ಬೆಂಗಳೂರು : ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಪದಗ್ರಹಣಕ್ಕೆ ಮತ್ತೆ ಕೊರೊನಾ ಕಂಟಕವಾಗಿದೆ. ಜೂನ್ 14 ರಂದು ಪದಗ್ರಹಣಕ್ಕೆ ಕೋರಿದ್ದ ಅನುಮತಿಯನ್ನು ರಾಜ್ಯ ಸರಕಾರ ನಿರಾಕರಿಸಿದೆ. ಕೇಂದ್ರ ಸರ್ಕಾರ ಲಾಕ್ ಡೌನ ಅವಧಿಯನ್ನು ಜೂನ್ 30 ರವರೆಗೂ ವಿಸ್ತರಿಸಲಾಗಿದೆ. ಅಲ್ಲದೆ ಹೊಸ ಮಾರ್ಗಸೂಚನೆಗಳನ್ನು ತಿಳಿಸಿದೆ. ಹಾಗಾಗಿ ಆ ಮಾರ್ಗಸೂಚನೆಗಳು ಕರ್ನಾಟಕ ರಾಜ್ಯದಲ್ಲಿ ಯಥಾವತ್ತಾಗಿ ಜಾರಿ ಆಗುತ್ತವೆ. ಈ ಹಿನ್ನೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಜೂನ್ 14 ರಂದು ಪದಗ್ರಹಣಕ್ಕೆ ಕೋರಿದ್ದ ಅನುಮತಿಯನ್ನು ರಾಜ್ಯ ಸರಕಾರ ನಿರಾಕರಿಸಿದೆ ಎಂದು ತಿಳಿದು ಬಂದಿದೆ.