ತುಮಕೂರು : ನಾವು ಮುಂದೆ ರಾಜ್ಯಕ್ಕೆ ಅಭಿವೃದ್ದಿ ಸರ್ಕಾರ ಕೊಡುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ (DK Shivakumara) ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇಂದು ಶಿರಾದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಟಿ.ಬಿ ಜಯಚಂದ್ರ ಅವರು ನಾಮಪತ್ರ ಸಲ್ಲಿಕೆ ಮಾಡಿದರು. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ.ಶಿವಕುಮಾರ್(DK Shivakumara), ಶಿರಾ ಜನರ ಉತ್ಸಾಹ ಫಲಿತಾಂಶ ಏನಾಗುತ್ತದೆ ಎಂಬುದನ್ನು ತೋರಿಸುತ್ತದೆ.
ಅನುಭವಿ ಟಿ.ಬಿ ಜಯಚಂದ್ರ ಅವರನ್ನು ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿದ್ದೇವೆ. ಅವರು ಅಧಿಕಾರದಲ್ಲಿದ್ದಾಗ 2500 ಕೋಟಿ ಅನುದಾನ ತಂದು ಅಭಿವೃದ್ದಿ ಗುಡ್ಡೆಗಳನ್ನೇ ನಿರ್ಮಿಸಿದ್ದಾರೆ.
ಇದನ್ನೂ ಓದಿ : ಕುಸುಮಾ ವಿರುದ್ಧ ದೂರು : ಇದು ಬಿಜೆಪಿ ಸರ್ಕಾರದ ದುರಹಂಕಾರ ನಡೆ ಎಂದ ಸಿದ್ದು
ಈ ಚುನಾವಣೆಯನ್ನು ನಾವ್ಯಾರು ಬಯಸಿರಲಿಲ್ಲ. ಸತ್ಯನಾರಾಯಣ್ ಅವರ ಕೊನೆ ಚುನಾವಣೆ ಎಂದು ಅವರನ್ನು ಗೆಲ್ಲಿಸಿದ್ರು.

ಇಲ್ಲಿ ನಮ್ಮ ಅಭ್ಯರ್ಥಿಯನ್ನು ಗೆಲ್ಲಿಸಿ ಸರ್ಕಾರದ ಆಡಳಿತ ಸರಿಯಿಲ್ಲ ಎನ್ನುವ ಸಂದೇಶ ನೀಡಬೇಕು ಎಂದು ಕಾರ್ಯಕರ್ತರಿಗೆ ಕರೆಕೊಟ್ಟರು.
ಇದೇ ವೇಳೆ ನಮ್ಮ ಅಭ್ಯರ್ಥಿ ಟಿ.ಬಿ ಜಯಚಂದ್ರ ವಿದ್ಯಾವಂತ, ಬುದ್ಧಿವಂತರಿದ್ದಾರೆ. ನಾವು ಮುಂದೆ ರಾಜ್ಯಕ್ಕೆ ಅಭಿವೃದ್ದಿ ಸರ್ಕಾರ ಕೊಡುತ್ತೇವೆ. ನುಡಿದಂತೆ ನಡೆದಿದ್ದೇವೆ ಎಂದು ತಿಳಿಸಿದರು.
ಇದನ್ನೂ ಓದಿ : ಜೆಡಿಎಸ್ ಪಕ್ಷವನ್ನು ಸಮಾಧಿ ಮಾಡಲು ಸಿದ್ದರಾಮಯ್ಯ ಜತೆ ಡಿಕೆಶಿ ಕೈ ಜೋಡಿಸಿದ್ದಾರೆ : ಹೆಚ್ ಡಿಕೆ
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel









