ನೆಹರು ಕುಟುಂಬದ ತ್ಯಾಗ ದೊಡ್ಡದು. ಅವರಂತೆ ಯಾರು ಕೂಡ ತ್ಯಾಗ ಮಾಡಿಲ್ಲ : ಡಿಕೆಶಿ
ಮೇಕೆದಾಟು ಕುಡಿಯುವ ನೀರಿನ ಬಗ್ಗೆ ಯಾರ ಅನುಮತಿಯೂ ಬೇಕಿಲ್ಲ. ನಾವು ಬೊಮ್ಮಾಯಿ ಹೇಳಿಕೆಗೆ ಜೊತೆ ನಿಲ್ಲುತ್ತೇವೆ ಎಂದು ಹೇಳುವ ಮೂಲಕ ಕಾಂಗ್ರೆಸ್ ರಾಜ್ಯಾಧ್ಯಕ್ಷ ಡಿ ಕೆ ಶಿವಕುಮಾರ್ ಅವರು ಸಿಎಂ ಬೊಮ್ಮಾಯಿ ಅವರ ಹೇಳಿಕೆಗೆ ಒಪ್ಪಿಗೆ ಸೂಚಿಸಿದ್ದಾರೆ.. ಸಿಎಂ ಬಸವರಾಜಜ ಬೊಮ್ಮಾಯಿ ಅವರು ಮೇಕೆದಾಟು ಯೋಜನೆಗೆ ಕಾವೇರಿ ಕೊಳ್ಳದ ರಾಜ್ಯಗಳ ಅನುಮತಿ ಪಡೆಎಯುವಂತೆ ಕೇಂದ್ರ ಸೂಚಿಸಿದ್ದ ವಿಚಾರವಾಗಿ ಮಾತನಾಡಿ ಕುಡಿಯುವ ನೀರಿಗಾಗಿ ಬೇರೆ ರಾಜ್ಯಗಳ ಅನುಮತಿ ಅವಶ್ಯಕತೆ ಇಲ್ಲ ಎಂದಿದ್ದಾರೆ.. ಇದೇ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಡಿಕೆಶಿ ಬೊಮ್ಮಾಯಿ ಅವರ ಹೇಳಿಕೆ ಒಪ್ಪಿದ್ದಾರೆ..
ಅಷ್ಟು ಕಾಮನ್ ಸೆನ್ಸ್ ಇಲ್ಲದೇ ಏನ್ರೀ ಮಾಡ್ತೀರಾ ನೀವು ಇಲ್ಲಿ : ದ.ಕ ಜಿಲ್ಲಾಧಿಕಾರಿ, ಆರೋಗ್ಯಾಧಿಕಾರಿಗಳ ವಿರುದ್ಧ ಬೊಮ್ಮಾಯಿ ಗರಂ..!
ಅಲ್ಲದೇ ಸಿಟಿ ರವಿ ವಿವಾದಾತ್ಮಕ ಹೇಳಿಕೆ ವಿರುದ್ಧ ಕಿಡಿಕಾರಿರುವ ಡಿಕೆಶಿ ಸಿ.ಟಿ.ರವಿ ಬಿಜೆಪಿ ಸಂಸ್ಕೃತಿ ಪ್ರತಿಬಿಂಬಿಸುತ್ತಿದ್ದಾರೆ ನೆಹರು, ಇಂದಿರಾ, ರಾಜೀವ್ ಗಾಂಧಿ ಹೆಸರಿಗೆ ಮಸಿ ಬಳಿಯುವ ಯತ್ನ ಮಾಡಲಾಗುತ್ತಿದೆ. ನೆಹರು ಕುಟುಂಬದ ತ್ಯಾಗ ದೊಡ್ಡದು. ಅವರಂತೆ ಯಾರು ಕೂಡ ತ್ಯಾಗ ಮಾಡಿಲ್ಲ. ನೆಹರು ಕುಟುಂಬದ ಆಸ್ತಿಯನ್ನು ದಾನ ಮಾಡಿದ್ದಾರೆ. ಅದು ಸಿ.ಟಿ.ರವಿಗೆ ಗೊತ್ತಿಲ್ಲ ಕಾಣುತ್ತದೆ. ಇಂದಿರಾಗಾಂಧಿ, ರಾಜೀವ್ ಗಾಂಧಿ ಪ್ರಾಣ ತ್ಯಾಗ ಮಾಡಿದ್ದಾರೆ.ಸೋನಿಯಾ ಗಾಂಧಿ ಪ್ರಧಾನಿ ಸ್ಥಾನ ತ್ಯಾಗ ಮಾಡಿದರು ಎಂದಿದ್ದಾರೆ.








