Syed Ashraf – ನಟ ಸಯ್ಯದ್ ಅಶ್ರಫ್ ಹೃದಯಾಘಾತದಿಂದ ನಿಧನ
ಕಿರುತೆರೆ ನಿರ್ದೇಶಕ, ನಟ ಸಯ್ಯದ್ ಅಶ್ರಫ್ ತೀವ್ರ ಹೃದಯಾಘಾತದಿಂದ ನಿಧನರಾಗಿದ್ದಾರೆ.
ಕನ್ನಡ ಕಿರುತೆರೆಯಲ್ಲಿ ನಟರಾಗಿ, ನಿರ್ದೇಶಕರಾಗಿ ಗುರುತಿಸಿಕೊಂಡಿದ್ದು ಇಂದು ಬೆಳಗ್ಗೆ ಮೂರು ಗಂಟೆಗೆ ತೀವ್ರ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ.
ಅಮ್ಮ ನಾಗಮ್ಮ, ನಾಗಮಣಿ, ಪಾಂಡುರಂಗ, ಚಕ್ರವಾಕ, ತಕಧಿಮಿತಾ, ಅಳುಗುಳಿಮನೆ ಸೇರಿದಂತೆ ಸಾವಿರಾರು ಕಂತುಗಳಲ್ಲಿ ಪ್ರಸಾರವಾಗಿರುವ ಧಾರಾವಾಹಿಗಳಿಗೆ ಇವರು ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ.
ಅದರಲ್ಲೂ ಬಿ.ಸುರೇಶ ಅವರ ಸಾರಥ್ಯದಲ್ಲಿ ಮೂಡಿ ಬಂದ ಹಲವಾರು ಧಾರಾವಾಹಿಗಳಿಗೆ ಇವರದ್ದೇ ನಿರ್ದೇಶನವಿದೆ.
ಸಯ್ಯದ್ ಅಶ್ರಫ್ ನಿಧನಕ್ಕೆ ಬಿ.ಸುರೇಶ, ಶೈಲಜಾ ನಾಗ್ ಹಾಗೂ ಕರ್ನಾಟಕ ಟೆಲಿವಿಷನ್ ಅಸೋಸಿಯೇಷನ್ ಅಧ್ಯಕ್ಷ ಎಸ್.ವಿ. ಶಿವಕುಮಾರ್ ಸಂತಾಪ ವ್ಯಕ್ತ ಪಡಿಸಿದ್ದಾರೆ.