dilwaale dulhaniya lejayenge
1995 ರಲ್ಲಿ ತೆರೆಕಂಡು ದೇಶಾದ್ಯಂತ ಸಂಚಲನ ಸೃಷ್ಟಿಸಿದ ಎವರ್ ಗ್ರೀನ್ ಸಿನಿಮಾ “ದಿಲ್ ವಾಲೆ ದುಲ್ಹನಿಯ ಲೇಜಾಯೇಂಗೆ”.
ಕಾಜಲ್ ಹಾಗೂ ಶಾರೂಖ್ ಖಾನ್ ಸೂಪರ್ ಹಿಟ್ ಜೋಡಿಯಾಗಿ ಹೊರಹೊಮ್ಮಿದ್ದ ಈ ಚಿತ್ರ ತೆರೆಕಂಡು 25 ವರ್ಷಗಳೇ ಕಳೆದಿವೆ. ಆದರೂ ಈ ಚಿತ್ರದ ಕ್ರೇಜ್ ಮಾತ್ರ ಕಡಿಮೆಯಾಗಿಲ್ಲ..
ಶಾರುಖ್ ಮತ್ತು ಕಾಜೋಲ್ ಸಿನಿಮಾ ಬದುಕಿಗೆ ದೊಡ್ಡ ತಿರುವುಕೊಟ್ಟ ಸಿನಿಮಾವಿದು.
ಈ ಸಿನಿಮಾ ಬಳಿಕ ಶಾರುಖ್ ಮತ್ತು ಕಾಜೋಲ್ ಜೋಡಿ ಬಾಲಿವುಡ್ ನಲ್ಲಿ ಮೋಸ್ಟ್ ಸಕ್ಸಸ್ ಫುಲ್ ಜೋಡಿಯಾಗಿ ಹೊರಹೊಮ್ಮಿತು.
ಯುವರಾಜ್ ಮತ್ತು ಸಿಮ್ರಾನ್ ಪಾತ್ರದಲ್ಲಿ ಶಾರುಖ್ ಮತ್ತು ಕಾಜೋಲ್ ಮಿಂಚಿದ್ದರು.
1995 ಅಕ್ಟೋಬರ್ 20ಕ್ಕೆ ಈ ಸಿನಿಮಾ ರಿಲೀಸ್ ಆಗಿತ್ತು. ಈ ಎವರ್ ಗ್ರೀನ್ ಸಿನಿಮಾ ರಿಲೀಸ್ ಆಗಿ 25 ವರ್ಷಗಳನ್ನು ಪೂರೈಸುತ್ತಿದೆ.
ಶಿವಣ್ಣ – ಭಟ್ಟರ ಕಾಂಬಿನೇಷನ್ ಸಿನಿಮಾ ಮೂಲಕ ಚಂದನವನಕ್ಕೆ ವಾಪಸ್ ಆಗ್ತಾರಾ ಫ್ರಭುದೇವ..!
ಇದೇ ಸಂಭ್ರಮದಲ್ಲಿ ಈ ಸಿನಿಮಾವನ್ನು ಮತ್ತೆ ರಿಲೀಸ್ ಮಾಡುವ ನಿರ್ಧಾರ ಮಾಡಲಾಗಿದೆ.
ಆದರೆ ಈ ಚಿತ್ರ ಭಾರತದಲ್ಲಿ ಅಲ್ಲ. ಸ್ಪೇನ್ ನಲ್ಲಿ ರೀ ರಿಲೀಸ್ ಆಗುತ್ತಿದೆ.
ಮನಿ ಹೀಸ್ಟ್ ಸಿನಿಮಾದ ನಾಯಕ ಅಜಯ್ ಜೇಥಿ ಈ ಸಿನಿಮಾವನ್ನು ಸ್ಪೇನ್ ನಲ್ಲಿ ರಿಲೀಸ್ ಮಾಡುವ ಪ್ಲಾನ್ ಮಾಡಿದ್ದಾರೆ. ಅಕ್ಟೋಬರ್ 30ರಂದು ಈ ರೀ ರಿಲೀಸ್ ಆಗುತ್ತಿದೆ.
‘ದಿಲ್ ವಾಲೆ ದುಲ್ಹನಿಯಾ ಲೇ ಜಾಯೇಂಗೆ’ ಸಿನಿಮಾ 1995ರಿಂದ ಸತತ 20 ವರ್ಷಗಳ ಕಾಲ ಮುಂಬೈನ ಮರಾಠ ಮಂದಿರ್ ನಲ್ಲಿ ಪ್ರಸಾರವಾಗುತ್ತಿತ್ತು.
ಈ ಮೂಲಕ ಭಾರತೀಯ ಸಿನಿಮಾರಂಗದಲ್ಲೇ ಸತತ 20 ವರ್ಷ ಪ್ರದರ್ಶನ ಕಂಡ ಏಕೈಕ ಸಿನಿಮಾ ಎಂಬ ದಾಖಲೆ ನಿರ್ಮಿಸಿದೆ.
ವಿಶೇಷ ಎಂದ್ರೆ ಲಾಕ್ ಡೌನ್ ಬಳಿಕ ಸ್ಪೇನ್ ನಲ್ಲಿ ತೆರೆ ಕಾಣುತ್ತಿರುವ ಮೊದಲ ಬಾಲಿವುಡ್ ಸಿನಿಮಾ ಇದಾಗಿದೆ.
dilwaale dulhaniya lejayenge
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel







