Dinesh karthik | ಮೊದಲ ಬಾರಿ ಬೌಲಿಂಗ್ ಮಾಡಿದ ದಿನೇಶ್ ಕಾರ್ತಿಕ್
ಏಷ್ಯಾಕಪ್ 2022 ರಲ್ಲಿ ಟೀಂ ಇಂಡಿಯಾ ಆಟ ಮುಗಿದಿದೆ. ದುಬೈ ವೇದಿಕೆಯಾಗಿ ನಡೆದ ಅಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ಟೀಂ ಇಂಡಿಯಾ 102 ರನ್ ಗಳ ಅಂತರದೊಂದಿಗೆ ಗೆಲುವು ಸಾಧಿಸಿದೆ.
ಈ ಮ್ಯಾಚ್ ನಲ್ಲಿ ಟೀಂ ಇಂಡಿಯಾ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಅದ್ಭುತ ಇನ್ನಿಂಗ್ಸ್ ಕಟ್ಟಿದ್ರು. 1020 ದಿನಗಳ ಬಳಿಕ ವಿರಾಟ್ ಕೊಹ್ಲಿ ಸೆಂಚೂರಿ ಸಿಡಿಸಿದ್ರು.
ನಾಮಕಾವಸ್ತೆಯ ಪಂದ್ಯದಲ್ಲಿ ಕೊಹ್ಲಿ ಆಕಾಶವೇ ಮಿತಿ ಎಂಬಂತೆ ಮಿಂಚಿದ್ರು.
61 ಎಸೆತಗಳಲ್ಲಿ 12 ಬೌಂಡರಿ, 6 ಸಿಕ್ಸರ್ ಗಳೊಂದಿಗೆ 122 ರನ್ ಗಳನ್ನು ಗಳಿಸಿದರು.

ವಿರಾಟ್ ಕೊಹ್ಲಿ ಭುವನೇಶ್ವರ್ ಕುಮಾರ್ ನಾಲ್ಕು ರನ್ ನೀಡಿ ಐದು ವಿಕೆಟ್ ಪಡೆದರು.
ಇದು ಹೀಗಿದ್ದರೇ ಈ ಮ್ಯಾಚ್ ನಲ್ಲಿ ಟೀಂ ಇಂಡಿಯಾದ ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್ ಬೌಲಿಂಗ್ ಮಾಡಿ ಅಚ್ಚರಿ ಪಡಿಸಿದ್ರು.
ಕಾರ್ತಿಕ್ ತಮ್ಮ ಕ್ರಿಕೆಟ್ ಕೆರಿಯರ್ ನಲ್ಲಿ ಬೌಲಿಂಗ್ ಮಾಡಿದ್ದು ಇದೇ ಮೊದಲು. ಅಫ್ಘಾನ್ ಇನ್ನಿಂಗ್ಸ್ ನ ಕೊನೆಯ ಓವರ್ ಮಾಡಿದ ದಿನೇಶ್ ಕಾರ್ತಿಕ್ 18 ರನ್ ಗಳನ್ನು ನೀಡಿದರು.
ಇದಕ್ಕೆ ಸಂಬಂಧಿಸಿದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.








