Belagavi : ರೈತ ಹೋರಾಟಗಾರರ ಮನವೊಲಿಸಿದ ಡಿಕೆಶಿ , ಉಪವಾಸ ಸತ್ಯಾಗ್ರಹ ವಾಪಸ್….
ಬೆಳಗಾವಿ : ಬೆಳಗಾವಿ ಎಪಿಎಂಸಿ ಆವರಣದಲ್ಲಿ ನಡೆಯುತ್ತಿರುವ ಪ್ರತಿಭಟನಾ ಸ್ಥಳಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಭೇಟಿ ನೀಡಿ ಹೋರಾಟಗಾರರ ಮನವೊಲಿಸುಲ್ಲಿ ಯಶಸ್ವಿಯಾಗಿದ್ದಾರೆ.. ಇದೀಗ ಹೋರಾಟಗಾರರು ಅನಿರ್ದಿಷ್ಟಾವಧಿ ಹೋರಾಟ ಮುಂದುವರೆಸಿ ಉಪವಾಸ ಸತ್ಯಾಗ್ರಹ ವಾಪಸ್ ಪಡೆದಿದ್ದಾರೆ…
ಖಾಸಗಿ ಮಾರುಕಟ್ಟೆ ಬಂದ್ ಮಾಡುವಂತೆ ನಡೆಸುತ್ತಿರುವ ಹೋರಾಟಕ್ಕೆ ಕಾಂಗ್ರೆಸ್ ನ ಬೆಂಬಲವಿದೆ. ಎಪಿಎಂಸಿ ಕಾಯ್ದೆ ರೈತರ ವಿರೋಧಿ ಆಗಿದೆ ಎಂದು ಎಪಿಎಂಸಿ ಉಳಿವಿಗಾಗಿ ರೈತರು, ವ್ಯಾಪಾರಸ್ಥರ ಹೋರಾಟಕ್ಕೆ ಕಾಂಗ್ರೆಸ್ ಬೆಂಬಲ ಸೂಚಸಿದೆ.. ಈ ವೇಳೆ ಡಿಕೆಶಿ ಉಪವಾಸ ನಿರತ ರೈತರಾದ ಸಿದ್ದಗೌಡ ಮೋದಗಿಗೆ ಎಳನೀರು ಕುಡಿಸಿದ್ದಾರೆ… ಈ ಮೂಲಕ 6ನೇ ದಿನಕ್ಕೆ ಉಪವಾಸ ಸತ್ಯಾಗ್ರಹ ಅಂತ್ಯ ಕಂಡಿದೆ..










