IPL | ಹಾರ್ದಿಕ್ ಪಾಂಡ್ಯಗೆ ಸಿಗುತ್ತಾ ಟೀಂ ಇಂಡಿಯಾ ನಾಯಕತ್ವ..?
ತವರಿನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಟೀಂ ಇಂಡಿಯಾ 5 ಟಿ20 ಪಂದ್ಯಗಳ ಸರಣಿಯನ್ನು ಆಡಲಿದೆ. ಮೊದಲ ಪಂದ್ಯ ಜೂನ್ 9 ರಂದು ದೆಹಲಿಯಲ್ಲಿ ನಡೆಯಲಿದೆ.
ಬಿಸಿಸಿಐ ಮೇ 25 ರಂದು ಸರಣಿಗೆ ಭಾರತ ತಂಡವನ್ನು ಆಯ್ಕೆ ಮಾಡಲಿದೆ.
ಈ ಸರಣಿಗಾಗಿ ಐಪಿಎಲ್-2022 ರಲ್ಲಿ ಅಬ್ಬರಿಸುತ್ತಿರುವ ಯುವ ಹಾಗೂ ಅನುಭವಿ ಆಟಗಾರರನ್ನು ಆಯ್ಕೆ ಮಾಡುವ ಸಾಧ್ಯತೆಗಳಿವೆ.
SRH ವೇಗಿ ಉಮ್ರಾನ್ ಮಲಿಕ್, ಲಕ್ನೋ ವೇಗಿ ಮೊಹ್ಶಿನ್ ಖಾನ್ ಮತ್ತು ಅನುಭವಿ ದಿನೇಶ್ ಕಾರ್ತಿಕ್ ಅವರು ದಕ್ಷಿಣ ಆಫ್ರಿಕಾ ಸರಣಿಗೆ ಆಯ್ಕೆಯಾಗುವ ಸಾಧ್ಯತೆಗಳಿವೆ.
ಮಲಿಕ್ ಮತ್ತು ಮೊಹ್ಶಿನ್ ಖಾನ್ ಈ ವರ್ಷದ ಐಪಿಎಲ್ ಋತುವಿನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ.
ಮಲಿಕ್ ಇದುವರೆಗೆ 13 ಪಂದ್ಯಗಳಿಂದ 21 ವಿಕೆಟ್ ಪಡೆದಿದ್ದಾರೆ.ಮೊಹ್ಶಿನ್ 8 ಪಂದ್ಯಗಳಲ್ಲಿ 13 ವಿಕೆಟ್ ಪಡೆದಿದ್ದಾರೆ.
ಅದೇ ರೀತಿ ಕೆಲ ಸಮಯದಿಂದ ಭಾರತ ತಂಡದಿಂದ ಹೊರಗುಳಿದಿರುವ ಅನುಭವಿ ಆಟಗಾರ ಶಿಖರ್ ಧವನ್ ಮತ್ತು ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಕೂಡ ತಂಡಕ್ಕೆ ಮರಳಲಿದ್ದಾರೆ.
ಸರಣಿಯಲ್ಲಿ ಭಾರತ ತಂಡವನ್ನು ಹಾರ್ದಿಕ್ ಮುನ್ನಡೆಸುವ ಸಾಧ್ಯತೆ ಇದೆ. ಯಾಕಂದರೇ ಈ ಸರಣಿಯಿಂದ ಟೀಂ ಇಂಡಿಯಾದ ಕೆಲವು ಆಟಗಾರರಿಗೆ ರೆಸ್ಟ್ ನೀಡುವ ಸಾಧ್ಯತೆಗಳಿವೆ.ಹೀಗಾಗಿ ಹಾರ್ದಿಕ್ ಗೆ ಪಟ್ಟ ನೀಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.