ಡಿ.ಕೆ.ಶಿವಕುಮಾರ್ ಪರ ಮಾಧುಸ್ವಾಮಿ ಸಾಫ್ಟ್ ಕಾರ್ನರ್
ಮೈಸೂರು : ಮಾಜಿ ಸಚಿವರ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪರ ಸಚಿವ ಮಾಧುಸ್ವಾಮಿ ಸಾಫ್ಟ್ ಕಾರ್ನರ್ ತೋರಿದ್ದಾರೆ.
ಇಂದು ಯುವತಿ ವಿಡಿಯೋದಲ್ಲಿ ಡಿಕೆ ಶಿವಕುಮಾರ್ ಅವರ ಹೆಸರನ್ನ ಪ್ರಸ್ತಾಪಿಸಿದರು.
ಈ ಬಗ್ಗೆ ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಜೆ.ಸಿ.ಮಾಧುಸ್ವಾಮಿ, ಶಿವಕುಮಾರ್ ಅವರನ್ನ ಹಲವು ವರ್ಷಗಳಿಂದ ನೋಡಿದ್ದೇನೆ. ಅವರು ಈ ರೀತಿ ಮಾಡಿರಲಾರರು ಎಂದು ಅಂದುಕೊಂಡಿದ್ದೇನೆ.
ಆ ಯುವತಿ ಅವರ ಹೆಸರು ಹೇಳಿದ್ದಾಳೆ ನಿಜ. ಆದರೆ ಅದನ್ನು ಹೊರತುಪಡಿಸಿ ಮತ್ಯಾವ ಗಂಭೀರ ಸಾಕ್ಷ್ಯವನ್ನು ಆಕೆ ನೀಡಿಲ್ಲ. ಹಾಗಾಗಿ ಏನಾಗುತ್ತೆ ಎಂದು ಕಾದು ನೋಡೋಣ ಎಂದು ಹೇಳಿದ್ದಾರೆ.
ರಮೇಶ್ ಜಾರಕಿಹೊಳಿ ಬಂಧನದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿ, ಈ ಕೇಸ್ ನಲ್ಲಿ ಜಾರಕಿಹೊಳಿ ಅವರನ್ನು ಬಂಧಿಸಲುಬಹುದು, ಬಂಧನ ಮಾಡದೇಯೂ ಇರಬಹುದು.
ಕೇಸ್ ನ ಪ್ರಾಥಮಿಕ ತನಿಖೆಯಲ್ಲಿ ದೂರಿನ ಪೂರಕ ಅಂಶ ಇದ್ದರೆ ಬಂಧಿಸಬಹುದು. ಇಲ್ಲವಾದಲ್ಲಿ ಅವರನ್ನು ಕೇವಲ ವಿಚಾರಣೆ ಮಾಡಿ ಬಿಡಬಹುದು ಎಂದು ಉತ್ತರಿಸಿದರು.
ಇದೇ ವೇಳೆ ಸದನಕ್ಕೆ ಗೈರಾದ ಬಗ್ಗೆ ಪ್ರತಿಕ್ರಿಯಿಸಿ, ನನಗೆ ಆಂಜಿಯೋಪ್ಲ್ಯಾಸ್ಟಿ ಆಗಿದೆ. ನಾನು ಸ್ಟಂಟ್ ಹಾಕಿಸಿಕೊಂಡಿದ್ದೇನೆ. ಹಾಗಾಗಿ ನಾನು ಸದನಕ್ಕೆ ಹೋಗಿಲ್ಲ ಎಂದು ಮಾಧುಸ್ವಾಮಿ ಹೇಳಿದರು.