ಡಿಜೆ ಹಳ್ಳಿ ಪುಂಡಾಟ ಪ್ರಕರಣ ಸಂಬಂಧ ಡಿಸಿ ಶಿವಮೂರ್ತಿ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಶಾಂತಿ ಕಾಪಾಡಬೇಕು. ಸ್ಥಳದಲ್ಲಿ ಹಾಗೂ ಘಟನೆ ಬಗ್ಗೆ ನಿರಂತರ ಪರಿಶೀಲನೆ ಮಾಡಲಾಗುತ್ತಿದೆ. ಎಷ್ಟು ಹಾನಿಯಾಗಿದೆ ಎಂಬುದರ ಕುರಿತಾಗಿ ಪರಿಶೀಲನೆ ನಡೆಸಿದ್ದೇವೆ. ಇಂದು ಅಥವಾ ನಾಳೆ ಶಾಂತಿ ಸಭೆ ನಡೆಸಲಿದ್ದೇವೆ. ಯಾರೂ ಸಹ ದಯಮಾಡಿ ಶಾಂತಿ ಕದಡುವ ಕೆಲಸ ಮಾಡಬೇಡಿ ಎಂದಿದ್ದಾರೆ.
ಇನ್ನೂ 78 ಕ್ಕು ಹೆಚ್ಚು ಪೊಲೀಸ್ ಸಿಬ್ಬಂದಿಗೆ ಗಾಯಯಾಗಿದೆ. ಗೋಲಿಬಾರ್ ನಲ್ಲಿ ಮೃತಪಟ್ಟ ಹಿನ್ನೆಲೆ ಮ್ಯಾಜಿಸ್ಟ್ರೇಟ್ ಮೂಲಕ ತನಿಖೆ ಮಾಡ್ತಿವಿ ಎಂದು ಡಿಸಿ ಶಿವಮೂರ್ತಿ ಅವರು ತಿಳಿಸಿದ್ದಾರೆ.








