ರಾಜ್ಯದ ರಾಜಕೀಯ ವಲಯದಲ್ಲಿ ಈಗ ಕೈಗಡಿಯಾರದ ವಿವಾದ ಭಾರೀ ಚರ್ಚೆಗೆ ಕಾರಣವಾಗಿದೆ. ಕಾರ್ಟಿಯರ್ ವಾಚ್ ವಿಷಯದಲ್ಲಿ ಕಾಂಗ್ರೆಸ್ ಮತ್ತು BJP ನಡುವೆ ಮಾತಿನ ಚಕಮಕಿ ತೀವ್ರಗೊಂಡಿದ್ದು, ಈ ಬಗ್ಗೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಕಟುವಾಗಿ ಪ್ರತಿಕ್ರಿಯೆ ನೀಡಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಡಿಕೆಶಿ,
ನನಗೆ ಎಷ್ಟು ವಾಚ್ ಬೇಕಾದ್ರೂ ಕಟ್ಟಿಕೊಳ್ಳುವಷ್ಟು ಶಕ್ತಿ ಇದೆ. ನಾನು ₹1000 ರ ವಾಚ್ ಕೂಡ ಧರಿಸುತ್ತೇನೆ, 10 ಲಕ್ಷದ ವಾಚ್ ಕೂಡ ಧರಿಸುತ್ತೇನೆ. ಅದು ನನ್ನ ಸಂಪಾದನೆ, ನನ್ನ ಆಸ್ತಿ. ನಾನು ಹೇಗೆ ಬದುಕುತ್ತೇನೆ, ನನ್ನ ವ್ಯವಹಾರ ಏನು—ಇವೆಲ್ಲವನ್ನು ಬಿಜೆಪಿ ನಾಯಕರೇ ಚೆನ್ನಾಗಿ ಬಲ್ಲರು ಎಂದು ಟಾಂಗ್ ನೀಡಿದ್ದಾರೆ.
ಕೆಲ ದಿನಗಳಿಂದ ಕಾರ್ಟಿಯರ್ ಬ್ರಾಂಡ್ನ ದುಬಾರಿ ವಾಚ್ ವಿಚಾರವು ರಾಜಕೀಯದಲ್ಲಿ ಚರ್ಚೆ ಗೆ ಕಾರಣವಾಗಿದ್ದು, ಎರಡೂ ಪಕ್ಷಗಳು ಪರಸ್ಪರ ಆರೋಪ–ಪ್ರತ್ಯಾರೋಪಗಳಲ್ಲಿ ತೊಡಗಿವೆ. ಡಿಕೆಶಿಯ ಈ ಹೇಳಿಕೆ, ವಿವಾದಕ್ಕೆ ಮತ್ತಷ್ಟು ತೀವ್ರತೆ ತುಂಬಿದೆ ಎನ್ನುವುದು ರಾಜಕೀಯ ವಲಯದ ಅಭಿಪ್ರಾಯ.
ಇದೇ ವೇಳೆ, ಡಿಕೆಶಿ ತಮ್ಮ ವೈಯಕ್ತಿಕ ಜೀವನ ಮತ್ತು ಹಣಕಾಸಿನ ವಿಚಾರಗಳಲ್ಲಿ ಹಸ್ತಕ್ಷೇಪ ಮಾಡುವ BJP ನಾಯಕರ ನಡೆ ಅನುಚಿತ ಎಂದು ಪರೋಕ್ಷವಾಗಿ ತಿಳಿಸಿದ್ದಾರೆ. ವಾಚ್ ವಿವಾದ ಮುಂದಿನ ದಿನಗಳಲ್ಲಿ ಮತ್ತಷ್ಟು ರಾಜಕೀಯ ಬಿಸಿ ಹುಟ್ಟಿಸಲಿದೆ ಎಂದು ಹೇಳಲಾಗುತ್ತಿದೆ.








