ನವದೆಹಲಿಯ ಇಂದಿರಾ ಗಾಂಧಿ ಕ್ರೀಡಾಂಗಣದಲ್ಲಿ ನಡೆದ ಹಿರಿಯ ಏಷ್ಯನ್ ಕುಸ್ತಿ ಚಾಂಪಿಯನ್ಶಿಪ್ನ ಮೂರನೇ ದಿನವಾದ ಇಂದು ಭಾರತದ ದಿವ್ಯಾ ಕಕ್ರನ್ ಅವರು 68 ಕೆಜಿ ವಿಭಾಗದಲ್ಲಿ ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದಾರೆ. ದಿವ್ಯಾ 6-4 ಅಂತರದಿಂದ ಜಪಾನಿನ ಆಟಗಾರ್ತಿ ನರುಹಾ ಮಾಟ್ಸುಯುಕಿಯನ್ನು ಸೋಲಿಸುವ ಮೂಲಕ ಚಿನ್ನ ಗೆದ್ದುಕೊಂಡರು. 68 ಕೆಜಿ ವಿಭಾಗದಲ್ಲಿ ಒಟ್ಟು ಐದು ಕುಸ್ತಿಪಟುಗಳು ಅಖಾಡದಲ್ಲಿದ್ದರು.
ಭಾರತೀಯ ಮಹಿಳಾ ಕುಸ್ತಿಯ ಇತಿಹಾಸದಲ್ಲಿ ಏಷ್ಯನ್ ಚಾಂಪಿಯನ್ಶಿಪ್ನ ಮಹಿಳಾ ವಿಭಾಗದ ಎರಡನೇ ಚಿನ್ನದ ಪದಕ ಇದಾಗಿದೆ. ಇದಕ್ಕೂ ಮುನ್ನ ಭಾರತದ ನವಜೋತ್ ಕೌರ್ ಹಿರಿಯ ಏಷ್ಯನ್ ಚಾಂಪಿಯನ್ಶಿಪ್ 2018 ಕಿರ್ಗಿಸ್ತಾನ್ನಲ್ಲಿ ಚಿನ್ನದ ಪದಕ ಗೆದ್ದ ಮೊದಲ ಭಾರತೀಯ ಮಹಿಳಾ ಕುಸ್ತಿಪಟು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು..