ಡಿಂಪಲ್ ಕ್ವೀನ್ ರಚಿತಾ ರಾಮ್ (Rachita Ram) ಕಲ್ಟ್ ಚಿತ್ರ ತಂಡದೊಂದಿಗೆ ತಮ್ಮ ಹುಟ್ಟು ಹಬ್ಬ ಆಚರಿಸಿಕೊಂಡಿದ್ದಾರೆ.
ಕಲ್ಟ್ ಚಿತ್ರ ತಂಡದೊಂದಿಗೆ ಹುಟ್ಟು ಹಬ್ಬ ಆಚರಿಸಿಕೊಂಡಿರುವ ಫೋಟೋಗಳು ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ. ಇತ್ತೀಚೆಗಷ್ಟೇ ನಟಿ ಹುಟ್ಟು ಹಬ್ಬ ಆಚರಿಸಿಕೊಳ್ಳಲ್ಲ. ಎಂದಿನಂತೆ ಭಾನುವಾರ ಸಿಗೋಣ ಎಂದು ಹೇಳಿದ್ದರು. ಆದರೆ, ಚಿತ್ರ ತಂಡದ ಒತ್ತಾಯಕ್ಕೆ ಮಣಿದು ಸರಳವಾಗಿ ಹುಟ್ಟು ಹಬ್ಬ ಆಚರಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
‘ಕಲ್ಟ್’ ಚಿತ್ರದ ನಾಯಕ ಝೈದ್ ಖಾನ್ ಜೊತೆ ನಿಂತು ಕೇಕ್ ಕತ್ತರಿಸಿ ಸಂಭ್ರಮಿಸಿದ್ದಾರೆ.ಈ ವೇಳೆ ಒಬ್ಬರಿಗೊಬ್ಬರು ಕೇಕ್ ತಿನ್ನಿಸಿದ್ದಾರೆ. ರಚಿತಾ, ಝೈದ್ ಖಾನ್ ಜೊತೆ ಕ್ಯಾಮೆರಾ ಮ್ಯಾನ್ ಜೆ.ಎಸ್ ವಾಲಿ, ಆಲ್ ಓಕೆ, ಡೈರೆಕ್ಟರ್ ಅನಿಲ್ ಕುಮಾರ್ ಸೇರಿದಂತೆ ಹಲವರು ಈ ಸಂದರ್ಭದಲ್ಲಿ ಇದ್ದರು ಎನ್ನಲಾಗಿದೆ.
ಕಳೆದ 20 ದಿನಗಳಿಂದ ‘ಕಲ್ಟ್’ ಸಿನಿಮಾದ ಶೂಟಿಂಗ್ ಬಿರುಸಿನಿಂದ ಉಡುಪಿಯಲ್ಲಿ ನಡೆಯುತ್ತಿದೆ. ಶೂಟಿಂಗ್ ಕಾರ್ಯದ ಮಧ್ಯೆ ರಚಿತಾ ಹುಟ್ಟು ಹಬ್ಬ ಆಚರಿಸಿಕೊಂಡಿದ್ದಾರೆ. ಕಲ್ಟ್ ಚಿತ್ರದಲ್ಲಿ ರಚಿತಾ ರಾಮ್ ಹಾಗೂ ಮಲೈಕಾ ವಸುಪಾಲ್ ನಾಯಕಿಯರಾಗಿ ನಟಿಸುತ್ತಿದ್ದಾರೆ. ಇದೊಂದು ತ್ರಿಕೋನ ಪ್ರೇಮ ಕಥೆ ಎನ್ನಲಾಗಿದೆ.