ಡಿಪ್ಲೊಮಾ ಕೋರ್ಸ್‍ಗಳಲ್ಲಿ ಪ್ರಮುಖ ಬದಲಾವಣೆಗಳು – 8 ಹೊಸ ಕೋರ್ಸ್ ಗಳಿಗೆ ಚಾಲನೆ..!
ಡಿಪ್ಲೊಮಾ ಕೋರ್ಸ್‍ಗಳ ಅಡ್ಮಿಷನ್ ಆರಂಭವಾಗಿದೆ.. ಈ ನಡುವೆ ರಾಜ್ಯ ಸರ್ಕಾರ ಎನ್ ಇಪಿ ಅಡಿಯಲ್ಲಿ ಸಾಕಷ್ಟು ಬದಲಾವಣೆಗಳನ್ನ ಮಾಡಿದೆ.. ಅಲ್ಲದೇ ಹೊಸದಾಗಿ 8 ಹೊಸ ಕೋರ್ಸ್‍ಗಳನ್ನ ಆರಂಭ ಮಾಡಿದೆ.. ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು 8 ಕೋರ್ಸ್‍ಗಳಿಗೆ ಚಾಲನೆ ನೀಡಿದ್ದಾರೆ. ವಿಧಾನಸೌಧದಲ್ಲಿ ಹೊಸ ಕೋರ್ಸ್‍ಗಳಿಗೆ ಚಾಲನೆ ನೀಡಿದ ಅಶ್ವಥ್ ನಾರರಾಯಣ್ ಅವರು ರಾಜ್ಯದಲ್ಲಿ ಹೆಚ್ಚು ಉದ್ಯೋಗಾವಕಾಶ ಸೃಷ್ಟಿಸುವ ಜೊತೆಗೆ , ಕೈಗಾರಿಕೆಗಳಿಗೆ ಮಾನವ ಸಂಪನ್ಮೂಲ ಒದಗಿಸಸುವುದಕ್ಕೆ ಹೊಸ ಕೋರ್ಸ್ ಗಳು ಸಹಾಯಕವಾಗಲಿವೆ ಎಂದಿದ್ದಾರೆ.
ಡಿಪ್ಲೊಮದಲ್ಲಿ ಸದ್ಯ 33 ಕೋರ್ಸ್ ಗಳು ಇವೆ. ಇವುಗಳಲ್ಲಿ ಹಳೆಯ, ಅಪ್ರಸ್ತುತ ಕೋರ್ಸುಗಳನ್ನು ಕೈಬಿಡಲಾಗಿದೆ. ಈಗಾಗಲೇ ಹೊಸ ಪಠ್ಯವನ್ನು ಅಳವಡಿಸಲಾಗಿದೆ. ಈಗ 21ನೇ ಶತಮಾನದ ಬೇಡಿಕೆ ಪೂರೈಸುವ ನಿಟ್ಟಿನಲ್ಲಿ ಎಂಟು ಹೊಸ ಕೋರ್ಸ್ ಗಳನ್ನೂ ಈ ವರ್ಷದಿಂದಲೇ ಆರಂಭಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಹೊಸ ಕೋರ್ಸ್‍ಗಳ ಪಟ್ಟಿ
ಸೈಬರ್ ಸೆಕ್ಯೂರಿಟಿ
ಆಟೋಮೇಷನ್
ಲಾಜಿಸ್ಟಿಕ್ಸ್ ಟೆಕ್ನಾಲಜ
ಟ್ರಾವೆಲ್ ಅಂಡ್ ಟೂರಿಸ
ಡೈರೆಕ್ಷನ್
ಸ್ಕ್ರೀನ್ ಫ್ಲೇ ಅಂಡ್ ಟಿವಿ ಪ್ರೊಡಕ್ಷನ್
ಕ್ಲೌಡ್ ಕಂಪ್ಯೂಟಿಂಗ್ ಅಂಡ್ ಬಿಗ್ ಡೇಟಾ
ಫುಡ್ ಪ್ರೊಸೆಸಿಂಗ್ ಅಂಡ್ ಪ್ರಿಸವ್ರೇಷನ್
ಈ ಬಗ್ಗೆ ಟ್ವಿಟ್ ಮಾಡಿ ಮಾಹಿತಿ ನೀಡಿದ್ದ ಅಅಶ್ವಥ್ ನಾರಾಯಣ್ ಅವರು ಉದ್ಯಮ 4.0 ಅಪೇಕ್ಷಿಸುವ ಜ್ಞಾನ ಮತ್ತು ಕೌಶಲ್ಯಗಳನ್ನು ನೀಡುವಂತಹ ಹೊಸ ಉದ್ಯೋನ್ಮುಖ ಕ್ಷೇತ್ರಗಳಲ್ಲಿ 2021-22ನೇ ಸಾಲಿನಲ್ಲಿ ಹೊಸ ಕೋರ್ಸುಗಳಿಗೆ ಪ್ರವೇಶಾತಿ ಆಗಲಿದೆ ಎಂದಿದ್ದಾರೆ.








