ನಾನು ಬಂಡೆ ಅಲ್ಲ, ಯಾರನ್ನೂ ದ್ವೇಷ ಮಾಡಲ್ಲ : ಡಿಕೆಶಿ
ಬೆಂಗಳೂರು : ಸಂಪದ್ಭರಿತ ಖಾತೆ ಕಾರಣಕ್ಕಾಗಿ ಸಮ್ಮಿಶ್ರ ಸರ್ಕಾರ ಇರಬೇಕು ಎಂದು ಡಿ.ಕೆ.ಶಿವಕುಮಾರ್ ಬಯಸಿದ್ದರು ಎಂಬ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಅವರ ಹೇಳಿಕೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿರುಗೇಟು ನೀಡಿದ್ದಾರೆ.
ಬೆಂಗಳೂರಿನ ಸದಾಶಿವನಗರ ನಿವಾಸದಲ್ಲಿ ಮಾತನಾಡಿದ ಡಿಕೆಶಿ, ಕುಮಾರಸ್ವಾಮಿ ಈಗಲೂ ನನ್ನ ಸ್ನೇಹಿತರು, ಮುಂದೆಯೂ ನನ್ನ ಸ್ನೇಹಿತರು.
ನಾನು ಯಾರನ್ನೂ ದ್ವೇಷ ಮಾಡಲ್ಲ, ಅವರ ಹೇಳಿಕೆಯ ಕುರಿತು ಪ್ರತಿಕ್ರಿಯೆ ನೀಡುವುದಿಲ್ಲ. ನಾನು ಬಂಡೆನೂ ಅಲ್ಲ, ಮರಳು ಅಲ್ಲ, ಜಲ್ಲಿಯೂ ಅಲ್ಲ. ಉಪಯೋಗಿಸಿಕೊಂಡಿದ್ದಾರೆ ಬಿಡಿ ಎಂದು ಟಾಂಗ್ ನೀಡಿದ್ದಾರೆ.
ಇದೇ ವೇಳೆ ಶಾಲೆಗಳನ್ನು ಆರಂಭಿಸುವ ಬಗ್ಗೆ ಮಾತನಾಡಿ, ಈ ವಿಚಾರದಲ್ಲಿ ಪ್ರತಿ ನಿಮಿಷ ಗೊಂದಲ ಆಗ್ತಿದೆ.
ಶಿಕ್ಷಣ ಸಚಿವರು ಸಿಎಂ ಜೊತೆ, ಪೋಷಕರ ಜೊತೆ ಮಾತನಾಡುತ್ತೇನೆ ಎಂದು ಹೇಳುತ್ತಾರೆ. ಸರ್ಕಾರ ಆ ಗೊಂದಲವನ್ನು ಮೊದಲು ನಿವಾರಣೆ ಮಾಡಬೇಕು.
ನೈಟ್ ಕರ್ಫ್ಯೂ | ಬಸ್ ಸಂಚಾರಕ್ಕೂ ಬ್ರೇಕ್..!?
ಮಕ್ಕಳನ್ನು ರಕ್ಷಣೆ ಮಾಡಬೇಕು, ಟೀಚರ್ಸ್ ಗೂ ಸಂಬಳ ನೀಡಬೇಕು. ತಜ್ಞರು ಕೂಡ ಇದಕ್ಕೆ ಸಲಹೆ ನೀಡಲು ಇದ್ದಾರೆ. ಮಕ್ಕಳು ಭವಿಷ್ಯ, ಪರೀಕ್ಷೆ ಎಲ್ಲವೂ ಮುಖ್ಯ ಎಂದರು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel