನು ಅಭಿವೃದ್ಧಿ ಪಡಿಸಿದೆ. ಎಲೆಕ್ಟ್ರಾನಿಕ್ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವಾಲಯ ಅಭಿವೃದ್ಧಿ ಪಡಿಸಿದ ಈ ಸುರಕ್ಷಿತ ಅಪ್ಲಿಕೇಶನ್ ನನ್ನು ಬಳಸುವುದರಿಂದ ವಿಮಾ ವಲಯದಲ್ಲಿ ಸಾಕಷ್ಟು ಖರ್ಚುಗಳು ಉಳಿತಾಯವಾಗುತ್ತದೆ. ವಿಮಾ ಸೇವೆಗಳ ರೆಸ್ಪಾನ್ಸ್ ಅವಧಿಗಳು ಕೂಡ ಕಡಿಮೆಯಾಗುತ್ತದೆ. ವಿಮಾ ಸೇವೆಗಳ ಪ್ರಕ್ರಿಯೆಗಳು ಹಾಗೂ ಕ್ಲೈಮ್ ಸೆಟಲ್ಮೆಂಟ್ ಕೂಡ ಸುಲಭವಾಗಲಿದೆ. ಈ ಸಂಬಂಧ ಮಾಹಿತಿ ತಂತ್ರಜ್ಞಾನದ ಅಡಿಯಲ್ಲಿ ಬರುವ ಇ- ಗವರ್ನೆನ್ಸ್ ಡಿವಿಜನ್ ವಿಮಾ ಕಂಪೆನಿಗಳಿಗೆ ಅಗತ್ಯವಿರುವ ಲಾಜಿಸ್ಟಿಕ್ ನೆರವು ನೀಡಬೇಕು ಎಂದು ಎಂದು ಐ ಆರ್ ಡಿ ಎ ಐ ಹೇಳಿದೆ. ಇದರಿಂದಾಗಿದೆ ದಾಖಲೆ ಪತ್ರಗಳು ಕಳೆದು ಹೋದರೆ ವಿಮೆಯ ಲಾಭ ನಮಗೆ ದೊರಕುವುದಿಲ್ಲ ಎನ್ನುವ ಚಿಂತೆಗಳು ದೂರಾಗಲಿವೆ.
ಡೆಟಾ ಲೀಕ್ | `ಕೂ’ ಆಪ್ ಸುರಕ್ಷಿತವೇ..?
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel