Dinesh Karthik | ಒಬ್ಬ ಆಟಗಾರ.. 11 ಮಂದಿ ಕ್ಯಾಪ್ಟನ್ಸ್..
ಇಂಡಿಯನ್ ಪ್ರಿಮಿಯರ್ ಲೀಗ್ ನಲ್ಲಿ ಸಾಮರ್ಥ್ಯ ಸಾಭೀತು ಪಡಿಸಿ ಟೀಂ ಇಂಡಿಯಾಗೆ ರೀ ಎಂಟ್ರಿ ಕೊಟ್ಟ ಹಿರಿಯ ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್ ಅಂತರಾಷ್ಟ್ರೀಯ ಕ್ರಿಕೆಟ್ ನಲ್ಲಿ ಒಂದು ಅಪರೂಪದ ದಾಖಲೆಯನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ.
ಇನ್ನೇನು ಕ್ರಿಕೆಟ್ ಕೆರಿಯರ್ ಮುಗಿದೇ ಹೋಯ್ತ ಅನ್ನುವಷ್ಟರಲ್ಲಿ ಟೀಂ ಇಂಡಿಯಾಗೆ ಎಂಟ್ರಿ ಪಡೆದ ದಿನೇಶ್ ಕಾರ್ತಿಕ್, ಅಂತರಾಷ್ಟ್ರೀಯ ಕ್ರಿಕೆಟ್ ನಲ್ಲಿ ಬರೋಬ್ಬರಿ 10 ಮಂದಿ ನಾಯಕರ ಜೊತೆಯಾಡಿದ ದಾಖಲೆಯನ್ನು ನಿರ್ಮಿಸಿದ್ಧಾರೆ.
ಅಂತರಾಷ್ಟ್ರೀಯ ಕ್ರಿಕೆಟ್ ನಲ್ಲಿ ಒಬ್ಬ ಆಟಗಾರ ಇಷ್ಟು ಮಂದಿ ಕ್ಯಾಪ್ಟನ್ ಕೆಳಗೆ ಆಡಿದ ದಾಖಲೆಗಳೇ ಇಲ್ಲ.
ಐಸಿಸಿ ಈವೆಂಟ್ ಸೇರಿಸಿಕೊಂಡರೇ ದಿನೇಶ್ ಕಾರ್ತಿಕ್ ಕ್ಯಾಪ್ಟನ್ ಗಳ ಸಂಖ್ಯೆ 11ಕ್ಕೆ ಏರಲಿದೆ.
ದಿನೇಶ್ ಕಾರ್ತಿಕ್ ಪಾಕಿಸ್ತಾನ ಕ್ರಿಕೆಟ್ ತಂಡದ ದಿಗ್ಗಜ ಆಟಗಾರ ಶಾಹಿದ್ ಅಫ್ರಿದಿ ನಾಯಕತ್ವದಲ್ಲಿ ಐಸಿಸಿ ಇಲೆವೆನ್ ನಲ್ಲಿ ಕಾಣಿಸಿಕೊಂಡಿದ್ದರು.
ಇತ್ತೀಚೆಗಷ್ಟೆ 37 ವಸಂತಕ್ಕೆ ಕಾಲಿಟ್ಟ ದಿನೇಶ್ ಕಾರ್ತಿಕ್ ಶೀಘ್ರದಲ್ಲಿಯೇ ಅಂತರಾಷ್ಟ್ರೀಯ ತನ್ನ ನಾಯಕರ ಸಂಖ್ಯೆಯನ್ನು 12ಕ್ಕೆ ಏರಿಸಿಕೊಳ್ಳಲಿದ್ದಾರೆ.
ಕಾರ್ತಿಕ್ ಇನ್ನೇನು ಕೆಲವೇ ದಿನಗಳಲ್ಲಿ ನಡೆಯಲಿರುವ ಐರ್ಲೆಂಡ್ ಪ್ರವಾಸದಲ್ಲಿ ಹಾರ್ದಿಕ್ ಪಾಂಡ್ಯ ಕ್ಯಾಪ್ಟನ್ಸಿಯಲ್ಲಿ ಆಡಲಿದ್ದಾರೆ.

18 ವರ್ಷಗಳ ಹಿಂದೆ 2004 ರಲ್ಲಿ ಮೊದಲ ಬಾರಿಗೆ ಟೀಂ ಇಂಡಿಯಾಗೆ ಎಂಟ್ರಿ ಕೊಟ್ಟ ದಿನೇಶ್ ಕಾರ್ತಿಕ್, ತನ್ನ ಮೊದಲ ಪಂದ್ಯದಲ್ಲಿ ಸೌರವ್ ಗಂಗೂಲಿ ಕ್ಯಾಪ್ಟನ್ಸಿಯಲ್ಲಿ ಆಡಿದ್ದರು.
ಆ ನಂತರ ರಾಹುಲ್ ದ್ರಾವಿಡ್, ವಿರೇಂದ್ರ ಸೆಹ್ವಾಗ್, ಎಂ.ಎಸ್.ಧೋನಿ, ಅನಿಲ್ ಕುಂಬ್ಳೆ, ಸುರೇಶ್ ರೈನಾ, ಅಜಿಂಕ್ಯಾ ರಹಾನೆ, ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ರಿಷಬ್ ಪಂತ್ ನಾಯಕತ್ವದಲ್ಲಿ ಟಿಂ ಇಂಡಿಯಾವನ್ನು ಪ್ರತಿನಿಧಿಸಿದ್ದಾರೆ.
ಅಂದಹಾಗೆ 2022ರ ಇಂಡಿಯನ್ ಪ್ರಿಮಿಯರ್ ಲೀಗ್ ನಲ್ಲಿ ದಿನೇಶ್ ಕಾರ್ತಿಕ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಪ್ರತಿನಿಧಿಸಿದ್ದರು. ಈ ಸೀಸನ್ ನಲ್ಲಿ ಆರ್ ಸಿಬಿ ಪರ ಮ್ಯಾಚ್ ಫಿನಿಷರ್ ರೋಲ್ ಪ್ಲೇ ಮಾಡಿದ ದಿನೇಶ್ ಕಾರ್ತಿಕ್ ಅದ್ಭುತ ಇನ್ನಿಂಗ್ಸ್ ಗಳನ್ನು ಆಡಿದ್ದರು.
ಈ ಬಾರಿ ಆರ್ ಸಿಬಿ ಪರ 16 ಪಂದ್ಯಗಳನ್ನಾಡಿದ ಡಿಕೆ 55ರ ಸರಾಸರಿಯಲ್ಲಿ 330 ರನ್ ಗಳಿಸಿದ್ದಾರೆ. 183.33 ರ ಸ್ಟ್ರೈಕ್ ರೇಡ್ ನಲ್ಲಿ ಬ್ಯಾಟ್ ಬೀಸಿದ ಕಾರ್ತಿಕ್, 27 ಬೌಂಡರಿ, 22 ಸಿಕ್ಸರ್ ಗಳನ್ನು ಬಾರಿಸಿದ್ದಾರೆ.
ಈ ಪ್ರದರ್ಶನದ ಹಿನ್ನೆಲೆಯಲ್ಲಿ ಬರೋಬ್ಬರಿ ಮೂರು ವರ್ಷಗಳ ನಂತರ ದಿನೇಶ್ ಕಾರ್ತಿಕ್ ಟೀಂ ಇಂಡಿಯಾಗೆ ರೀ ಎಂಟ್ರಿ ಕೊಟ್ಟಿದ್ದಾರೆ.
ದಕ್ಷಿಣ ಆಫ್ರಿಕಾ ವಿರುದ್ಧದ ಐದು ಪಂದ್ಯಗಳ ಟಿ 20 ಸರಣಿಯಲ್ಲಿ ಸಿಕ್ಕ ಅವಕಾಶವನ್ನು ದಿನೇಶ್ ಕಾರ್ತಿಕ್ ಉತ್ತಮವಾಗಿ ಬಳಿಸಿಕೊಂಡಿದ್ದಾರೆ.
ಸದ್ಯ ಐರ್ಲೆಂಡ್ ಪ್ರವಾಸಕ್ಕೆ ಆಯ್ಕೆ ಆಗಿರುವ ದಿನೇಶ್ ಕಾರ್ತಿಕ್ ಅಕ್ಟೋಬರ್ – ನವೆಂಬರ್ ನಲ್ಲಿ ನಡೆಯಲಿರುವ ಟಿ 20 ವಿಶ್ವಕಪ್ ನಲ್ಲಿ ಕಾಣಿಸಿಕೊಳ್ಳುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಕ್ರಿಕೆಟ್ ಪಂಡಿತರು ಅಂದಾಜಿಸುತ್ತಿದ್ದಾರೆ.








