DK Sivakumar | ಜನರಿಗಾಗಿ ಎಲ್ಲಾ ತ್ಯಾಗಕ್ಕೂ ನಾವು ಸಿದ್ಧ
ಮೈಸೂರು : ಜನರಿಗೋಸ್ಕರ ಈ ಯಾತ್ರೆ ಮಾಡುತ್ತಿದ್ದು, ಜನರಿಗಾಗಿ ಎಲ್ಲಾ ತ್ಯಾಗಕ್ಕೂ ನಾವು ಸಿದ್ಧರಿದ್ದೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ.ಶಿವಕುಮಾರ್, ಭಾರತ್ ಜೋಡೋ ಯಾತ್ರೆಗೆ ಅಭೂತಪೂರ್ವ ಯಶಸ್ಸು ದೊರೆತಿದೆ.
ಯಾತ್ರೆಯ ಯಶಸ್ಸು ಕಂಡು ಬಿಜೆಪಿಗರು ಹತಾಶರಾಗಿದ್ದಾರೆ.
ಬಿಜೆಪಿಯ ವಿರೋಧಿ ಅಲೆ ಜೋಡೋ ಯಾತ್ರೆಯನ್ನು ಯಶಸ್ವಿಗೊಳಿಸುತ್ತದೆ ಎಂದರು.
ಇನ್ನು ಯುವಕರು, ರೈತರು ಹೆಚ್ಚಿನ ಸಂಖ್ಯೆಯಲ್ಲಿ ಜೋಡೊ ಯಾತ್ರೆಯಲ್ಲಿ ಭಾಗಿಯಾಗುತ್ತಿದ್ದಾರೆ.
ಮಳೆ ಬಿಸಿಲು ಚಳಿ ಲೆಕ್ಕಿಸದೇ ಯಾತ್ರೆ ಮುನ್ನುಗ್ಗುತ್ತಿದೆ. ಜನರಿಗೋಸ್ಕರ ಈ ಯಾತ್ರೆ ಮಾಡುತ್ತಿದ್ದು, ಜನರಿಗಾಗಿ ಎಲ್ಲಾ ತ್ಯಾಗಕ್ಕೂ ನಾವು ಸಿದ್ಧರಿದ್ದೇವೆ.
ಯಂಗ್ ಇಂಡಿಯಾಗೆ ನಾವು ಬೆಂಬಲಿಸಿದ್ದೇವೆ.
ಭಾರತ್ ಜೋಡೋ ಯಾತ್ರೆ ಜಿಲ್ಲೆ, ರಾಜ್ಯ ಮಾತ್ರವಲ್ಲದೇ ಇಡೀ ದೇಶದಾದ್ಯಂತ ಸಂಚಲನ ಮೂಡಿಸಿದೆ ಎಂದು ಡಿಕೆಶಿ ಹೇಳಿದ್ದಾರೆ.