ಒತ್ತುವರಿಯಲ್ಲಿ ತಾರತಮ್ಯ – ಯಮಲೂರಿನ ಎಫ್ಸಿಲಾನ್ ಬಳಿ ಜಮೀನು ಮಾಲಿಕರ ಆಕ್ರೋಶ..
ರಾಜಕಾಲುವೆ ಒತ್ತುವರಿ ವಿಷಯದಲ್ಲಿ ತಾರತಮ್ಯ ಮಾಡಲಾಗುತ್ತಿದೆ ಎಂದು ಆರೋಪಿಸಿ ಬಿಬಿಎಂಪಿ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳ ವಿರುದ್ಧ ಜಮೀನು ಮಾಲೀಕರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಯಮಲೂರಿನ ಎಫ್ಸಿಲಾನ್ ಬಳಿ ಇರುವ ರಾಜಕಾಲುವೆ ಒತ್ತುವರಿ ಹಿನ್ನೆಲೆಯಲ್ಲಿ ಸ್ಥಳಕ್ಕೆ ಧಾವಿಸಿದ ಬಿಬಿಎಂಪಿ ಅಧಿಕಾರಿಗಳು ಮತ್ತು ಮಾಲಿಕರ ನಡುವೆ ಮಾತಿನ ಚಕಮಕಿ ನಡೆದಿದೆ. ಒತ್ತುವರಿ ತೆರವಿನ ಹೆಸರಿನಲ್ಲಿ ಇಲ್ಲಿಂದ ರಾಜಕಾಲುವೆ ತಿರುಗಿಸುವ ಯತ್ನ ನಡೀತಿದೆ ಎಂದು ಎಪ್ಸಿಲಾನ್ ಗೆ ಜಾಗ ಮಾರಿದ ಜಮೀನು ಮಾಲೀಕರಿಂದ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ಬಿಬಿಎಂಪಿ ಅಧಿಕಾರಿಗಳನ್ನ ತರಾಟೆಗೆ ತೆಗೆದುಕೊಂಡ ಜಮೀನು ಮಾಲೀಕ ರಘುರಾಮ್ ರೆಡ್ಡಿ ಅವರು ನಾವೆಲ್ಲರೂ ಎಪ್ಸಿಲಾನ್ ವಿಲ್ಲಾಗಳಿಗೆ ಜಮೀನು ಬಿಟ್ಟು ಕೊಟ್ಟಿದ್ದೇವೆ. ಏನೇ ತಂಟೆ ತಕರಾರು ಬಂದ್ರು ಅದನ್ನ ಜಮೀನು ಮಾಲೀಕರಾದ ನಾವೆ ಬಗೆಹರಿಸಿಕೊಡಬೇಕು. ಇರೋ ರಾಜಕಾಲುವೆ ಬಿಟ್ಟು ಬೇರೆ ಕಡೆ ಮಾರ್ಕ್ ಮಾಡಿದ್ದಾರೆ.. ಶತಮಾನಗಳಿಂದ ರಾಜಕಾಲುವೆ ಇರೋದೇ ಇಲ್ಲಿ. ಇರೋ ಕಾಲುವೆ ಜಾಗ ಬಿಟ್ಟು, ಬೇರೆ ಕಡೆ ರಾಜಕಾಲುವೆ ಮಾಡಲು ಹೊರಟಿದ್ದಾರೆ.
ಕಾಂಪೌಂಡ್ ಒಡೆಯಲು ಮಾರ್ಕ್ ಮಾಡಿದ್ದಾರೆ.. ಯಾವುದೇ ಕಾರಣಕ್ಕೂ ನಾವು ಕಾಂಪೌಂಡ್ ಒಡೆಯಲು ಬಿಡುವುದಿಲ್ಲ.. ಯಾವ ಆಧಾರ ಮೇಲೆ ಸರ್ವೇ ಮಾಡಿದ್ದಾರೆ ಅಂತ ಗೊತ್ತಿಲ್ಲ ಎಂದು ಯಮಲೂರಿನ ಎಪ್ಸಿಲಾನ್ ಬಳಿ ರಾಜಕಾಲುವೆ ಕಾರ್ಯಚರಣೆಗೆ ಜಮೀನು ಮಾಲೀಕರ ಆಕ್ರೋಶ ವ್ಯಕ್ತಪಡಿಸಿದ್ದಾರೆ.








