ನೀಚ ರಾಜಕಾರಣ ನನ್ನ ರಕ್ತದಲ್ಲಿ ಇಲ್ಲ : ಡಿ.ಕೆ.ಶಿವಕುಮಾರ್
ಬೆಂಗಳೂರು : ಕದ್ದುಮುಚ್ಚಿ ರಾಜಕೀಯ ಮಾಡುವ ನೀಚ ರಾಜಕಾರಣ ನನ್ನ ರಕ್ತದಲ್ಲಿ ಇಲ್ಲ. ಕುಮಾರಸ್ವಾಮಿ ಅವರಿಗೆ ಪೊಲಿಟಿಕಲ್ ಪ್ರಾಬ್ಲಂ ಇರಬಹುದು. ನನಗೇನೂ ಪೊಲಿಟಿಕಲ್ ಪ್ರಾಬ್ಲಂ ಇಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕಿಡಿಕಾರಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಡಿ.ಕೆ.ಶಿವಕುಮಾರ್ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದರು. ಭಾರತ್ ಬಂದ್ ಹಿನ್ನೆಲೆ ನಿನ್ನೆ ನಾವು ಹಸಿರು ಶಾಲು ಧರಿಸಿ ರೈತರ ಪರ ಫ್ರೀಡಂ ಪಾರ್ಕ್ ವರೆಗೆ ಮೆರವಣಿಗೆಯಲ್ಲಿ ಭಾಗವಹಿಸಿ ಅವರಿಗೆ ಬೆಂಬಲ ನೀಡಿದ್ವಿ.
ಆದ್ರೆ ಅದನ್ನ ಕುಮಾರಸ್ವಾಮಿ ಟೀಕಿಸಿದ್ದಾರೆ. ಕಾಂಗ್ರೆಸ್ ಶಾಲಿಗೆ ಶಕ್ತಿ ಹೋಗಿದೆ. ಬೆಲೆ ಇಲ್ಲ, ಅದಕ್ಕೆ ಹಸಿರು ಶಾಲು ಧರಿಸಿ ರಾಜಕಾರಣ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.
ಆದ್ರೆ ನಾನು ರಾಜ್ಯ ಕಾಂಗ್ರೆಸ್ ಅಧ್ಯಕ್ಷನಾಗಿ, ಕಾರ್ಯಕರ್ತನಾಗಿ ಈ ಶಾಲು ಮತ್ತು ಪಕ್ಷದ ಧ್ವಜವನ್ನು ಹೀನಾಯವಾಗಿ ಬೈಸಿಕೊಂಡು ಗೌರವ ಹಾಳು ಮಾಡಲು ಸಿದ್ಧನಿಲ್ಲ.
ಇದೇ ಶಾಲು ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದೆ. ಇಂದು ಪ್ರಧಾನಮಂತ್ರಿ,ಮುಖ್ಯಮಂತ್ರಿಗಳನ್ನು ಸೃಷ್ಟಿಸಿದೆ ಎಂದು ತಿರುಗೇಟು ನೀಡಿದರು.
ಜೆಡಿಎಸ್ ಮಣ್ಣಿನ ಮಕ್ಕಳ ಪಕ್ಷವಲ್ಲ : ಕೋಡಿಹಳ್ಳಿ ಚಂದ್ರಶೇಖರ್
ಇನ್ನು ನಾನು ಮಧ್ಯರಾತ್ರಿ ಹೋಗಿ ಯಡಿಯೂರಪ್ಪರನ್ನು ಭೇಟಿ ಮಾಡಿದ್ದೇನೆ ಎಂದು ಕುಮಾರಸ್ವಾಮಿ ಆರೋಪ ಮಾಡಿದ್ದಾರೆ. ಆದ್ರೆ ಈ ಹಿಂದೆ ಸಿಎಂ ಆಗಿದ್ದವರು ಈ ರೀತಿ ಆರೋಪ ಮಾಡುವುದು ಸರಿಯಲ್ಲ.
ಯಡಿಯೂರಪ್ಪ ಅಥವಾ ಯಾವುದೇ ಸಚಿವರನ್ನು ಮಧ್ಯರಾತ್ರಿ ಭೇಟಿ ಮಾಡಿ ಕೆಲಸ ಮಾಡಿಸಿಕೊಂಡಿದ್ದನ್ನು ಸಾಬೀತುಪಡಿಸಿದ್ರೆ ನಾನು ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಕುಮಾರಸ್ವಾಮಿಗೆ ಡಿಕೆಶಿ ಸವಾಲ್ ಎಸೆದರು.
ಇನ್ನು ಕದ್ದುಮುಚ್ಚಿ ರಾಜಕೀಯ ಮಾಡುವ ನೀಚ ರಾಜಕಾರಣ ನನ್ನ ರಕ್ತದಲ್ಲಿ ಇಲ್ಲ. ಕುಮಾರಸ್ವಾಮಿ ಅವರಿಗೆ ಪೊಲಿಟಿಕಲ್ ಪ್ರಾಬ್ಲಂ ಇರಬಹುದು. ನನಗೇನೂ ಪೊಲಿಟಿಕಲ್ ಪ್ರಾಬ್ಲಂ ಇಲ್ಲ.
ನಿಮ್ಮ ಬಗ್ಗೆ ಗೌರವ ಇದೆ. ಕೈಕೆಳಗೆ ಕೆಲಸ ಮಾಡಿದ್ದೇನೆ, ನಿಮಗೆ ಗೌರವ ಕೊಡಲಿದ್ದೇವೆ. ಆದರೆ, ನಮ್ಮ ಪಕ್ಷದ ಹಾಗೂ ನನ್ನ ವೈಯಕ್ತಿಕ ಸ್ವಾಭಿಮಾನ ಮಾರಿಕೊಳ್ಳಲು ಸಿದ್ಧನಿಲ್ಲ ಎಂದು ಡಿಕೆಶಿ ಗುಡುಗಿದರು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel









