ADVERTISEMENT
Saturday, March 21, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

Dinesh Karthik : 37 ನೇ ವಯಸ್ಸಿನಲ್ಲಿ ಡಿಕೆ ದರ್ಬಾರ್..!!

Mahesh M Dhandu by Mahesh M Dhandu
June 18, 2022
in Newsbeat, Sports, ಕ್ರಿಕೆಟ್
T20 world cup

T20 world cup

Share on FacebookShare on TwitterShare on WhatsappShare on Telegram

Dinesh Karthik : 37 ನೇ ವಯಸ್ಸಿನಲ್ಲಿ ಡಿಕೆ ದರ್ಬಾರ್..!!

ಸ್ವೀಟ್ ಸಿಕ್ಸಿಟಿನ್ ಇಯರ್ಸ್ ಕ್ರಿಕೆಟ್ ಕೆರಿಯರ್.. 2006ರಲ್ಲಿ ಟೀಂ ಇಂಡಿಯಾದ ಪರ ಆಡಿದ ಮೊದಲ ಟಿ 20 ಪಂದ್ಯದಿಂದ ಹಿಡಿದು ಇಲ್ಲಿಯವರೆಗೂ ತಮ್ಮ ಬ್ಯಾಟಿಂಗ್ ನಲ್ಲಿ ಬದಲಾವಣೆ ಆಗಿಲ್ಲ ಅಂತಾ ದಿನೇಶ್ ಕಾರ್ತಿಕ್ ನಿರೂಪಿಸಿದ್ದಾರೆ. ಇಂಡಿಯನ್ ಪ್ರಿಮಿಯರ್ ಲೀಗ್ ನಲ್ಲಿನ ಫಾರ್ಮ್ ಅನ್ನು ಅಂತರಾಷ್ಟ್ರೀಯ ಮ್ಯಾಚ್ ಗಳಲ್ಲಿ ಮುಂದುವರಿಸುತ್ತಾರಾ ಎಂಬ ಸಂದೇಹಗಳಿಗೆ ಉತ್ತರದಂತೆ ದಿನೇಶ್ ಕಾರ್ತಿಕ್ ಬ್ಯಾಟ್ ಬೀಸುತ್ತಿದ್ದಾರೆ. ಅದ್ಭುತ ಪ್ರದರ್ಶನದ ಮೂಲಕ  37 ರ ವಯಸ್ಸಿನಲ್ಲೂ ದಿನೇಶ್ ಕಾರ್ತಿಕ್ ಟೀಂ ಇಂಡಿಯಾ ಆಯ್ಕೆಗಾರರಿಗೆ ವಿಶ್ವಕಪ್ ತಂಡದಲ್ಲಿ ಸ್ಥಾನಕ್ಕಾಗಿ ಸವಾಲುಗಳನ್ನು ಎಸೆಯುತ್ತಿದ್ದಾರೆ. ಅಲ್ಲದೇ ದಿನೇಶ್ ಕಾರ್ತಿಕ್ ಬಗ್ಗೆ ಟೀಕೆ ಮಾಡಿದ್ದವರಿಗೆ ಮುಟ್ಟಿ ನೋಡಿಕೊಳ್ಳುವಂತೆ ತಿರುಗೇಟು ನೀಡಿದ್ದಾರೆ.

Related posts

ಸಾಲದ ಶೂಲದಲ್ಲಿ ರಾಜ್ಯವಿದ್ದರೂ ಹೈಕಮಾಂಡ್ ಪಾಲಿಗೆ ಕರ್ನಾಟಕವೇ ಕಾಮಧೇನು ಡಿಕೆಶಿ ವಿರುದ್ಧ ಐಶ್ವರ್ಯ ಅನಂತಕುಮಾರ್ ನೇರ ವಾಗ್ದಾಳಿ

ಸಾಲದ ಶೂಲದಲ್ಲಿ ರಾಜ್ಯವಿದ್ದರೂ ಹೈಕಮಾಂಡ್ ಪಾಲಿಗೆ ಕರ್ನಾಟಕವೇ ಕಾಮಧೇನು ಡಿಕೆಶಿ ವಿರುದ್ಧ ಐಶ್ವರ್ಯ ಅನಂತಕುಮಾರ್ ನೇರ ವಾಗ್ದಾಳಿ

March 21, 2026
ಬಾಕ್ಸ್ ಆಫೀಸ್ ಸುಲ್ತಾನ್ ಧುರಂಧರ್ 2 ಅಬ್ಬರಕ್ಕೆ ಬೆಚ್ಚಿಬಿದ್ದ ಪಾಕಿಸ್ತಾನ: ಇದೊಂದು ಬಿಜೆಪಿ ಪ್ರಚಾರ, ಕಳಪೆ ಪ್ರೊಪಗಾಂಡಾ ಎಂದ ಧ್ರುವ್ ರಾಟಿಗೆ ನೆಟ್ಟಿಗರ ತರಾಟೆ!

ಬಾಕ್ಸ್ ಆಫೀಸ್ ಸುಲ್ತಾನ್ ಧುರಂಧರ್ 2 ಅಬ್ಬರಕ್ಕೆ ಬೆಚ್ಚಿಬಿದ್ದ ಪಾಕಿಸ್ತಾನ: ಇದೊಂದು ಬಿಜೆಪಿ ಪ್ರಚಾರ, ಕಳಪೆ ಪ್ರೊಪಗಾಂಡಾ ಎಂದ ಧ್ರುವ್ ರಾಟಿಗೆ ನೆಟ್ಟಿಗರ ತರಾಟೆ!

March 21, 2026

16 ವರ್ಷಗಳ ಕ್ರಿಕೆಟ್ ಜರ್ನಿಯಲ್ಲಿ ದಿನೇಶ್ ಕಾರ್ತಿಕ್, ದಕ್ಷಿಣ ಆಫ್ರಿಕಾ ಜೊತೆ ಜರುಗಿದ ನಾಲ್ಕನೇ ಟಿ 20 ಪಂದ್ಯದಲ್ಲಿ ಚೊಚ್ಚಲ ಅರ್ಧಶತಕ ಸಿಡಿಸಿದ್ದಾರೆ. 27 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ ದಿನೇಶ್ ಕಾರ್ತಿಕ್ ಇನ್ನಿಂಗ್ಸ್ ನಲ್ಲಿ ಒಂಭತ್ತು ಬೌಂಡರಿ, ಎರಡು ಸಿಕ್ಸರ್ ಗಳಿವೆ. ಈ ಅರ್ಧಶತಕದೊಂದಿಗೆ ದಿನೇಶ್ ಕಾರ್ತಿಕ್ ಒಂದು ಅಪರೂಪದ ದಾಖಲೆ ಬರೆದಿದ್ದಾರೆ.  ಅಲ್ಲದೆ ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಹೆಸರಿನಲ್ಲಿದ್ದ ದಾಖಲೆಯನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ.

ಟೀಂ ಇಂಡಿಯಾ ಪರ ಅತ್ಯಂತ ಹಿರಿಯ ವಯಸ್ಸಿನಲ್ಲಿ ಟಿ 20 ಕ್ರಿಕೆಟ್ ಮಾದರಿಯಲ್ಲಿ ಅರ್ಧ ಶತಕ ದಾಖಲಿಸಿದ ಆಟಗಾರರಾಗಿ ದಾಖಲೆ ಬರೆದಿದ್ದಾರೆ. ದಿನೇಶ್ ಕಾರ್ತಿಕ್ ಗೆ ಪ್ರಸ್ತುತ 37 ವರ್ಷ 16 ದಿನ.

dinesh-karthik-breaks-ms-dhoni-record saaksha tv
dinesh-karthik-breaks-ms-dhoni-record saaksha tv

ಈ ಹಿಂದೆ 36 ವರ್ಷ 229 ದಿನಗಳ ವಯಸ್ಸಿನಲ್ಲಿ ಮಹೇಂದ್ರ ಸಿಂಗ್ ಧೋನಿ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ದದಲ್ಲಿ ತಮ್ಮ ಕೆರಿಯರ್ ನ ಎರಡನೇ ಅರ್ಧಶತಕ ಸಿಡಿಸಿದ್ದರು. ಇನ್ನು ಈ ಪಟ್ಟಿಯಲ್ಲಿ ಟೀಂ ಇಂಡಿಯಾದ ಆರಂಭಿಕ ಆಟಗಾರ ಶಿಖರ್ ಧವನ್ 35ರ ಹರಯದಲ್ಲಿ ಟಿ 20 ಕ್ರಿಕೆಟ್ ನಲ್ಲಿ ಅರ್ಧಶತಕ ಸಿಡಿಸಿದ್ದರು.

ಅಂದಹಾಗೆ ದಿನೇಶ್ ಕಾರ್ತಿಕ್ ತಮ್ಮ ಈ ಇನ್ನಿಂಗ್ಸ್ ಮೂಲಕ ಟೀಂ ಇಂಡಿಯಾದ ಮಾಜಿ ಆಟಗಾರ ಗೌತಮ್ ಗಂಭೀರ್ ಗೆ ತಿರುಗೇಟು ನೀಡಿದ್ದಾರೆ. ದಿನೇಶ್ ಕಾರ್ತಿಕ್ ಬಗ್ಗೆ ಈ ಹಿಂದೆ ಗಂಭೀರ್ “ಕಾರ್ತಿಕ್ ಇನ್ನಿಂಗ್ಸ್ ನ ಕೊನೆಯಲ್ಲಿ ಬ್ಯಾಟಿಂಗ್ ಗೆ ಬಂದು ಎರಡು ಮೂರು ಓವರ್ ಗಳಲ್ಲಿ ಮಾತ್ರ ಆಡುತ್ತೇನೆ ಅಂದ್ರೆ ಆಗುವುದಿಲ್ಲ. ಟೀಂ ಇಂಡಿಯಾ ದಿನೇಶ್ ಕಾರ್ತಿಕ್ ರಂತಹ ಮ್ಯಾಚ್ ಫಿನಿಷರ್ ಗಳಿಗಾಗಿ ಹುಡುಕಾಟ ನಡೆಸುತ್ತಿದೆ.  ಆದ್ರೆ ಆ ಜವಾಬ್ದಾರಿಯನ್ನು ಒಬ್ಬ ಆಲ್ ರೌಂಡರ್ ವಹಿಸಿಕೊಂಡರೇ ಚೆನ್ನಾಗಿರುತ್ತದೆ. ಅಲ್ಲದೇ ದಿನೇಶ್ ಕಾರ್ತಿಕ್ ಕೇವಲ ಎರಡು ಮೂರು ಓವರ್ ಗಳಲ್ಲಿ ಆಡುವುದಕ್ಕೆ ಸೀಮಿತವಾದರೇ ಅವರನ್ನ ವಿಶ್ವಕಪ್ ಗೆ ಆಯ್ಕೆ ಮಾಡುವುದು ಸೂಕ್ತವಲ್ಲ ಎಂದು ಗಂಭೀರ್ ವಾದಿಸಿದ್ದರು.

ಇದೀಗ ದಕ್ಷಿಣ ಆಫ್ರಿಕಾ ವಿರುದ್ಧದ ನಾಲ್ಕನೇ ಟಿ 20 ಪಂದ್ಯದಲ್ಲಿ ದಿನೇಶ್ ಕಾರ್ತಿಕ್ ಲಾಂಗ್ ಇನ್ನಿಂಗ್ಸ್ ಆಡುವ ಮೂಲಕ ಗಂಭೀರ್ ಗೆ ತಿರುಗೇಟು ನೀಡಿದ್ದಾರೆ.

Tags: #dinesh karthik#Saaksha TVCricketMS Dhoni
ShareTweetSendShare
Join us on:

Related Posts

ಸಾಲದ ಶೂಲದಲ್ಲಿ ರಾಜ್ಯವಿದ್ದರೂ ಹೈಕಮಾಂಡ್ ಪಾಲಿಗೆ ಕರ್ನಾಟಕವೇ ಕಾಮಧೇನು ಡಿಕೆಶಿ ವಿರುದ್ಧ ಐಶ್ವರ್ಯ ಅನಂತಕುಮಾರ್ ನೇರ ವಾಗ್ದಾಳಿ

ಸಾಲದ ಶೂಲದಲ್ಲಿ ರಾಜ್ಯವಿದ್ದರೂ ಹೈಕಮಾಂಡ್ ಪಾಲಿಗೆ ಕರ್ನಾಟಕವೇ ಕಾಮಧೇನು ಡಿಕೆಶಿ ವಿರುದ್ಧ ಐಶ್ವರ್ಯ ಅನಂತಕುಮಾರ್ ನೇರ ವಾಗ್ದಾಳಿ

by Shwetha
March 21, 2026
0

ಬೆಂಗಳೂರು ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರವು ಕರ್ನಾಟಕವನ್ನು ಕೇವಲ ತನ್ನ ಪಕ್ಷದ ಹೈಕಮಾಂಡ್‌ಗೆ ಹಣ ಒದಗಿಸುವ ಮೂಲವನ್ನಾಗಿ ಮಾಡಿಕೊಂಡಿದೆ ಎಂದು ದಿವಂಗತ ಕೇಂದ್ರ ಸಚಿವ ಹಾಗೂ...

ಬಾಕ್ಸ್ ಆಫೀಸ್ ಸುಲ್ತಾನ್ ಧುರಂಧರ್ 2 ಅಬ್ಬರಕ್ಕೆ ಬೆಚ್ಚಿಬಿದ್ದ ಪಾಕಿಸ್ತಾನ: ಇದೊಂದು ಬಿಜೆಪಿ ಪ್ರಚಾರ, ಕಳಪೆ ಪ್ರೊಪಗಾಂಡಾ ಎಂದ ಧ್ರುವ್ ರಾಟಿಗೆ ನೆಟ್ಟಿಗರ ತರಾಟೆ!

ಬಾಕ್ಸ್ ಆಫೀಸ್ ಸುಲ್ತಾನ್ ಧುರಂಧರ್ 2 ಅಬ್ಬರಕ್ಕೆ ಬೆಚ್ಚಿಬಿದ್ದ ಪಾಕಿಸ್ತಾನ: ಇದೊಂದು ಬಿಜೆಪಿ ಪ್ರಚಾರ, ಕಳಪೆ ಪ್ರೊಪಗಾಂಡಾ ಎಂದ ಧ್ರುವ್ ರಾಟಿಗೆ ನೆಟ್ಟಿಗರ ತರಾಟೆ!

by Shwetha
March 21, 2026
0

ಉರಿ: ದಿ ಸರ್ಜಿಕಲ್ ಸ್ಟ್ರೈಕ್ ಖ್ಯಾತಿಯ ನಿರ್ದೇಶಕ ಆದಿತ್ಯ ಧರ್ ಅವರ ಬಹುನಿರೀಕ್ಷಿತ ಧುರಂಧರ್ 2: ದಿ ರಿವೆಂಜ್ ಸಿನಿಮಾ ಬಿಡುಗಡೆಯಾದ ಮೊದಲ ದಿನವೇ ಬಾಕ್ಸ್ ಆಫೀಸ್‌ನಲ್ಲಿ...

ಪವರ್ ಪೆಟ್ರೋಲ್ ದರ ಏರಿಕೆ.. ದೇಶಾದ್ಯಂತ ಹೊಸ ದರ ಜಾರಿ

ಪವರ್ ಪೆಟ್ರೋಲ್ ದರ ಏರಿಕೆ.. ದೇಶಾದ್ಯಂತ ಹೊಸ ದರ ಜಾರಿ

by Shwetha
March 21, 2026
0

ದೇಶಾದ್ಯಂತ ‘ಪವರ್’ ಪೆಟ್ರೋಲ್ ದರಗಳಲ್ಲಿ ಏರಿಕೆ ಮಾಡಲಾಗಿದೆ. ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳಾದ HPCL, BPCL ಹಾಗೂ IOCL ಲೀಟರ್‌ಗೆ ಸುಮಾರು ₹2.09 ರಿಂದ ₹2.35 ರವರೆಗೆ...

ಇರಾನ್ ವಿಚಾರದಲ್ಲಿ ಕೇಂದ್ರದ ನಿಲುವಿಗೆ ತರೂರ್ ಬೆಂಬಲ

ಇರಾನ್ ವಿಚಾರದಲ್ಲಿ ಕೇಂದ್ರದ ನಿಲುವಿಗೆ ತರೂರ್ ಬೆಂಬಲ

by Shwetha
March 21, 2026
0

ಇರಾನ್ ಸಂಬಂಧಿತ ವಿಷಯದಲ್ಲಿ ಕೇಂದ್ರ ಸರ್ಕಾರದ ‘ಮೌನ’ವನ್ನು ಶಶಿ ತರೂರ್ ಸಮರ್ಥಿಸಿಕೊಂಡಿದ್ದಾರೆ. ಈ ಮೂಲಕ ಅವರು ತಮ್ಮದೇ ಪಕ್ಷದ ನಿಲುವಿಗೆ ವಿರುದ್ಧವಾಗಿ ಮತ್ತೊಮ್ಮೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇತ್ತೀಚಿನ...

ಸಿದ್ದರಾಮಯ್ಯ v/s ಡಿಕೆಶಿ ಪ್ರತಿಷ್ಠೆಯ ಕಣವಾದ ದಾವಣಗೆರೆ : ಶಾಮನೂರು ಕುಟುಂಬದ ಹಠಕ್ಕೆ ಮಣಿಯುತ್ತಾ ಹೈಕಮಾಂಡ್? ಅಲ್ಪಸಂಖ್ಯಾತ ಅಸ್ತ್ರ ಪ್ರಯೋಗಿಸಿದ ಸಿದ್ದರಾಮಯ್ಯ

ಸಿದ್ದರಾಮಯ್ಯ v/s ಡಿಕೆಶಿ ಪ್ರತಿಷ್ಠೆಯ ಕಣವಾದ ದಾವಣಗೆರೆ : ಶಾಮನೂರು ಕುಟುಂಬದ ಹಠಕ್ಕೆ ಮಣಿಯುತ್ತಾ ಹೈಕಮಾಂಡ್? ಅಲ್ಪಸಂಖ್ಯಾತ ಅಸ್ತ್ರ ಪ್ರಯೋಗಿಸಿದ ಸಿದ್ದರಾಮಯ್ಯ

by Shwetha
March 21, 2026
0

ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಕಣ ರಂಗೇರಿದ್ದು, ಕಾಂಗ್ರೆಸ್ ಟಿಕೆಟ್ ಹಂಚಿಕೆ ವಿಚಾರ ಈಗ ದೆಹಲಿ ಮಟ್ಟದಲ್ಲಿ ಭಾರೀ ಸದ್ದು ಮಾಡುತ್ತಿದೆ. ಬೆಣ್ಣೆ ನಗರಿಯ ರಾಜಕೀಯದಲ್ಲಿ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram