ರಾಮನಗರ : ಸಿ.ಪಿ.ಯೋಗೇಶ್ವರ್ ಕಾಂಗ್ರೆಸ್ ಗೆ ಸೇರುತ್ತೇನೆ ಎಂದು ನನ್ನ ಕಾಲು ಹಿಡಿದುಕೊಂಡಿದ್ದರು ಎಂಬ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿಕೆಗೆ ಎಂಎಲ್ ಸಿ ಸಿ.ಪಿ ಯೋಗೇಶ್ವರ್ ಅವರು ಫೇಸ್ ಬುಕ್ ನಲ್ಲಿ ತಿರುಗೇಟು ನೀಡಿದ್ದಾರೆ.
ತಮ್ಮ ಅಧಿಕೃತ ಫೇಸ್ ಬುಕ್ ಖಾತೆಯಲ್ಲಿ ವಿಡಿಯೋ ಪೋಸ್ಟ್ ಮಾಡಿರೋ ಸಿಪಿವೈ, ಡಿ.ಕೆ ಶಿವಕುಮಾರ್, ನನ್ನ ಮತ್ತು ಪಕ್ಷದ ನಡುವೆ ವಿಷ ಬೀಜ ಬಿತ್ತುತ್ತಿದ್ದಾರೆ. ಅವರು ಇನ್ನು ಮುಂದಾದರೂ ಕೊತ್ವಾಲ್ ರಾಮಚಂದ್ರನ ಸಂಸ್ಕೃತಿಯಿಂದ ಹೊರಬರಬಂದು ಗೌರವಯುತವಾಗಿ ಮಾತನಾಡುವುದನ್ನು ಕಲಿಯಬೇಕು ಎಂದಿದ್ದಾರೆ.
“ನಾನು ಡಿ.ಕೆ.ಶಿವಕುಮಾರ್ ಕಾಲು ಹಿಡಿದಿಲ್ಲ. ಅಂತಹ ಸಂದರ್ಭ ನನಗೆ ಬರುವುದು ಇಲ್ಲ. ಕೆಪಿಸಿಸಿ ಹುದ್ದೆಗೆ ಅವರು ಅಗೌರವ ತರಬಾರದು ಎಂದು ಹೇಳಿದ್ದಾರೆ.
ಇನ್ನು ಆರು ತಿಂಗಳ ಹಿಂದೆಯೇ ನನ್ನನ್ನು ಎಂಎಲ್ ಸಿ ಮಾಡುವುದು ಗೊತ್ತಿತ್ತು. ನಾನು ಸರ್ಕಾರ ಕೆಡವಲು ಯಾವುದೇ ಪ್ರಯತ್ನ ಮಾಡಿಲ್ಲ. ಆದರೆ, ಶಿವಕುಮಾರ್ ಮತ್ತು ಸಹೋದರ ಸುರೇಶ್ ಸುಳ್ಳು ಹೇಳುತ್ತಿದ್ದಾರೆ ಎಂದು ಯೋಗೇಶ್ವರ್ ಸ್ಪಷ್ಟನೆ ನೀಡಿದ್ದಾರೆ.








