Politics : ಗೃಹ ಮಂತ್ರಿಗಳು ಅಸಮರ್ಥರು : ಡಿಕೆಶಿ
ತುಮಕೂರು : ಶಿವಮೊಗ್ಗ ಪೊಲೀಸರ ವಿರುದ್ದ ಗೃಹ ಸಚಿವರಿಂದ ತನಿಖೆ ನಿರ್ದೇಶನ ವಿಚಾರವಾಗಿ ತಿಪಟೂರಿನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.
ಗೃಹ ಮಂತ್ರಿಗಳು ಅಸಮರ್ಥರು. ಅವರ ಜಿಲ್ಲೆಯಲ್ಲಿ ಪೊಲೀಸರು ಸರಿಯಾಗಿ ಕೆಲಸ ಮಾಡುತ್ತಿಲ್ಲಾ ಅಂತಾ ಅವರೇ ಒಪ್ಪಿಕೊಂಡಿದ್ದಾರೆ.
ಇದನ್ನ ನಾನು ಅಭಿನಂದಿಸ್ತೇನೆ ಎಂದು ವಾಗ್ದಾಳಿ ನಡೆಸಿದ್ದಾರೆ..
ಅಲ್ಲದೇ ಭಜರಂಗದಳ ಕಾರ್ಯಕರ್ತನ ಹತ್ಯೆ ಪ್ರಕರಣದ ತನಿಖೆ ನಮ್ಮವರ ಕೈಯಲ್ಲಿ ಆಗೋದಿಲ್ಲಾ.
ಎನ್‌ಡಿಎ ತನಿಖೆ ಮಾಡಬೇಕು ಅಂತಾ ಈಶ್ವರಪ್ಪ ಹೇಳಿದ್ದಾರೆ.. ಹಾಗಾದ್ರೆ ಪೊಲೀಸರು ಪರಿಣಾಮಕಾರಿಯಾಗಿಲ್ಲಾ ಎಂದು ಆಯ್ತಲ್ಲಾ..
ರಾಜ್ಯದಲ್ಲಿ ಲಾ ಅಂಡ್ ಆರ್ಡರ್ ಸಮಸ್ಯೆ ಇದೆ ಎಂದು ಈ ಇಬ್ಬರು ಸಚಿವರ ಹೇಳಿಕೆಯೇ ಸಾಕ್ಷಿ ಎಂದಿದ್ದಾರೆ..
ಇನ್ನೂ ಮುಖ್ಯಮಂತ್ರಿಗಳು ಕೂಡಲೇ ಇಬ್ಬರು ಸಚಿವರನ್ನ ವಜಾ ಮಾಡಬೇಕು..
ಇಲ್ಲಾ ರಾಜ್ಯಪಾಲರು ಈ ಸರ್ಕಾರವನ್ನ ವಜಾ ಮಾಡಬೇಕು ಎಂದು ಗ್ರಹಿಸಿದ್ದಾರೆ.








