ಘೋರ ವೈಫಲ್ಯ.. ಕೊಹ್ಲಿ ಸೇನೆ ವಿರುದ್ಧ ದಾದಾ ಗರಂ Ganguly Saaksha tv
ನಿಜ ಹೇಳಬೇಕೆಂದರೆ 2017 ಮತ್ತು 2019ರಲ್ಲಿ ಟೀಂ ಇಂಡಿಯಾ ಉತ್ತಮವಾಗಿ ಆಡಿದೆ. 2017ರ ಚಾಂಪಿಯನ್ಸ್ ಟ್ರೋಫಿಯ ಅಂಗವಾಗಿ ಓವಲ್‍ನಲ್ಲಿ ನಡೆದ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಸೋತರು ಟೂರ್ನಿಯಲ್ಲಿ ಟೀಂ ಇಂಡಿಯಾ ಉತ್ತಮವಾಗಿ ಆಡಿತ್ತು. ಆಗ ನಾನು ವೀಕ್ಷಕ ವಿವರಣೆಗಾರನಾಗಿದ್ದೆ.
ಇನ್ನು ಇಂಗ್ಲೆಂಡ್ ನಲ್ಲಿ ನಡೆದ 2019ರ ವಿಶ್ವಕಪ್ ನಲ್ಲೂ ನಮ್ಮ ತಂಡವು ತುಂಬಾ ಚೆನ್ನಾಗಿ ಆಡಿದೆ. ಆದರೆ ಸೆಮಿಫೈನಲ್‍ನಲ್ಲಿ ನ್ಯೂಜಿಲೆಂಡ್ ವಿರುದ್ಧ ಸೋಲನುಭವಿಸಿ ನಿರಾಸೆ ಅನುಭವಿಸಿತು.
ಆಗ ನನಗೆ ಸ್ವಲ್ಪ ನಿರಾಸೆಯಾಯಿತು. ಆದರೆ, ಈ ಬಾರಿಯ ಕಳಪೆ ಪ್ರದರ್ಶನ, ಕಳೆದ ನಾಲ್ಕು ವರ್ಷಗಳ ಎಲ್ಲಾ ಸೋಲಿನ ಅತ್ಯಂತ ಹೀನಾಯ ವೈಫಲ್ಯ,” ಎಂದು ಟೀಂ ಇಂಡಿಯಾದ ಮಾಜಿ ನಾಯಕ ಹಾಗೂ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಹೇಳಿದ್ದಾರೆ.
ಯೂಟೂಬ್ ಚಾನಲ್ ನಲ್ಲಿ ಟಿ 20 ವಿಶ್ವಕಪ್ ಟೂರ್ನಿ ಬಗ್ಗೆ ಗಂಗೂಲಿ ಮಾತನಾಡಿದ್ದಾರೆ. 2021ರ ಟಿ 20 ವಿಶ್ವಕಪ್ ನಲ್ಲಿ ಟೀಂ ಇಂಡಿಯಾದ ಪ್ರದರ್ಶನ ನಿರಾಶಾದಾಯಕವಾಗಿತ್ತು ಎಂದು ದಾದಾ ಅಭಿಪ್ರಾಯಪಟ್ಟಿದ್ದಾರೆ.
ಟಿ 20 ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾ ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ವಿರುದ್ಧ ಹೀನಾಯವಾಗಿ ಸೋಲುಂಡಿತ್ತು. ಬಳಿಕ ಎಲ್ಲಾ ಮ್ಯಾಚ್ ಗಳನ್ನು ಗೆದ್ದರೂ ಸೆಮೀಸ್ ಪ್ರವೇಶಿಸಲು ಸಾಧ್ಯವಾಗದೇ ಖಾಲಿ ಕೈಗಳಲ್ಲಿ ಟೀಂ ಇಂಡಿಯಾ ಆಟಗಾರರು ಭಾರತಕ್ಕೆ ವಾಪಸ್ ಆದರು. ಇದರಿಂದ ಟೀಂ ಇಂಡಿಯಾ ಆಟಗಾರರ ಮೇಲೆ ಭಾರಿ ಟೀಕೆಗಳು ವ್ಯಕ್ತವಾದವು. ಐಪಿಎಲ್ ಆಡುವುದರ ಮೇಲಿರುವ ಶ್ರದ್ಧೆ ದೇಶಕ್ಕಾಗಿ ಆಡುವಾಗ ಎಲ್ಲಿ ಹೋಗಿರುತ್ತದೆ ಎಂದು ಆಕ್ರೋಶ ಹೊರಹಾಕಿದರು.’
ಈ ಬಗ್ಗೆ ಸಂದರ್ಶನದಲ್ಲಿ ಗಂಗೂಲಿ ಮಾತನಾಡಿದ್ದು, ಏನಾಯಿತು ಎಂದು ನನಗೆ ತಿಳಿದಿಲ್ಲ ಆದರೆ, ವಿಶ್ವಕಪ್ ನಲ್ಲಿ ನಮ್ಮ ಹುಡುಗರು ಸ್ವೇಚ್ಛವಾಗಿ ಆಡಿಲ್ಲ ಅನಿಸುತ್ತಿದೆ. ಈ ರೀತಿಯ ದೊಡ್ಡ ಟೂರ್ನಿಯಲ್ಲಿ ಒಮ್ಮೆ ನಿರಾಶೆಗೊಂಡರೆ ಮುಂದೆ ಸಾಗುವುದು ಕಷ್ಟ. ನನಗೆ ತಿಳಿದಿರುವಂತೆ, ನಮ್ಮ ಆಟಗಾರರು ಕನಿಷ್ಠ ತಮ್ಮ ಸಾಮಥ್ರ್ಯಕ್ಕೆ ತಕ್ಕಂತೆ ಆಡಿಲ್ಲ ಎಂದು ಬೇಸರ ಹೊರಹಾಕಿದರು.
ಮುಂದಿನ ವರ್ಷ ಆಸ್ಟ್ರೇಲಿಯಾದಲ್ಲಿ ಟಿ20 ವಿಶ್ವಕಪ್ ನಡೆಯಲಿದೆ. ಈ ಹಿಂದಿನ ಅನುಭವಗಳಿಂದ ಪಾಠ ಕಲಿತು ನಮ್ಮ ಹುಡುಗರು ಮಿಂಚುತ್ತಾರೆ ಅನ್ನೋ ವಿಶ್ವಾಸ ನನ್ನಲ್ಲಿದೆ.
ಆದ್ರೆ ಈ ಬಾರಿಯ ವಿಶ್ವಕಪ್‍ನಲ್ಲಿ ನಮ್ಮವರ ಪ್ರದರ್ಶನ ತೀವ್ರ ನಿರಾಸೆ ತಂದಿದೆ ಎಂದು ಪುನರುಚ್ಚರಿಸಿದ್ದಾ ಸೌರವ್.









