30 ಗಂಟೆಗಳ ಬ್ಯಾಟರಿ ಲೈಫ್ ಕೊಡುವ ಡಿಸೋ ಇಯರ್ ಫೋನ್ ಬಿಡುಗಡೆ….
Realmy Techlife ಬ್ರ್ಯಾಂಡ್ ‘Dizo’ ಇತ್ತೀಚೆಗೆ ವೈಯರಲೆಸ್ ಇಯರ್‌ಫೋನ್ ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಇದಕ್ಕೆ ಡಿಸೋ ವೈರ್‌ಲೆಸ್ ಡ್ಯಾಶ್ ಎಂದು ನಾಮಕರಣ ಮಾಡಿದ್ದಾರೆ.
ಈ ಬ್ಲೂಟೂತ್ ಇಯರ್‌ಫೋನ್‌ಗಳು 11.2 ಎಂಎಂ ಡ್ರೈವರ್‌ಗಳನ್ನ ಹೊಂದಿದ್ದು, ಇಯರ್‌ಬಡ್‌ಗಳು ಬ್ಲೂಟೂತ್ ಆಧರಿಸಿ ಕಾರ್ಯನಿರ್ವಹಿಸುತ್ತವೆ. ಒಂದು ಸಲ ಚಾರ್ಜ್ ಮಾಡಿ 30 ಗಂಟೆಗಳ ಕಾಲ ಉಪಯೋಗಿಸಬಹುದು. ಹತ್ತು ನಿಮಿಷಗಳ ಚಾರ್ಜಿಂಗ್ ಮಾಡಿದ್ರೆ ಹತ್ತು ಗಂಟೆಗಳ ಪ್ಲೇಬ್ಯಾಕ್. ಮಾಡಬಹುದು. ಇದು ಸಿಲಿಕೋನ್ ನೆಕ್‌ಬ್ಯಾಂಡ್ ಆಗಿದ್ದು, ಇದು ಚರ್ಮ ಸ್ನೇಹಿ ಮತ್ತು ಗ್ರಾಹಕರಿಗೆ ಆರಾಮದಾಯಕವಾಗಿದೆ ಎಂದು ಕಂಪನಿ ಹೇಳಿಕೊಂಡಿದೆ.
ಈ ಇಯರ್ ಪೋನ್ ಸೂಪರ್ ಸ್ಲೋ ಲೇಟೆನ್ಸಿ 88MS ಗೇಮಿಂಗ್ ಮೋಡ್‌ಗೆ ಬೆಂಬಲಿತವಾಗಿದೆ. ಹಾಡು ಕೇಳಲು ಹಾಗೂ ಕರೆಗಳಿಗೆ ಉಪಯುಕ್ತವಾಗುವಂತೆ ವಿನ್ಯಾಸಗೊಳಿಸಲಾಗಿದೆ. ಇದರ ಬೆಲೆ ರೂ.1599 ಮತ್ತು ಆರಂಭಿಕ ಬೆಲೆ ರೂ.1299 ಎಂದು ಕಂಪನಿ ಹೇಳಿದೆ.








