ದ.ಕ. – ಇಂದು ಜಿಲ್ಲೆಯಲ್ಲಿ ಕೊರೊನಾಗೆ 8 ಬಲಿ
ಮಂಗಳೂರು, ಜುಲೈ 10: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು ಕೊರೊನಾ ಸೋಂಕಿಗೆ 8 ಮಂದಿ ಬಲಿಯಾಗಿದ್ದಾರೆ. ಆ ಮೂಲಕ ದ.ಕ. ಜಿಲ್ಲೆಯಲ್ಲಿ ಸಾವಿನ ಸಂಖ್ಯೆ 38ಕ್ಕೆ ಏರಿಕೆಯಾಗಿದೆ.
ಇಂದು ಜಿಲ್ಲೆಯಲ್ಲಿ 7 ಪುರುಷರು ಮತ್ತು ಓರ್ವ ಮಹಿಳೆ ಕೊರೋನಾಗೆ ಬಲಿಯಾಗಿದ್ದು, ಈ ಪೈಕಿ ನಾಲ್ವರು ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರೆ, ಉಳಿದ ನಾಲ್ವರು ಕೋವಿಡ್ ಆಸ್ಪತ್ರೆ ವೆನ್ಲಾಕ್ ನಲ್ಲಿ ಮೃತಪಟ್ಟಿದ್ದಾರೆ.

ಹೊಸಬೆಟ್ಟುವಿನ 35 ವರ್ಷದ ಯುವಕ, 65 ವರ್ಷದ ಮಂಗಳೂರಿನ ಫಳ್ನೀರ್ ನಿವಾಸಿ, ಉಳ್ಳಾಲ ಮೂಲದ 67 ವರ್ಷದ ವ್ಯಕ್ತಿ, ತೊಕ್ಕೊಟ್ಟುವಿನ 58 ವರ್ಷದ ಮಹಿಳೆ ಕೋವಿಡ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರೆ, ಉಳಿದವರು ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಜಿಲ್ಲೆಯಲ್ಲಿ ಇಂದು ಒಟ್ಟು 137 ಕೊರೊನಾ ಸೋಂಕು ಪ್ರಕರಣಗಳು ಪತ್ತೆಯಾಗಿದೆ.








