ನಟ ದರ್ಶನ್ ಅಭಿಮಾನಿಗಳಿಗೆ ಭರ್ಜರಿ ಖುಷಿಸುದ್ದಿಯೊಂದು ಹೊರಬಿದ್ದಿದೆ ನೋಡಿ. ದರ್ಶನ್ ಸಹೋದರ ಹಾಗೂ ನಿರ್ದೇಶಕ ದಿನಕರ್ ತೂಗುದೀಪ ಅವರು ಮತ್ತೆ ನಿರ್ದೇಶಕನ ಕ್ಯಾಪ್ ತೊಡೋಕೆ ರೆಡಿ ಆಗಿದ್ದಾರಂತೆ. ಅದೂ ಕೂಡ ಅಣ್ಣನಿಗಾಗಿ ಅನ್ನೋದು DBOSS ಅಭಿಮಾನಿಗಳಿಗೆ ಖುಷಿಯ ವಿಚಾರ ‘ಸಾರಥಿ’ಯಂತಹ ಬ್ಲಾಕ್ ಬಸ್ಟರ್ ಚಿತ್ರ ಕೊಟ್ಟ ಈ ಹಿಟ್ ಕಾಂಬಿನೇಷನ್ ಮತ್ತೊಮ್ಮೆ ಒಂದಾಗೋಕೆ ಸಿದ್ಧವಾಗಿದೆ. ಈ ವಿಚಾರ ಕೇಳಿ ಫ್ಯಾನ್ಸ್ ಕೂಡ ಥ್ರಿಲ್ ಆಗಿದ್ದಾರೆ.
‘ದರ್ಶನ್ಗೆ ನಾನು ಸಿನಿಮಾ ಮಾಡೋದು ಖಚಿತ’ ಎಂದು ಸ್ವತಃ ದಿನಕರ್ ಅವರೇ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.