ನಿಪ್ಪಾಣಿ ; ಕೊರೊನಾ ವೈರಸ್ ವಿರುದ್ಧ ಹೋರಾಡಲು ಹಾಗೂ ರೋಗನಿರೋಧಕ ಶಕ್ತಿ ಹೆಚ್ಚಿಸಲು ಒಂದು ಲಕ್ಷ ಜನರಿಗೆ ಉಚಿತವಾಗಿ ಹೋಮಿಯೋಪತಿ ಔಷಧಿಯನ್ನು ವಿತರಣೆ ಮಾಡಲಾಗುವುದೆಂದು ಮಹಿಳಾ ಮತ್ತು ಮಕ್ಕಳ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ತಿಳಿಸಿದ್ದಾರೆ.
ನಿಪ್ಪಾಣಿಯಲ್ಲಿ ಮಾತನಾಡಿದ ಅವರು, ಕೊರೊನಾ ಸೋಂಕು ನಿಯಂತ್ರಿಸುವಲ್ಲಿ ಆರೋಗ್ಯ ಇಲಾಖೆ, ಪೊಲೀಸ್ ಇಲಾಖೆ, ಕಂದಾಯ ಇಲಾಖೆ ಪೌರಕಾರ್ಮಿಕರು, ಅಂಗನವಾಡಿ ಕಾರ್ಯಕರ್ತೆಯರು, ಆಶಾಕಾರ್ಯಕರ್ತೆಯರ ಪಾತ್ರ ಪ್ರಮುಖವಾಗಿದೆ. ಮಹಾವೀರ ಆರೋಗ್ಯ ಸೇವಾ ಕೇಂದ್ರದಿಂದ ಉಚಿತವಾಗಿ ಹೋಮಿಯೋಪತಿ ಮಾತ್ರೆಗಳನ್ನು ಮನೆಮನೆಗಳಿಗೆ ವಿತರಿಸಲಾಗುವುದು. ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಆರ್ಸೇನಿಕ್ ಅಲ್ಬಮ್ ಮಾತ್ರೆ ಸಹಕರಿಸುತ್ತದೆ. ಈ ಮಾತ್ರೆಗಳನ್ನು ಮಾಸ್ಕ್ ಗ್ರೂಪ್ ವಿತರಿಸುತ್ತಿದ್ದು, ನಿಪ್ಪಾಣಿ ಭಾಗದ ಜನರು ಸಾಮಾಜಿಕ ಸೌಹಾರ್ದತೆಯೊಂದಿಗೆ ಇದರ ಲಾಭ ಪಡೆಯಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.
ಇನ್ನು ಇದೇ ವೇಳೆ ಮಾಸ್ಕ್ ಗ್ರೂಪ್ ಅಧ್ಯಕ್ಷ ಪ್ರಕಾಶ್ ಶಹಾ ಮಾತನಾಡಿ, ಕೊರೊನಾ ರೋಗವನ್ನು ಹೊಡೆದು ಓಡಿಸಲು ಮಹಾವೀರ ಆರೋಗ್ಯ ಕೇಂದ್ರದ ವತಿಯಿಂದ ಆರ್ಸೇನಿಕ್ ಅಲ್ಬಮ್-30 ಹೋಮಿಯೋಪತಿ ಔಷಧಿಯನ್ನು ಒಂದು ಲಕ್ಷ ಜನರಿಗೆ ಉಚಿತವಾಗಿ ನೀಡಲಾಗುವುದು. ಮಹಾವೀರ ಆರೋಗ್ಯ ಕೇಂದ್ರವು ಕಳೆದ ಒಂದು ವರ್ಷದಿಂದ ಸಾಮಾಜಿಕ, ಆರೋಗ್ಯ ವಿಭಾಗಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ಕೆಲಸವನ್ನು ಮಾಡುತ್ತಿದೆ. ಕಳೆದ ಒಂದು ವರ್ಷದಲ್ಲಿ ಸುಮಾರು 19 ಶಿಬಿರಗಳನ್ನು ಏರ್ಪಡಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ಸಂಸ್ಥೆಯ ಉಪಾಧ್ಯಕ್ಷ ಸತೀಶ. ವಕಾರಿಯಾ ಕಾರ್ಯದರ್ಶಿ ಪ್ರತೀಕ್ ಶಾಹಾ, ಸೃಷ್ಟಿ ಹೋಮಿಯೊ ಪಾರ್ಮಸಿಯ ಡಾ.ಚಂದ್ರಶೇಖರ ಖೋತ. ಡಾ.ಸಂಜಯ ಪಂತಬಾಳೆಕುಂದರಗಿ, ಡಿ.ಕೆಪಾರ್ಮಾಸಿಯ ಸಾಹಿಲ ಶಹಾ ಮಿಲಿಂದ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.








