ಬೆಂಗಳೂರು : ಇಂದು ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್.ಡಿ ದೇವೇಗೌಡರಿಗೆ ಜನ್ಮದಿನದ ಸಂಭ್ರಮ. 87ನೇ ವಸಂತಕ್ಕೆ ಕಾಲಿಟ್ಟ ದೇವೇಗೌಡ ಅವರಿಗೆ ಹಲವಾರು ಗಣ್ಯರು ವಿವಿಧ ಮಾಧ್ಯಮಗಳ ಮೂಲಕ ಶುಭ ಕೋರಿದ್ದಾರೆ. ಆದ್ರೆ, ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು ಹೆಚ್ ಡಿಡಿ ಅವರ ನಿವಾಸಕ್ಕೆ ತೆರಳಿ ಹುಟ್ಟು ಹಬ್ಬದ ಶುಭಾಶಯ ಕೋರಿದ್ದಾರೆ.
ಬೆಂಗಳೂರಿನ ಪದ್ಮನಾಭ ನಗರದಲ್ಲಿನ ಹೆಚ್.ಡಿ. ದೇವೇಗೌಡರ ನಿವಾಸಕ್ಕೆ ಭೇಟಿ ನೀಡಿದ ಶಿವಕುಮಾರ್, ಹೂಗುಚ್ಛ ನೀಡಿ ಹುಟ್ಟುಹಬ್ಬದ ಶುಭಕೋರಿದರು. ನಂತರ ಹೆಚ್ ಡಿಡಿ ಜೊತೆ ವಿಶೇಷ ಭೋಜನ ಸವಿದಿದ್ದಾರೆ ಡಿಕೆಶಿ.